ಜಿಲ್ಲೆ

ಚಿತ್ತರಂಜನ್ ಬೋಳಾರ್ ಅವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

Mangaluru - Hariprasad Rai



ಮಂಗಳೂರು : ಪತ್ರಕರ್ತರ ವೇದಿಕೆ ಬೆಂಗಳೂರು, ಡಾ. ಸಿದ್ದಯ್ಯ ಪುರಾಣಿಕ್ ಸ್ಮಾರಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನ ಕನ್ನಡ ಭವನದಲ್ಲಿ ನಡೆದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಸಮಾರಂಭದಲ್ಲಿ ಸಹಕಾರ ಕ್ಷೇತ್ರದ ಸಾಧನೆಗಾಗಿ ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ
ಚಿತ್ತರಂಜನ್ ಬೋಳಾರ್ ಅವರು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದರು.
ನಿವೃತ್ತ ಡಿಸಿಪಿ ಬಸವರಾಜ್ ಮಾಲಗತ್ತಿ ಪ್ರಶಸ್ತಿ ವಿತರಿಸಿದರು. ಹಿರಿಯ ನ್ಯಾಯವಾದಿ ಕೆ.ಎಲ್ ಕುಂದರಗಿ ಅಧ್ಯಕ್ಷತೆ ವಹಿಸಿದ್ದರು.
ವಿ.ಎಸ್. ಕೃಷ್ಣ, ಹಿರಿಯ ಪತ್ರಕರ್ತರಾದ ಜಾಣಗೆರೆ ವೆಂಕಟರಾಮಯ್ಯ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳಿ, ಕರ್ನಾಟಕ
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಡಾ. ಸಿದ್ದಯ್ಯ ಪುರಾಣಿಕ್ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ
ಸಂಗಮೇಶ್ ಬಾದವಾಡಗಿ, ಕರ್ನಾಟಕ ರಕ್ಷಣಾ ವೇದಿಕೆ, ಜನಸೇನೆ ಅಧ್ಯಕ್ಷ ಗೋಪಾಲಗೌಡ ಆರ್.ಪಿ., ಪತ್ರಕರ್ತರಾದ
ಶ್ರೀಕಾಂತ್, ಎಸ್.ಕೆ ರಾಜು, ವೈ.ಮಂಜುನಾಥ್, ಸಾಹಿತಿಗಳಾದ ಬಿ.ಎಸ್.ಮಾಲಿಪಾಟೀಲ್ ಕಲಬುರಗಿ., ಡಾ.ಬಿ.ಆರ್. ಹಿರೇಮಠ, ಮಹೇಶ್ ಸೂರ್ವೆ ಉಪಸ್ಥಿತರಿದ್ದರು.