ಚಿತ್ರದುರ್ಗದಲ್ಲಿ ಸೋಮವಾರ ಮಹಾಯೋಗಿ ವೇಮನ ಅವರ ಜಯಂತ್ಯುತ್ಸವದಲ್ಲಿ ಶ್ರೀ ವೇಮನಾಂದ ಸ್ವಾಮೀಜಿ, ಬಿ.ಎಂ. ಗೋವಿಂದರಾಜ್, ಎಸ್.ಬಿ. ಭೀಮಾರೆಡ್ಡಿ, ಡಾ.ಬಿ.ಎಂ. ಗುರುನಾಥ, ಬಿ.ವಿ. ತುಕಾರಾಂರಾವ್, ವೆಂಕಟೇಶ್‌ರೆಡ್ಡಿ, ದಾದಾಪೀರ್ ಇತರರು ಇದ್ದರು 
ಚಿತ್ರದುರ್ಗ

ಅನ್ಯಾಯ, ಅನೀತಿ ಖಂಡಿಸಿದ್ದ ನಿಷ್ಠುರವಾದಿ ವೇಮನ

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಎಸ್.ಬಿ. ಭೀಮಾರೆಡ್ಡಿ ಅಭಿಮತ
  • ಮಹಾಯೋಗಿಯ ಜಯಂತಿ ಆಚರಣೆ
  • ಸಾಹಿತಿ ಎಸ್.ಬಿ. ಭೀಮಾರೆಡ್ಡಿ
ಚಿತ್ರದುರ್ಗ: ಸಮಾಜದಲ್ಲಿನ ಲೋಪದೋಷ, ಅನ್ಯಾಯ, ಅನೀತಿಯನ್ನು ಯಾವುದೇ ಮುಲಾಜಿಲ್ಲದೇ ನೇರವಾಗಿ ಖಂಡಿಸಿದ್ದ ನಿಷ್ಠುರವಾದಿ ಕವಿ ವೇಮನ ಎಂದು ಚಳ್ಳಕೆರೆ ತಾಲೂಕು ಬೇಡರೆಡ್ಡಿಹಳ್ಳಿ ಸಾಹಿತಿ ಎಸ್.ಬಿ. ಭೀಮಾರೆಡ್ಡಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಜಾತಿ ಪದ್ಧತಿ, ಮೂಢನಂಬಿಕೆ, ಸಾಮಾಜಿಕ ಸಮಾನತೆ,ನೈತಿಕ ಮೌಲ್ಯಗಳ ಬಗ್ಗೆ ಜನಸಾಮಾನ್ಯರ ಭಾಷೆಯಲ್ಲಿ ಸರಳ ಮತ್ತು ಶಕ್ತಿಯುತವಾದ ವಚನಗಳ ಮೂಲಕ ಖಂಡಿಸಿದ್ದಾರೆ ಎಂದರು.
ದಾರ್ಶನಿಕರ ಪೈಕಿ ಕವಿ ವೇಮನ ಅವರ ಕುರಿತು ವಿದೇಶಿ ಸಂಶೋಧಕಕರು ಅತೀ ಹೆಚ್ಚು ಸಂಶೋಧನೆ ನಡೆಸಿದ್ದಾರೆ. ವೇಮನರ ವಚನಗಳಲ್ಲಿ ಆತ್ಮಚಿಂತನೆಗಳಿವೆ. ಇದು ನೈತಿಕತೆಗೆ ಸಹಕಾರಿಯಾಗಿದೆ. ನೈತಿಕತೆಯೊಂದಿಗೆ ನಾವು ಮುಕ್ತಿ ಮಾರ್ಗದೆಡೆ ಸಾಗಬೇಕಾಗಿದೆ ಎಂದರು.
