ಜಿಲ್ಲೆ

ರಾಜ್ಯ ಮಟ್ಟಕ್ಕೆ ಚಿತ್ತಾರ ಪ್ರೌಢಶಾಲೆ

ಹೊನ್ನಾವರ: ತಾಲೂಕಿನ ಚಿತ್ತಾರ ಪ್ರೌಢಶಾಲೆಯ ವಿದ್ಯಾರ್ಥಿಗಳ ‘ಉತ್ತರ ಕನ್ನಡ ಜನಪದ ವೈಭವ’ ಎಂಬ ಜನಪದ ರೂಪಕವು ಕುಮಟಾದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಜನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ಶಿಕ್ಷಕ ಪ್ರಕಾಶ ನಾಯ್ಕ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಾದ ಪ್ರಜ್ಞಾ ನಾಯ್ಕ, ಜನನಿ ನಾಯ್ಕ, ಐಶ್ವರ್ಯಾ ನಾಯ್ಕ, ಯೋಗೇಶ ಗೌಡ, ವಿಜಯ ನಾಯ್ಕ, ವಿಷ್ಣು ನಾಯ್ಕ ಈ ರೂಪಕದಲ್ಲಿ ಅಭಿನಯಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಜನಪದ ಕಲೆಗಳಾದ ಯಕ್ಷಗಾನ, ದೈವ ಕಳಸ ದರ್ಶನ, ಸುಗ್ಗಿ ಕುಣಿತ, ತಾರ್ಲೆ ಕುಣಿತಗಳ ಮೂಲಕ ಪರಿಸರ ಜಾಗೃತಿ ಸಾರುವ ಕಥಾವಸ್ತುವನ್ನು ಒಳಗೊಂಡಿದೆ.