ಚಿತ್ರದುರ್ಗದ ಎಸ್‌ಜೆಎಂಐಟಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಹಳೇ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮದಲ್ಲಿ ಡಾ.ಬಸವಕುಮಾರ ಸ್ವಾಮೀಜಿ, ಡಾ.ಕೆ.ಬಿ. ಗುಡಸಿ, ಡಾ.ಎಂ.ಎಸ್. ಗಣಾಚಾರಿ, ಡಾ.ಪಿ.ಬಿ. ಭರತ್ ಇತರರು ಇದ್ದರು.
- ಮಲ್ಲಿಕಾರ್ಜುನ ಶ್ರೀ ಶಿಕ್ಷಣ, ಜಯದೇವ ಶ್ರೀಗಳು ಅನ್ನ ದಾಸೋಹಿಗಳು
- ಎಸ್‌ಜೆಎಂಐಟಿ ಹಳೆಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ
- ಎಸ್‌ಜೆಎಂ ವಿಶ್ವವಿದ್ಯಾಲಯ
ಚಿತ್ರದುರ್ಗ: ಸದ್ಗುಣ, ಸತ್ಕಾರ್ಯಗಳು ಪ್ರಶಂಸೆಗಾಗಿ ಅಲ್ಲ, ಅವು ನಮ್ಮ ಮನಸ್ಸಿನ ನೆಮ್ಮದಿಗೆ ಎಂಬುದನ್ನು ನಾವು ಮರೆಯ ಬಾರದು ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಮನುಷ್ಯನಲ್ಲಿ ಯಾವುದು ಕೊರತೆಯಾದರೂ, ಕÊತಜ್ಞತಾಭಾವ ಕಡಿಮೆಯಾಗಬಾರದು. ಒಂದು ವ್ಯವಸ್ಥೆ ಹುಟ್ಟು ಹಾಕಲು ಬಂಡ ವಾಳಬೇಕು.
ಶಿಕ್ಷಣ ಸಂಸ್ಥೆಗಳನ್ನು ಉದ್ಯಮಿಗಳು, ರಾಜಕಾರಣಿಗಳು, ಬಂಡವಾಳಶಾಹಿಗಳು ಆರಂಭಿಸುವುದು ವ್ಯಾಪರೀಕರಣವಾಗುತ್ತದೆ. ಆದರೆ, ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ೧೯೬೬ರಲ್ಲಿ ಮಧ್ಯ ಕರ್ನಾಟಕದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಎಸ್‌ಜೆಎಂ ವಿದ್ಯಾಪೀಠ ಸ್ಥಾಪಿಸಿ ಅದರ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು ಎಂದರು.
೧೯೮೦ರಲ್ಲಿ ಇಂಜಿನಿಯರಿAಗ್ ಕಾಲೇಜು ಪ್ರಾರಂಭಿಸಿ ಅದರ ಕಟ್ಟಡ ನಿರ್ಮಾಣದ ಖುದ್ದು ಮೇಲ್ವಿಚಾರಣೆ ನಡೆಸಿದ್ದರು. ಈ ಕಾ ಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಮಲ್ಲಿಕಾರ್ಜುನ ಶ್ರೀಗಳು ಶಿಕ್ಷಣ ದಾಸೋಹಿಗಳಾಗಿದ್ದರೆ, ಜಯದೇವ ಶ್ರೀ ಗಳು ಅನ್ನದಾಸೋಹಿಗಳಾಗಿದ್ದರು ಎಂದರು.
ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ. ಗುಡಸಿ ಅವರು ಮಾತನಾಡಿ, ಕಾಲೇಜಿನ ರಾಯಭಾರಿಗಳಿಂತಿರುವ ಹಳೆಯ ವಿದ್ಯಾರ್ಥಿಗಳು ಸಂಸ್ಥೆ, ವಿಶ್ವವಿದ್ಯಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.