ವೇಮನರ ಪದ್ಯಗಳು ಕನ್ನಡದ ಕಂದಪದ್ಯ ಛಂದಸ್ಸಿನ ಪ್ರಕಾರಕ್ಕೆ ಸೇರಿವೆ. ಮೊದಲ ಸಾಲಿನಲ್ಲಿ ಸತ್ಯ, ಎರಡನೇ ಸಾಲಿನಲ್ಲಿ ವಾಸ್ತವ ಸ್ಥಿತಿ ಹಾಗೂ ಮೂರನೇ ಸಾಲಿನಲ್ಲಿ ವಾಸ್ತವ ಸ್ಥಿತಿಯ ಕ್ರೂರತೆ ಖಂಡಿಸುತ್ತದೆ. ಸಮುದಾಯವು ಸಂಕುಚಿತ ಮನೋಭಾವ ಬಿಡಬೇಕು. ಸಂಕೀರ್ಣವಾದ ಜಗತ್ತಿನಲ್ಲಿ ವಿಶೇಷ ಜ್ಞಾನ ಪಡೆದು ಸಮುದಾಯಕ್ಕೆ ಕೊಡುಗೆ ನೀಡಬೇಕಿದೆ ಎಂದರು.
ಹರಿಹರ ತಾಲೂಕು ಹೊಸಹಳ್ಳಿಯ ರೆಡ್ಡಿ ಗುರುಪೀಠದ ಶ್ರೀ ವೇಮನಾನಂದ ಸ್ವಾಮೀಜಿ ಮಾತನಾಡಿ, ವೇಮನರ ಸಾಹಿತ್ಯ, ಬೋಧನೆ ನಮ್ಮ ದಾರಿಗೆ ಬೆಳಕು ಚೆಲ್ಲಲಿವೆ. ಪ್ರಜಾಕವಿ ವೇಮನರ ಸಾಹಿತ್ಯ ಮುಂದಿಟ್ಟುಕೊAಡು ನಾವು ನಮ್ಮ ಜೀವನ ರೂಪಿಸಿಕೊಳ್ಳಬೇಕಿದೆ ಎಂದರು.
ನಾವೆಲ್ಲರೂ ಸಂತೃಪ್ತಿಯಿAದ ಬದುಕಬೇಕು ಎಂಬುದೇ ಮಹನೀಯರ ಜಯಂತಿಗಳ ಆಶಯವಾಗಿದೆ. ವೇಮನರು ತಮ್ಮ ಬೋಧನೆಗಳನ್ನು ಆಡುಭಾಷೆಯಲ್ಲಿ ಸರಳವಾಗಿ ಬರೆದಿರುವುದು ಅವರ ವಿಶೇಷ. ಜನರಿಗೆ ಗೊತ್ತಿರುವ ಉಪಮೆ, ಪ್ರತಿಮೆಗಳ ಮೂಲಕ ತಿಳಿಸಿದ್ದಾರೆ. ಇದು ಹೆಚ್ಚಿನ ಜನರಿಗೆ ತಲುಪಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಎಸ್.ಆರ್. ಪಾಟೀಲರು ವೇಮನರ ೫ಸಾವಿರಕ್ಕೂ ಅಽಕ ವಚನಗಳನ್ನು ಸಂಗ್ರಹಿಸಿದ್ದಾರೆ. ತೆಲುಗಿನಿಂದ ಕನ್ನಡಕ್ಕೆ ಭಾಷಾಂ ತರಿಸಿ, ಅವುಗಳಿಗೆ ಟಿಪ್ಪಣಿ, ವಿಮರ್ಶೆಯೊಂದಿಗೆ ವೇಮನರ ಸಾಹಿತ್ಯ ಕನ್ನಡಿಗರಿಗೆ ನೀಡುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯವನ್ನು ಜನಪ್ರಿಯಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶ್ರೀಗಳು ತಿಳಿಸಿದರು.
ತಹಸೀಲ್ದಾರ್ ಬಿ.ಎಂ. ಗೋವಿಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ, ಜಿಲ್ಲಾ ವಾರ್ತಾಽಕಾರಿ ಬಿ.ವಿ. ತುಕಾರಾಂರಾವ್, ಜಿಪಂ ಲೆಕ್ಕಪತ್ರ ಶಾಖೆ ಸಹಾಯಕ ನಿರ್ದೇಶಕ ದಾದಾಪೀರ್, ರೆಡ್ಡಿ ಸಮಾಜದ ಮುಖಂಡರು ಇದ್ದರು. ರಂಗನಿರ್ದೇಶಕ ಕೆಪಿಎಂ ಗಣೆÃಶಯ್ಯ ನಿರೂಪಿಸಿದರು. ಉಮೇಶ್ ಪತ್ತಾರ ತಂಡದವರು ಗೀತಗಾಯನ ನಡೆಸಿಕೊಟ್ಟರು.