ಚಿತ್ರದುರ್ಗದಲ್ಲಿ ಆರ್‌ಎಎಂಪಿ ಯೋಜನೆಯಡಿ ಗುರುವಾರ ಆಯೋಜಿಸಿದ್ದ ರ-ÀÅ್ತ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಆರ್. ಬಾಬು ಉದ್ಘಾಟಿಸಿದರು. ಬಿ.ಆರ್. ಗಣೇಶ್‌ರಾವ್, ಬಿ. ಆನಂದ, ತಿಮ್ಮಯ್ಯ, ಆರ್. ರಾಘವೇಂದ್ರ, ನಿಂಗಣ್ಣ ಎಸ್. ಬಿರಾದಾರ ಇತರರಿದ್ದರು. 
ಚಿತ್ರದುರ್ಗ

ಉದ್ಯಮ ಆರಂಭಿಸಲು ಇಚ್ಛಾಶಕ್ತಿ ಮುಖ್ಯ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಕೆಎಸ್‌ಎ-ï‌ಸಿ ಬೆಂಬಲ ನೀಡಲಿದೆ
  • ಪೂರ್ವ ಯೋಜನೆಯೊಂದಿಗೆ ಕೈಹಾಕುವುದು ಉತ್ತಮ
  • ಆರ್. ಬಾಬು ಸಲಹೆ
ಚಿತ್ರದುರ್ಗ: ಉದ್ಯಮ ಆರಂಭಿಸಲು ಇಚ್ಛಾಶಕ್ತಿ ಬಹಳ ಮುಖ್ಯ. ವಿ-Àಲತೆ, ಸ-Àಲತೆ ಎರಡನ್ನೂ ಸಮನಾಗಿ ಸ್ವೀಕರಿಸುವ ಮನಸ್ಸು ಹೊಂದಿರಬೇಕು. ಆಗಮಾತ್ರ ಈ ಕ್ಷೇತ್ರದಲ್ಲಿ ಮುನ್ನುಗ್ಗಲು ಸಾಧ್ಯ ಎಂದು ಕೆಎಸ್‌ಎ-ï‌ಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಆರ್. ಬಾಬು ಹೇಳಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಿAದ ಎಂಎಸ್‌ಎAಇಗಳ ಕಾರ್ಯಕ್ಷಮತೆ ಹೆಚ್ಚಿಸುವ ಮತ್ತು ವೇಗಗೊಳಿಸುವ (ಆರ್‌ಎಎಂಪಿ) ಯೋಜನೆಯಡಿ ಗುರುವಾರ ಆಯೋಜಿಸಿದ್ದ ರ-ÀÅ್ತ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವ ಉದ್ಯಮಿಗಳ ಕನಸು ನನಸಾಗಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಸದಾ ಬೆಂಬಲವಾಗಿ ನಿಲ್ಲಲಿದೆ. ಕ್ಷೇತ್ರದಲ್ಲಿ ಅನುಭವ ಇಲ್ಲದಿದ್ದರೂ ಸಾಲ ಮತ್ತು ತಾಂತ್ರಿಕ ಸಹಕಾರ ನೀಡಲು ಸಿದ್ಧವಿದೆ ಎಂದರು. ಯಾವುದೇ ಉದ್ಯಮ ಆರಂಭಕ್ಕೂ ಮುನ್ನ ಜಿಲ್ಲಾ ಕೈಗಾರಿಕಾ ಕೇಂದ್ರದಿAದ ಅಗತ್ಯ ಮಾಹಿತಿ, ಮಾರ್ಗದರ್ಶನ ಪಡೆಯಬೇಕು. ಪ್ರಸ್ತುತ ಮಾರುಕಟ್ಟೆ ವಿಸ್ತೀರ್ಣ, ಹಣಕಾಸಿನ ಸವಾಲುಗಳು ಹೆಚ್ಚಾಗಿವೆ. ಆದ್ದರಿಂದ ಯೋಜನೆಯ ಪೂರ್ವ ತಯಾರಿಯೊಂದಿಗೆ ಉದ್ಯಮಕ್ಕೆ ಕೈಹಾಕಬೇಕು ಎಂದು ಕಿವಿಮಾತು ಹೇಳಿದರು.
ಕೈಗಾರಿಕೆ ಸ್ಥಾಪನೆಗೆ ಜವಳಿ ಇಲಾಖೆಯಿಂದ ಈ ಹಿಂದೆ ಶೇ. ೯೦ ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಆದರೀಗ ಶೇ. ೭೫ಕ್ಕೆ ಇಳಿಸ ಲಾಗಿದೆ. ಎಸ್ಸಿ-ಎಸ್ಟಿ ಸಮುದಾಯದ ಉದ್ಯಮಿಗಳಿಗೆ ಮಾತ್ರ ಇದು ಅನ್ವಯಿಸಲಿದೆ. ಈ ಯೋಜನೆಯಡಿ ಶೇ. ೧೫ರಷ್ಟು ಬ್ಯಾಂಕ್ ಸಾಲ ಮತ್ತು ಶೇ. ೧೦ ರಷ್ಟು ಉದ್ಯಮಿಯ ಪಾಲು ಇರಬೇಕಾಗುತ್ತದೆ ಎಂದರು.