ಹಿರಿಯ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಸಮಿತಿಗಳಲ್ಲಿ ಸ್ಥಾನ ಕಲ್ಪಿಸಿ ಅವರ ಮಾರ್ಗದರ್ಶನ ಪಡೆದುಕೊಳ್ಳಲಾಗುವುದು. ಹಿರಿ ಯ ವಿದ್ಯಾರ್ಥಿಗಳ ಅನುಭವ, ಯಶೋಗಾಥೆ ಸಹಕಾರಿ ಯಾಗಲಿದೆ ಎಂದರು.
ಕುಲಸಚಿವ ಡಾ.ಎಂ.ಎಸ್. ಗಣಾಚಾರಿ ಮಾತನಾಡಿ, ಈ ಕ್ಯಾಂಪಸ್ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹೈಟೆಕ್ ಸ್ಪರ್ಶ ಪಡೆ ಯಲಿದೆ ಎಂದರು.
ಪ್ರಾಚಾರ್ಯ ಡಾ.ಪಿ.ಬಿ. ಭರತ್ ಮಾತನಾಡಿದರು. ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಶುಭ ಕೋರಿದರು.
ಹಿರಿಯ ವಿದ್ಯಾರ್ಥಿಗಳಾದ ರಾಜೇಶ್ ಗೋಯಲ್, ಅರುಣ್‌ಕುಮಾರ್, ಎಸ್. ವಿವೇಕ್, ತಿರುಮಲೇಶ್‌ಭಟ್.
ಶಿವರಾಜ್,ಬಾಬುರಾವ್, ಶ್ರೀಧರ್ ರಾಮಕÊಷ್ಣ ತಮ್ಮ ಅನುಭವ ಹಂಚಿಕೊAಡರು. ಡಾ.ಬಿ.ಜಿ. ಕುಮಾರಸ್ವಾಮಿ, ಡಾ.ಕೆ.ಬಿ. ಸಿದ್ದೇಶ್, ಡಾ. ಕೆ.ಆರ್. ಕೃಷ್ಣಾರೆಡ್ಡಿ, ಡಾ.ಎಸ್.ಪಿ. ಶಿವಕುಮಾರ್, ಡಾ.ಟಿ.ವಿ. ಅರವಿಂದ್, ಡಾ.ಜೆ.ಎಂ. ಶ್ರೀಶೈಲ, ಹಳೆಯ ವಿದ್ಯಾರ್ಥಿಗಳ ಸಂಘದ ಸಂಚಾಲಕ ಡಾ.ಜೆ. ಸತೀಶ್ ಇತರರು ಇದ್ದರು.
ವರ್ಷಾ ಪ್ರಾರ್ಥಿಸಿದರು. ಡಾ.ಜೆ. ಸತೀಶ್ ಸ್ವಾಗತಿಸಿ, ಡಾ.ಎಸ್. ಚೇತನ್ ವಂದಿಸಿದರು. ಪ್ರೊ. ಸುಷ್ಮಿತಾದೇಬ್ ನಿರೂಪಿಸಿದರು. ಡಾ.ಕೆ. ಕುಮಾರಸ್ವಾಮಿ ಪ್ರತಿಜ್ಞಾವಿಽ ಬೋಽಸಿದರು.
"
ಕಾಲೇಜಿನ ಹಳೆಯ ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಶಾಲಾ, ಕಾಲೇಜನ್ನು ಸ್ಮರಿಸುವುದು ಪುಣ್ಯದ ಕೆಲಸ. ಹಳೆಯ ವಿದ್ಯಾರ್ಥಿಗಳ ಸಮಾಗಮ ಹಳೆಯ ನೆನಪುಗಳ ಮೆಲುಕು ಹಾಕಲು ನೆರವಾಗಿದೆ.
— ಡಾ.ಬಸವಪ್ರಭು ಸ್ವಾಮೀಜಿ, ದಾವಣಗೆರೆ ವಿರಕ್ತಮಠ