ಜಿಲ್ಲೆ

ಶಾರ್ಟ್‌ಸಕೀಟ್‌ನಿಂದ ಮೇವಿನ ಬಣವೆ ಭಸ್ಮ

Chitradurga

ಚಳ್ಳಕೆರೆ: ಶಾರ್ಟ್‌ಸಕೀಟ್‌ನಿಂದಾಗಿ ತಾಲೂಕಿನ ಪಗಡಲಬಂಡೆ ಹೊರವಲಯದಲ್ಲಿ ಸಂಗ್ರಹಿಸಿಟ್ಟಿದ್ದ ಕಡ್ಲೆಬಳ್ಳಿ ಮತ್ತು ಬಿಳಿಜೋಳದ ಸೊಪ್ಪೆ ಹಾಗೂ ಎರಡು ಕುರಿ ಮರಿ ಸಂಪೂರ್ಣ ಸುಟ್ಟುಹೋಗಿದೆ. ಶಂಕ್ರಪ್ಪರ ತಿಮ್ಮಣ್ಣ ಎಂಬುವರಿಗೆ ಸೇರಿದ್ದು, ಬಣವೆ ಮೇಲ್ಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.