ಚಿತ್ರದುರ್ಗ: ಎಸ್ಐಆರ್ ರದ್ದುಪಡಿಸಿ, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ e್ಞÁನೇಶ್ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿ¸್ಟï ಪಕ್ಷದ ಜಿ¯್ಲÁ ಸಮಿತಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಎಸ್ಐಆರ್ ವಿರುದ್ಧ ಽಕ್ಕಾರ ಕೂಗಿದರು.
ಪಕ್ಷದ ಜಿ¯್ಲÁ ಕಾರ್ಯದರ್ಶಿ ಜಿ.ಸಿ. ಸುರೇಶ್ಬಾಬು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕರು e್ಞÁನೇಶ್ಕುಮಾರ್ ಅವರಿಗೆ ಕುಮ್ಮಕ್ಕು ನೀಡಿ ಎಸ್ಐಆರ್ ಮೂಲಕ ನೈಜ ಮತದಾರರನ್ನು ಮತಪಟ್ಟಿಯಿಂದ ಹೊರಗಿಡಲು ಯತ್ನಿಸಿz್ದÁರೆ. ಮತದಾನದ ಹಕ್ಕು ಕಳೆದುಕೊಂಡರೆ ದಲಿತರು, ಶೋಷಿತರು, ಅಲ್ಪಸಂಖ್ಯಾತರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಸಹ ಕಾರ್ಯದರ್ಶಿ ಜಾ-Àರ್ ಮಾತನಾಡಿ, ಎಸ್ಐಆರ್ ಮೂಲಕ ರಾಜ್ಯದಲ್ಲೇ ೯೯.೮ ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಅವೈe್ಞÁನಿಕ. ಇದರಿಂದ ಭಾರತದ ಮೂಲ ನಿವಾಸಿಗಳ ಹಕ್ಕಿಗೆ ಚ್ಯುತಿಯಾಗಿದೆ. ಕ್ರಮೇಣ ಆಧಾರ್, ರೇಷನ್ ಕಾರ್ಡ್ ಕಸಿದುಕೊಳ್ಳುವ ಹುನ್ನಾರವಿದು. ಎಚ್ಚೆತ್ತುಕೊಂಡು ಹೋರಾಟ ನಡೆಸದಿದ್ದರೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.
ತಾಲೂಕು ಕಾರ್ಯದರ್ಶಿ ಟಿ.ಆರ್. ಉಮಾಪತಿ ಮಾತನಾಡಿ, -Áರಂ ನಂ. ೭ ನೀಡಿ ಕೆಲವರು ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದಲೇ ಹೊರಗಿರಿಸುವ ಕುತಂತ್ರ ನಡೆಸಿದ್ದಾರೆ. ಅಂದಾಜು ೧ ಕೋಟಿ ಮತದಾರರು ರಾಜ್ಯದಲ್ಲಿ ತಮ್ಮ ಹಕ್ಕಿನಿಂದ ವಂಚಿತರಾಗಿz್ದÁರೆ. ಹೀಗಾಗಿ ಎಸ್ಐಆರ್ನ ಪ್ರಜಾಪ್ರಭುತ್ವ ವಿರೋಽ ನೀತಿ ಖಂಡಿಸಿ ಹೊಸದಿಲ್ಲಿಯಲ್ಲಿ ನ. ೧ರಂದು ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಹನುಮಂತಪ್ಪ, ಈ. ಸತ್ಯಕೀರ್ತಿ, ಬಿ. ಬಸವರಾಜಪ್ಪ, ಎನ್.ಸಿ. ಕುಮಾರಸ್ವಾಮಿ, ಪೆನ್ನಯ್ಯ, ಗಿರೀಶ್, ಜಮುನಾಬಾಯಿ ಇತರರು ಇದ್ದರು.