ಕೆಎಸ್‌ಎ-ï‌ಸಿಯಿAದ ಶೇ. ೪ರ ಬಡ್ಡಿ ದರದಲ್ಲಿ ಎಸ್ಸಿ-ಎಸ್ಟಿ ಉದ್ಯಮಿಗಳಿಗೆ ೧೦ ಲಕ್ಷ ರೂ. ನಿಂದ ೧೦ ಕೋಟಿ ರೂ. ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಒಟ್ಟು ಶೇ. ೧೨ರಷ್ಟು ಬಡ್ಡಿಯಲ್ಲಿ ಶೇ. ೮ರಷ್ಟು ಸರ್ಕಾರ ಭರಿಸಲಿದೆ ಎಂದು ವಿವರಿಸಿದರು. ಹೋಟೆಲ್, ನರ್ಸಿಂಗ್ ಹೋಂ ಸೇರಿ ಇನ್ನಿತರೆ ಸೇವಾ ವಲಯದ ಚಟುವಟಿಕೆಗೆ ಮಹಿಳಾ ಉದ್ಯಮಿಗಳಿಗೆ ೫ ಲಕ್ಷದಿಂದ ೫ ಕೋಟಿ ರೂ. ವ ರೆಗೆ ಶೇ. ೪ರ ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ. ಸಾಮಾನ್ಯ ವರ್ಗದವರಿಗೆ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಇದೇ ಮೊತ್ತದವರೆಗೂ ಶೇ. ೫.೫ ಬಡ್ಡಿಯೊಂದಿಗೆ ಸಾಲ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾಸಿಯಾ ಅಧ್ಯಕ್ಷ ಬಿ.ಆರ್.ಗಣೇಶ್‌ರಾವ್ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಉದ್ಯಮಿಗಳಿಗೆ ಅರಿವು ಮೂಡಿಸುವ ಚ ಟುವಟಿಕೆಗಳನ್ನು ನಡೆಸಲಾಗುತ್ತಿದೆ. ರಾಯಚೂರಿನ ಕಾರ್ಯಕ್ರಮದ ಬಳಿಕ ಮರ‍್ನಾಲ್ಕು ಮಂದಿ ರ-ÀÅ್ತ ವ್ಯವಹಾರಕ್ಕೆ ನೋಂ ದಾಯಿಸಿದ್ದಾರೆ. ಕೆಎಸ್‌ಎ-ï‌ಸಿ ಮೂಲಕ ಶೇ. ೪ರಷ್ಟು ಬಡ್ಡಿ ದರದಲ್ಲಿ ಸಾಲ ಮತ್ತು ೧೦ ವರ್ಷಗಳ ಮರುಪಾವತಿ ಅವಽಯ ಬಗ್ಗೆ ಚರ್ಚಿಸಲಾಗಿದೆ ಎಂದರು.
ಸಾಮಾನ್ಯ ವರ್ಗದವರಿಗೆ ೫ ಕೋಟಿ ರೂ. ವರೆಗಿನ ಸಾಲಕ್ಕೆ ಕೇವಲ ೫ ವರ್ಷದೊಳಗೆ ಮರುಪಾವತಿ ಅವಽ ನಿಗದಿ ಪಡಿಸಿ ರುವುದಕ್ಕೆ ಉದ್ಯಮಿಗಳಿಂದ ಟೀಕೆ ವ್ಯಕ್ತವಾಗಿದೆ. ಕೈಗಾರಿಕೆ ಸ್ಥಾಪಿಸಲು ೨ ವರ್ಷ, ಉದ್ಯಮ ಆರಂಭಿಸಲು ೨ ವರ್ಷ ಬೇಕಾಗು ವುದರಿಂದ, ಮರುಪಾವತಿ ಅವಽಯನ್ನು ಕನಿಷ್ಠ ೮ರಿಂದ ೧೦ ವರ್ಷಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಆನಂದ, ನಿವೃತ್ತ ಅಽಕಾರಿ ತಿಮ್ಮಯ್ಯ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್. ರಾಘವೇಂದ್ರ, ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್. ಬಿರಾದಾರ, ಗೌರವ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹುಸೇನ್, ಜಂಟಿ ಕಾರ್ಯದರ್ಶಿಗಳಾದ ಆರ್. ಕೇಶವಮೂರ್ತಿ, ವಿ. ದಿನೇಶ್‌ಕುಮಾರ್, ಖಜಾಂಚಿ ಆರ್. ದುರೈ, ಪ್ಯಾನಲ್ ಅಧ್ಯಕ್ಷ ಬಿ. ಪ್ರವೀಣ್, ಜಿಲ್ಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಓ. ಮಹೇಶ್ವರಪ್ಪ ಇದ್ದರು.