ಜಿಲ್ಲೆ

Bye Election ಚಿತ್ತಾಕುಲಾ ಗ್ರಾಪಂಗೆ 350 ಮತ ಪಡೆದ ಸುಭಾಷ ದುರ್ಗೇಕರ್ ಆಯ್ಕೆ

Uttara Kannada - Subash Hegde

ಕಾರವಾರ:ಇಲ್ಲಿನ ಚಿತ್ತಾಕುಲಾ ಗ್ರಾಮ ಪಂಚಾಯಿತಿ 2 ನೇ ವಾರ್ಡ್ (ಸೀಬರ್ಡ್ ಕಾಲನಿ) ಸದಸ್ಯ ಸ್ಥಾನಕ್ಕೆ ನಡೆದ Bye Election ಉಪ  ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸುಭಾಷ ದುರ್ಗೇಕರ್ ಮಂಗಳವಾರ ಚುನಾಯಿತರಾದರು. ಗ್ರಾಮ ಪಂಚಾಯಿತಿ ಅಧ್ಯಕ್ಷ, ಉತ್ತರ ಕನ್ನಡ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಅವರು ಕೆಲ ತಿಂಗಳ ಹಿಂದೆ  ಹೃದಯಾಘಾತದಿಂದ ನಿಧನರಾಗಿದ್ದರು. ಅವರಿಂದ ಖಾಲಿಯಾದ ಗ್ರಾಪಂ ಸದಸ್ಯ ಸ್ಥಾನ ತುಂಬುವ ಸಲುವಾಗಿ ಉಪ ಚುನಾವಣೆ ನಡೆದಿತ್ತು.

Bye Election

ಉದಯ ಬಿಣಗೆ, ಉಮೇಶ ತಾಂಡೇಲ, ಭರತ ಖಾರ್ವಿ, ಸುಭಾಷ ದುರ್ಗೇಕರ್ ಕಣದಲ್ಲಿದ್ದರು. ನ.23 ರಂದು ಮತದಾನ ನಡೆದಿತ್ತು. ಒಟ್ಟು 743 ಮತಗಳು ಚಲಾವಣೆಯಾಗಿದ್ದವು. ಮಂಗಳವಾರ ಮತ ಎಣಿಕೆ ನಡೆಯಿತು. 13 ಮತಗಳು ತಿರಸ್ಕೃತವಾಗಿದ್ದು, 730 ಮತಗಳಲ್ಲಿ 350 ಮತ ಪಡೆದ ಸುಭಾಷ ದುರ್ಗೇಕರ್ ಚುನಾಯಿತರಾದರು. ಭರತ ಖಾರ್ವಿ 293 ಮತ ಪಡೆದು, ಅವರ ಸಮೀಪದ ಪ್ರತಿಸ್ಪರ್ಧಿಯಾಗಿದ್ದಾರೆ.