ಜಿಲ್ಲೆ

ಚಿತ್ತಾಪುರ; ರೈತರ ಸಮಸ್ಯೆಗೆ ಧ್ವನಿಯಾಗಿ ಸಂಘ ಕಾರ್ಯ

ಚಿತ್ತಾಪುರ: ನವ ಕರ್ನಾಟಕ ರೈತ ಸಂಘ ಅನ್ನದಾತರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಅಲ್ಲದೆ ಸರ್ಕಾರದ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸುತ್ತಿದೆ ಎಂದು ಸಂಘದ ಅಧ್ಯಕ್ಷ ದಯಾನಂದ ಪಾಟೀಲ್ ತಿಳಿಸಿದರು.

ಮಯೂರ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಘದ ತಾಲೂಕು ಘಟಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಂಘ ಅಸ್ತಿತ್ವಕ್ಕೆ ಬಂದಿದೆ. ಎಲ್ಲೆಡೆ ಸಂಘಟನೆಯೊAದಿಗೆ ರೈತರ ಎಳ್ಗೆಗೆ ಶ್ರಮಿಸಲಾಗುತ್ತಿದೆ. ತಾಲೂಕು ಘಟಕದ ಪದಾಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಜಿಲ್ಲಾಧ್ಯಕ್ಷ ಸುರೇಶ ಗುತ್ತೇದಾರ್, ಪ್ರಮುಖರಾದ ಕಾಶೀನಾಥ ಗುತ್ತೇದಾರ್, ಉದಯಕುಮಾರ ಸಾಗರ, ಬಸವರಾಜ ಕೋರಿ, ಜಗದೇವ ಕುಂಬಾರ, ಶಿವಶರಣಪ್ಪ ಸಾಹು, ಮಹಿಪಾಲ ಮೂಲಿಮನಿ ಇತರರಿದ್ದರು.