ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಅವರು ಚಿತ್ರದುರ್ಗ ಜಿಪಂ ಸಿಇಒ ಡಾ.ಎಸ್. ಆಕಾಶ್ ಅವರಿಗೆ ಜಲ ಸಂಚಯ-ಜನ ಭಾಗಿದಾರಿ ಪ್ರಶಸ್ತಿ ಪ್ರದಾನ ಮಾಡಿದರು. 
ಚಿತ್ರದುರ್ಗ

`ಜಲ ಸಂಚಯ, ಜನ ಭಾಗೀದಾರಿ'ಗೆ ದುರ್ಗ ಭಾಜನ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ದಿಲ್ಲಿಯಲ್ಲಿ ರಾಷ್ಟಿçÃಯ ಪ್ರಶಸ್ತಿ ಸ್ವೀಕರಿಸಿದ ಸಿಇಒ
  • ರಾಷ್ಟçಪತಿ, ಕೇಂದ್ರ ಸಚಿವರ ಉಪಸ್ಥಿತಿ
  • ಜಲಶಕ್ತಿ ರಾಜ್ಯ ಸಚಿವ
ಚಿತ್ರದುರ್ಗ: ಚಿತ್ರದುರ್ಗ ಜಿಪಂ ವ್ಯಾಪ್ತಿಯಲ್ಲಿ ಜಲ ಸಂರಕ್ಷಣೆ ಕಾಮಗಾರಿಗಳ ಉತ್ತಮ ಅನುಷ್ಠಾನಕ್ಕಾಗಿ ಕೇಂದ್ರ ಜಲ ಶಕ್ತಿ ಇಲಾಖೆ ಯ `ಜಲ ಸಂಚಾಯ್, ಜನ ಭಾಗಿದಾರಿ' (ಜಿಎಸ್‌ಜೆಬಿ) ರಾಷ್ಟç ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆ ಭಾಜನವಾಗಿದೆ.
ರಾಷ್ಟçಪತಿ ದ್ರೌಪದಿಮುರ್ಮು ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರ ಉಪಸ್ಥಿತಿಯಲ್ಲಿ ಹೊಸದಿಲ್ಲಿಯಲ್ಲಿ ಜರುಗಿದ ಸ ಮಾರಂಭದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಂದ ಜಿಪಂ ಸಿಇಒ ಡಾ.ಎಸ್. ಆಕಾಶ್ ಅವರು ಪ್ರಶಸ್ತಿ ಸ್ವೀಕರಿಸಿ ದರು.
ಜಿಲ್ಲೆಯಲ್ಲಿ ಜಲ ಮೂಲದ ಸಂರಕ್ಷಣೆಯಡಿ ಅಂತರ್ಜಲ ವೃದ್ಧಿ, ಜಲ ಸಂರಕ್ಷಣೆಗೆ ಅದ್ಯತೆ ನೀಡಲಾಗಿದೆ. ಮಳೆ ನೀರು ಸಂರಕ್ಷಣೆ ಕಾ ಮಗಾರಿ, ಕಂದಕ, ಬದು, ಕೆರೆ ಹೂಳೆತ್ತುವುದು, ಕೆರೆ, ಕಟ್ಟೆ, ಕಾಲುವೆ, ಕಲ್ಯಾಣಿಗಳ ಅಭಿವೃದ್ಧಿ, ಚೆಕ್‌ಡ್ಯಾಮ್‌ಗಳ ನಿರ್ಮಾಣ, ಇಂಗು ಗುAಡಿ ಸೇರಿ ಹಲವು ಕಾಮಗಾರಿಗಳಿಂದಾಗಿ ಜಿಲ್ಲೆಯ ಅಂತರ್ಜಲ ಮಟ್ಟ ಹೆಚ್ಚಾಗಲು ಕಾರಣವಾಗಿದೆ.
ಜಿಲ್ಲೆಯಲ್ಲಿ ವಿಶೇಷವಾಗಿ ನರೇಗಾದಡಿ ಅಭಿಯಾನ ಕೈಗೊಂಡು ೨೦೨೪-೨೫ನೇ ಸಾಲಿನಲ್ಲಿ ೧೦೬೩ ಗ್ರಾಮಗಳಲ್ಲಿ ೭೮೧೫ ಜಲ ಮೂಲಗಳ ಸಂರಕ್ಷಣೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಇವುಗಳ ಯಶಸ್ಸಿನ ಹಿನ್ನೆಲೆಯಲ್ಲಿ ೨೫ ಲಕ್ಷ ರೂ. ನಗದನ್ನು ಒಳಗೊಂಡ ಪ್ರಶಸ್ತಿಗೆ ಜಿಲ್ಲೆ ಭಾಜನವಾಗಿದೆ.