ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ವಿಪಿ ಬಡಾವಣೆಯಲ್ಲಿರುವ ರಾಷ್ಟಿçÃಯ ನಾಯಕ, ಮಾಜಿ ಮುಖ್ಯಮಂತ್ರಿ ದಿ.ಎಸ್. ನಿಜಲಿಂಗಪ್ಪ ಅವರು ವಾಸವಿದ್ದ ನಿವಾಸ ವಿನಯದ ನವೀಕರಣ ಕಾಮಗಾರಿ ಇನ್ನು ೨೦-೩೦ ದಿನದೊಳಗೆ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೇ ಈ ನಿವಾಸ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.
೧.೨೦ ಕೋಟಿ ರೂ. ವೆಚ್ಚದಲ್ಲಿ ಮನೆ ನವೀಕರಿಸಲು ಉದ್ದೇಶಿಸಲಾಗಿತ್ತು. ಆದರೆ ಈ ಮನೆಯನ್ನು ನಿಜಲಿಂಗಪ್ಪ ಅವರ ಕುಟುಂಬ ವರ್ಗದವರಿಂದ ಖರೀದಿಸಲು ಸರ್ಕಾರ ಬಿಡುಗಡೆ ಮಾಡಿದ್ದ ೫ ಕೋಟಿ ರೂ.ಅನುದಾನದಲ್ಲೇ ಉಳಿದ ಮೊತ್ತ ೮೩ ಲಕ್ಷ ರೂ.ಗಳಲ್ಲಿ ನವೀಕರಣ ಕಾಮಗಾರಿಯನ್ನು ಕಳೆದ ಜನವರಿಯಿಂದ ಕೈಗೆತ್ತಿಕೊಳ್ಳಲಾಗಿದೆ.
ಈ ಪಾರಂಪರಿಕ ಕಟ್ಟಡದ ಮೂಲ ರೂಪದಲ್ಲಿ ಯಾವುದೇ ಬದಲಾವಣೆ ಮಾಡದೆ ನವೀಕರಣ ಕಾರ್ಯ ನಡೆಸಲಾಗಿದೆ. ಅಂದಾಜು ೧೦೦/೧೦೦ ಚದರ ಅಡಿ ವಿಶಾಲ ನಿವೇಶನದಲ್ಲಿ ೬೦/೪೦ ಚದರಡಿಗೂ ಹೆಚ್ಚಿನ ವಿಸ್ತೀರ್ಣದಲ್ಲಿರುವ ಈ ಮನೆ ನವೀಕರಣಕ್ಕೆ ಸಂಬAಽಸಿದ್ದ ಪ್ಲಾಸ್ಟರಿಂಗ್, -ೆÆ್ಲÃರಿಂಗ್, ವಿದ್ಯುತ್ಸಂಪರ್ಕ, ಹಾಳಾಗಿರುವ ಬಾಗಿಲು, ಕಿಟಕಿಗಳನ್ನು ಮತ್ತೆ ತೇಗದ ಮರವನ್ನೇ ಬಳಸಿ ಹೊಸದಾಗಿ ಸಿದ್ಧಪಡಿಸಲಾಗಿದೆ. ಫ್ರೇಮ್, ಬಾಗಿಲುಗಳ ಸಹಿತ ಹೊಸದಾಗಿ ಅಳವಡಿಸಲಾಗಿದೆ.
ಮನೆ ಛಾವಣಿಗೆ ಚುರುಕಿ ಹಾಕಲಾಗಿದೆ. ಮನೆ ಹೊರ ಮತ್ತು ಒಳಗೆ ಪ್ಲಾಸ್ಟರಿಂಗ್ ಆಗಿದೆ. ಮನೆ ಪ್ರವೇಶಿಸುವ ಬಲಬದಿಯಲ್ಲಿ ರಿಟೈನಿಂಗ್ವಾಲ್, ಹಿಂದೆ ಮತ್ತು ಮುಂದೆ ಕಾಂಕ್ರಿಟ್ನೊAದಿಗೆ ಕಾಂಪೌAಡ್ ನಿರ್ಮಿಸಲಾಗುತ್ತಿದೆ. ಮನೆಯೊಳಗೆ ಫ್ಲೋರಿಂಗ್ ಕೆಲಸ ನಡೆಯಬೇಕಿದೆ. ಕಾಮಗಾರಿ ಈ ಹೊತ್ತಿಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಮರಕ್ಕೆ ಸಂಬAಽಸಿದAತೆ ಅರಣ್ಯ ಇಲಾಖೆ ಅನುಮತಿ ತಡವಾಗಿದ್ದರಿಂದಾಗಿ ವಿಳಂಬವಾಗಿದೆ.
