ಜಿಲ್ಲೆ

ಕಾರ್ಮಿಕರಿಗೆ ಹಾಲು ವಿತರಣೆ

Chitradurga

ಚಳ್ಳಕೆರೆ: ನಗರದ ಎಪಿಎಂಸಿ ದಿನಗೂಲಿ ಕಾರ್ಮಿಕರಿಗೆ ಶುಕ್ರವಾರ ಶಾಸಕ ಟಿ. ರಘುಮೂರ್ತಿ ಕೆಎಂಎಫ್ ವತಿಯಿಂದ ಉಚಿತವಾಗಿ ಹಾಲು ವಿತರಿಸಿ ಮಾತನಾಡಿದರು.

ಎಪಿಎಂಸಿ ಸೇರಿದಂತೆ ಈ ಭಾಗದ ಕೂಲಿ ಕಾರ್ಮಿಕರು ಮತ್ತು ಅವರ ಕುಟುಂಬದ ಅನುಕೂಲಕ್ಕಾಗಿ ಸಮೀಪದ ಚೇಂಬರ್ ಆಫ್ ಕಾಮರ್ಸ್ ಕಲ್ಯಾಣ ಮಂಟಪದಲ್ಲಿ ಆರೋಗ್ಯ ಚಿಕಿತ್ಸೆ ಕೇಂದ್ರ ತೆರೆಯಲಾಗಿದೆ. ಜ್ವರ, ಕೆಮ್ಮು ಇತ್ಯಾದಿ ಸಮಸ್ಯೆಯಾದರೆ ಭಯ ಪಡದೆ ವೈದ್ಯರ ಸಲಹೆ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಬಳಿಕ ದೊಡ್ಡೇರಿ, ಗೋಪನಹಳ್ಳಿ, ಬುಡ್ನಟ್ಟಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ಟಾಸ್ಕ್‌ಫೋರ್ಸ್ ನಿಯಮದಂತೆ ಪಂಚಾಯಿತಿ ಹಂತದಲ್ಲಿ ಕರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ, ಎಪಿಎಂಸಿ ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ, ವೃತ್ತ ನಿರೀಕ್ಷಕ ಈ. ಆನಂದ್, ಕೆಎಂಎಫ್ ನಿರ್ದೇಶಕ ಸಿ. ವೀರಭದ್ರ ಬಾಬು ಇತರರಿದ್ದರು.