ಜಿಲ್ಲೆ

ಸಿಎಂ ಪರಿಹಾರ ನಿಧಿಗೆ ಚಾಲಕ ನೆರವು

Chitradurga

ಚಳ್ಳಕೆರೆ: ಕೋವಿಡ್-19 ವೈರಸ್ ನಿಯಂತ್ರಣಕ್ಕೆ ಸ್ಥಾಪಿಸಿರುವ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಾಲೂಕು ಕಚೇರಿ ವಾಹನ ಚಾಲಕ ಎನ್.ಗಣೇಶ್ ಅವರು 25 ಸಾವಿರ ರೂ. ಮೌಲ್ಯದ ಚೆಕ್‌ನ್ನು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರಿಗೆ ನೀಡಿದ್ದಾರೆ.

ಲಾಕ್‌ಡೌನ್ ಜಾರಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಅಲೆಮಾರಿ ಸಮುದಾಯಗಳ ನೆರವಿಗೆ ಹಣ ಬಳಸಿಕೊಳ್ಳಬೇಕೆಂದು ಡಿಸಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಾರ್ಗಿಲ್ ಪರಿಹಾರ ನಿಧಿಗೂ ಒಂದು ತಿಂಗಳ ವೇತನವನ್ನು ಗಣೇಶ್ ಈ ಹಿಂದೆ ನೀಡಿದ್ದರು.