ಜಿಲ್ಲೆ

ವರುಣಾರ್ಭಟಕ್ಕೆ ಹುಬ್ಬಳ್ಳಿಯ ಚಿತ್ರಲಿಂಗೇಶ್ವರ ಲಿಂಗು ಜಲಾವೃತ

ಹುಬ್ಬಳ್ಳಿ: ಬಿಸಿಲಿನಿಂದ ಕಂಗೆಟ್ಟಿದ್ದ ಹುಬ್ಬಳ್ಳಿ- ಧಾರವಾಡ ಅವಳಿನಗರದ ಜನತೆಗೆ ಶನಿವಾರ ಸುರಿದ ಮಳೆ ಸಂತಸ ತಂದಿತು. ಮಧ್ಯಾಹ್ನ ಆರಂಭವಾದ ಮಳೆ ಸಂಜೆ 6 ಗಂಟೆಯವರೆಗೂ ಸುರಿಯಿತು. ತುಸು ಬಿಡುವು ನೀಡಿದ ವರುಣ ಮತ್ತೆ 8 ಗಂಟೆಗೆ ತನ್ನ ಆರ್ಭಟ ಮುಂದುವರಿಸಿತು.

ಮಳೆಯಿಂದಾಗಿ ಹುಬ್ಬಳ್ಳಿ ನ್ಯೂ ಕಾಟನ್ ಮಾರ್ಕೆಟ್, ದುರ್ಗದಬೈಲ್, ವಿದ್ಯಾನಗರದ ರಸ್ತೆಗಳು ಜಲಾವೃತವಾಗಿದ್ದವು. ನ್ಯೂ ಕಾಟನ್ ಮಾರ್ಕೆಟ್​ನ ಶ್ರೀ ವೀರಾಂಜನೇಯ ದೇವಸ್ಥಾನದ ಆವರಣದೊಳಗಿರುವ ಶ್ರೀ ಚಿತ್ರಲಿಂಗೇಶ್ವರ ಲಿಂಗು ಮತ್ತು ಗಣೇಶನ ಮೂರ್ತಿ ಶನಿವಾರ ಸುರಿದ ಮಳೆಯಿಂದ ಜಲಾವೃತವಾಗಿತ್ತು.