ಲ್ಯಾAಡ್ಸ್ಕೇಪ್
ಲ್ಯಾAಡ್ ಸ್ಕೇಪ್ನೊಂದಿಗೆ ಮನೆ ಆವರಣದಲ್ಲಿ ಹುಲ್ಲು ಹಾಸು ಸಹಿತ ಅಲಂಕಾರಿಕ ಗಿಡಗಳನ್ನು ಬೆಳೆಸಲು ಯೋಜಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಅನುದಾನ ನಿರೀಕ್ಷಿಸಲಾಗಿದೆ. ಲ್ಯಾಂಡ್ಸ್ಕೇಪ್ ಮತ್ತು ನವೀಕರಣ ಕಾಮಗಾರಿ ವೆಚ್ಚ ಸರಿದೂಗಿಸಲು ೪೦ ಲಕ್ಷ ರೂ. ಬೇಕಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.
ಸಮಿತಿ ಮಾಹಿತಿ ಇಲ್ಲ
ಕಾಮಗಾರಿ ನಿರ್ವಹಣೆಗೆ ನಿಜಲಿಂಗಪ್ಪ ಅವರ ಪುತ್ರ ಎಸ್.ಎನ್. ಕಿರಣ್ಶಂಕರ್ ಅವರನ್ನು ಒಳಗೊಂಡAತೆ ಸಮಿತಿ ರಚಿಸಿ, ಸಲಹೆ ಸಹಕಾರ ಪಡೆಯುವುದಾಗಿ ಜಿಲ್ಲಾಡಳಿತ ಹೇಳಿತ್ತು. ಆದರೆ, ಈ ಕುರಿತಂತೆ ನಮಗೆ ಯಾವುದೇ ಮಾಹಿತಿ ಇಲ್ಲವೆಂದು ಎಂದು ಸೀಬಾರ ಎಸ್. ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ನ ಟ್ರಸ್ಟಿ ಕೆಇಬಿ ಷಣ್ಮುಖಪ್ಪ ಹೇಳಿದರು.
ಈಚೆಗೆ ನಿವಾಸಕ್ಕೆ ಭೇಟಿ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಽಕಾರಿಗಳು, ಸಚಿವರ ಸೂಚನೆ ಇದೆ, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕೆಂದು ನಿರ್ಮಿತಿ ಕೇಂದ್ರದ ಅಽಕಾರಿಗಳಿಗೆ ನಿರ್ದೇಶಿಸಿದ್ದರು.
ವೈಟ್ಹೌಸ್ನಂತೆ ಕಂಗೊಳಿಸುವ ನಿವಾಸ
ಸಂಪೂರ್ಣ ಬಿಳಿಯ ಬಣ್ಣ ಬಳಸಿ ಮನೆಯನ್ನು ಮೊದಲಿದ್ದಂತೆ ವೈಟ್ಹೌಸ್ ಆಗಿ ಕಂಗೊಳಿಸುವAತೆ ಮಾಡಲಾಗುತ್ತದೆ. ನಿವಾಸದ ಆವರಣದಲ್ಲಿರುವ ಬಾವಿಯಿಂದ ಕನಿಷ್ಠ ನಿತ್ಯಕ್ಕೆ ಅಗತ್ಯವಿರುವ ಒಂದು ಸಾವಿರ ಲೀಟರ್ ನೀರು ಲಭ್ಯವಾಗಲಿದೆ. ಬಾವಿಯನ್ನೂ ಅಚ್ಚುಕಟ್ಟುಗೊಳಿಸಿ, ಟ್ಯಾಂಕ್ ಅಳವಡಿಸಿಕೊಂಡು ಇದರ ನೀರನ್ನೇ ಮುಂದೆ ಕೂಡ ಬಳಸಲು ಯೋಜಿಸಲಾಗಿದೆ ಎನ್ನುತ್ತಾರೆ ನಿರ್ಮಿತಿ ಕೇಂದ್ರದ ಅಽಕಾರಿಗಳು.
ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ನಿವಾಸ ನವೀಕರಣವನ್ನು ಅವರ ಜನ್ಮ ದಿನದ ಡಿಸೆಂಬರ್ ೧೦ರೊಳಗೆ ಪೂರ್ಣಗೊಳಿಸುವುದಾಗಿ ನಿರ್ಮಿತಿ ಕೇಂದ್ರದ ಅಽಕಾರಿಗಳು ತಿಳಿಸಿದ್ದಾರೆ. ಈ ಅವಽಯೊಳಗೆ ನವೀಕರಣ ಪೂರ್ಣಗೊಂಡರೆ ತಕ್ಷಣದಿಂದಲೇ ನಿಜಲಿಂಗಪ್ಪ ಅವರ ನಿವಾಸವನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು.ಎಸ್. ರಮ್ಯಾ, ಜಿಲ್ಲಾಽಕಾರಿ, ಚಿತ್ರದುರ್ಗ