ಜಿಲ್ಲೆ

ಬಿರುಗಾಳಿ ಮಳೆಗೆ ತೋಟಗಾರಿಕೆ ಬೆಳೆ ನಷ್ಟ

Chitradurga

ಚಳ್ಳಕೆರೆ: ತಾಲೂಕಿನಲ್ಲಿ ಬುಧವಾರ ಒಂದು ಗಂಟೆ ಕಾಲ ಸುರಿದ ಗುಡುಗು, ಬಿರುಗಾಳಿ ಸಹಿತ ಮಳೆಗೆ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಟಿ.ಎನ್.ಕೋಟೆ ಗ್ರಾಮದ ರೈತರಾದ ಓಬಣ್ಣ, ಬಸವರಾಜ ಎಂಬುವರಿಗೆ ಸೇರಿದ 4.5 ಎಕರೆ ಎಲೆಬಳ್ಳಿ ನೆಲ ಕಚ್ಚಿದೆ. ಹೊಟ್ಟೆಪ್ಪನಹಳ್ಳಿ ಜಮೀನಿಗೆ ನೀರು ನುಗ್ಗಿ ಈರುಳ್ಳಿ ಬೆಳೆ ಹಾಳಾಗಿದೆ.

ಮಳೆಯ ಪ್ರಮಾಣ: ತಾಲೂಕಿನಲ್ಲಿ ದೇವರಮರಿಕುಂಟೆ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಮಿ.ಮೀ. ಟಿ.ಎನ್.ಕೋಟೆ 12, ಬೆಳೆಗೆರೆ 8, ದೊಡ್ಡಚೆಲ್ಲೂರು 4, ಸೊಮಗುದ್ದು 49, ನಗರಂಗೆರೆ 26, ಗೋಪನಹಳ್ಳಿ 28, ಮೀರಸಾಬಿಹಳ್ಳಿ 01, ಸಿದ್ದೇಶ್ವರನದುರ್ಗದಲ್ಲಿ 04 ಮಿ.ಮೀ. ಮಳೆಯಾಗಿದೆ.