ಚಿತ್ರದುರ್ಗದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಡಾ. ಬಸವರಾಜ್ ಮಾತನಾಡಿದರು. ಡಾ. ಅಭಿನವ್, ಮಾಲತೇಶ್ ಮುದ್ದಜ್ಜಿ, ಎಚ್.ಬಿ. ಪೂಜಾರ್ ಇತರರಿದ್ದರು. 
ಚಿತ್ರದುರ್ಗ

ಖಾಲಿ ಹುದ್ದೆ ಭರ್ತಿಯಾದರೆ ಕಾರ್ಯದೊತ್ತಡ ನಿವಾರಣೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ವೈದ್ಯಾಽಕಾರಿಗಳ ಸಂಘದ ಅಧ್ಯಕ್ಷ ಡಾ. ಬಸವರಾಜ್ ಹೇಳಿಕೆ
  • ಜನಸಂಖ್ಯೆಗೆ ಹೋಲಿಸಿದರೆ ವೈದ್ಯರ ಸಂಖ್ಯೆ ಕಡಿಮೆ
  • ಕಾರ್ಯದೊತ್ತಡ ಹೆಚ್ಚುತ್ತಲೇ ಇದೆ
ಚಿತ್ರದುರ್ಗ: ಖಾಲಿ ಹುದ್ದೆಗಳು ಭರ್ತಿಯಾಗದೆ ಕರ್ತವ್ಯನಿರತ ಅಽಕಾರಿಗಳ ಮೇಲೆ ಕಾರ್ಯದೊತ್ತಡ ಹೆಚ್ಚುತ್ತಲೇ ಇದೆ ಎಂದು ವೈದ್ಯಾಽ ಕಾರಿಗಳ ಸಂಘದ ಅಧ್ಯಕ್ಷ ಡಾ. ಬಸವರಾಜ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಗ್ಯ ಇಲಾಖೆಯ ವಿವಿಧ ವೃಂದಗಳ ಒಟ್ಟು ೩೬,೩೯೭ ಅಽಕಾರಿ, ನೌಕ ರರು ರಾಜ್ಯದ ೬ ಕೋಟಿ ಮಂದಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ, ಈಗಿರುವ ನೌಕರರ ಸಂಖ್ಯೆ, ವಯೋ ನಿವೃತ್ತಿ ಇನ್ನಿತರ ಕಾರಣಗಳಿಂದ ಪ್ರಸ್ತುತ ಜನಸಂಖ್ಯೆಗೆ ಹೋಲಿಸಿದರೆ ಕಡಿಮೆ ಇದೆ ಎಂದು ಹೇಳಿದರು.
ಈ ಸಮಸ್ಯೆ ನಡುವೆಯೂ ನೌಕರರು ಶಾಂತಿಯುತವಾಗಿ ತಮ್ಮ ಕಾರ್ಯ ನಿರ್ವಹಿಸಿಕೊಂಡು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ೧ ವರ್ಷದಿಂದ ಮನವಿ ಸಲ್ಲಿಸುತ್ತಿದ್ದೇವೆ. ನಿಯಮಗಳಲ್ಲಿ ಅವಕಾಶವಿದ್ದಾಗ್ಯೂ ಸೇವಾನಿರತ ವೈದ್ಯಾಽಕಾರಿಗಳ ಉನ್ನತ, ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ನೀಡದಿರುವ, ವರ್ಗಾವಣೆ ಕಾಯ್ದೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸದೆ ಅವೈಜ್ಞಾನಿಕವಾಗಿ ಕೌನ್ಸಿಲಿಂಗ್ ವರ್ಗಾವಣೆ ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ತಿಳಿಸಿದರು.
ಡಾ. ಅಭಿನವ್ ಮಾತನಾಡಿ, ಡಿಎಚ್‌ಒ ಆದವರೂ ಮತ್ತೆ ಪಿಎಚ್‌ಸಿಗಳಲ್ಲಿ ವೈದ್ಯಾಽಕಾರಿಯಾಗಿ ಕರ್ತವ್ಯ ನಿರ್ವಹಿಸುವಂತಹ ಸಮಸ್ಯೆ ಇಲಾಖೆಯಲ್ಲಿದೆ. ಇದು ಬದಲಾಗಬೇಕಿದೆ. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಔಷಧಗಳನ್ನು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಟಿಎಚ್‌ಒ ಡಾ.ಬಿ.ವಿ. ಗಿರೀಶ್, ಎಚ್.ಬಿ. ಪೂಜಾರ್ ಇತರರಿದ್ದರು.