ಜಿಲ್ಲೆ

ಚಿತ್ರಾವತಿ ಜಲಾಶಯಕ್ಕೆ ಶ್ರೀರಾಮರೆಡ್ಡಿ ಹೆಸರಿಡಿ

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ ಚಿತ್ರಾವತಿ ಜಲಾಶಯಕ್ಕೆ ಮಾಜಿ ಸಿಎಂ ಎಸ್​.ಎಂ.ಕೃಷ್ಣ ಅವರ ಹೆಸರಿಡುವ ಪ್ರಸ್ತಾವ ವಿರೋಧಿಸಿ ಬಾಗೇಪಲ್ಲಿ ತಾಲೂಕು ಚಿತ್ರಾವತಿ ಹೋರಾಟ ಸಮಿತಿ ನೇತೃತ್ವದಲ್ಲಿ ಆ.2ರಂದು ಶನಿವಾರ ಪುರಸಭೆ ಮುಂಭಾಗದಲ್ಲಿ ಬೃಹತ್​ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು. ಬಾಗೇಪಲ್ಲಿ ಪಟ್ಟಣದ ಸುಂದರಯ್ಯ ಭವನದಲ್ಲಿ ವಿವಿಧ ಸಂಟನೆಗಳ ಪದಾಧಿಕಾರಿಗಳು, ಮುಖಂಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚಿತ್ರಾವತಿ ಜಲಾಶಯವು ಬಾಗೇಪಲ್ಲಿ ತಾಲೂಕಿನೊಂದಿಗೆ ಭಾವನಾತ್ಮಕ ಬೆಸುಗೆ ಹೊಂದಿದ್ದು, ಚಿತ್ರಾವತಿ ಜಲಾಶಯ ಎಂದರೆ ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಎಂದರೆ ಚಿತ್ರಾವತಿ ಜಲಾಶಯ ಎಂಬ ಭಾವನೆ ೇತ್ರದ ಜನರಲ್ಲಿದೆ. ಜಿ.ವಿ.ಶ್ರೀರಾಮರೆಡ್ಡಿ ಅವರು ಎರಡು ಬಾರಿ ಶಾಸಕರಾಗಿ, ಅವರ ದೂರದೃಷ್ಟಿ ಹಾಗೂ ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿಯ ಹೋರಾಟದಿಂದ ಡ್ಯಾಂ ಸ್ಥಾಪನೆಗೊಂಡಿದೆ. ಹಾಗಾಗಿ ಜಲಾಶಯದ ಹೆಸರು ಬದಲಾಯಿಸುವುದಾದರೆ ಚಿತ್ರಾವತಿ ಅಣೆಕಟ್ಟು ನಿರ್ಮಾಣಕ್ಕೆ ಕಾರಣಕರ್ತರಾದವರ ಹೆಸರು ಇಡಬೇಕು. ಅದುಬಿಟ್ಟು ಎಸ್​.ಎಂ.ಕೃಷ್ಣ ಜಲಾಶಯ ಎಂದು ನಾಮಕರಣ ಮಾಡಲು ಹೊರಟಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ರೈತ ಸಂ, ಹಸಿರು ಸೇನೆ ರಾಜ್ಯ ಸಮಿತಿ ಸದಸ್ಯ ಟಿ.ಲ್ಮ ನಾರಾಯಣರೆಡ್ಡಿ ಮಾತನಾಡಿ, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರು ಅಭಿವೃದ್ಧಿ ಮಾಡಿದ ಕಾಮಗಾರಿಗಳಿಗೆ ತಮ್ಮ ಹೆಸರನ್ನೇ ಇಡಬಹುದಿತ್ತು. ಆದರೆ ಶ್ರೀರಾಮರೆಡ್ಡಿ ಅವರು ಎಂದೂ ಹಾಗೆ ಮಾಡಲಿಲ್ಲ. ಆದರೆ ಶಾಸಕ ಸುಬ್ಬಾರೆಡ್ಡಿ ಅವರು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರನ್ನು ಜನರಿಂದ ದೂರಮಾಡಿಸಲು ಜಲಾಶಯ ಹೆಸರನ್ನು ಬದಲಾಯಿಸಲು ಮುಂದಾಗಿದ್ದಾರೆ ಎಂದು ದೂರಿದರು. ಮುಖಂಡರಾದ ಲಕ್ಷ$್ಮಣ ರೆಡ್ಡಿ, ಲಕ್ಷಿ$್ಮನಾರಾಯಣರೆಡ್ಡಿ, ಜಿ.ಕೃಷ್ಣಪ್ಪ, ಮದಕರಿ ಸುರೇಶ್​, ಶ್ರೀನಿವಾಸರೆಡ್ಡಿ, ವೆಂಕಟರಾಮಪ್ಪ, ಅರುಣ್​ಕುಮಾರ್​, ರಾಮರೆಡ್ಡಿ, ಮುಜಾಮುಲ್​, ಇಮ್ರಾನ್​, ನರಸಿಂಹರೆಡ್ಡಿ, ವೆಂಕಟರಾಮರೆಡ್ಡಿ ಇದ್ದರು.

ಶ್ರೀರಾಮರೆಡ್ಡಿ ಅವರ ಹೆಸರು ಇಡದಿದ್ದರೆ ಚಿತ್ರಾವತಿ ಜಲಾಶಯ ಹೆಸರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಹಮ್ಮಿಕೊಂಡಿರುವ ಪಾತೀತ ಪ್ರತಿಭಟನೆಗೆ ಸಂಟನೆಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮುನಿವೆಂಕಟಪ್ಪ ಮನವಿ ಮಾಡಿದರು.

ಈಗಿರುವ ಹೆಸರನ್ನೇ ಮುಂದುವರಿಸಿ