ಚಿತ್ರದುರ್ಗದ ವೀರಶೈವ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಪಟೇಲ್ ಶಿವಕುಮಾರ್, ಉಪಾಧ್ಯಕ್ಷರಾಗಿ ಸಿ.ಚಂದ್ರಪ್ಪ ಅವಿರೋಧವಾಗಿ ಗುರುವಾರ ಆಯ್ಕೆಯಾದರು. ನಿರ್ದೆಶಕರಾದ ಬಿ.ಎಂ. ಕರಿಬಸಯ್ಯ, ಜೆ.ಎಸ್. ಪ್ರಸಾದ್, ಜಿ.ಟಿ. ಸುರೇಶ್‌ಸಿದ್ದಾಪುರ, ಕೆ.ಎಚ್. ಮುರುಗೇಂದ್ರಪ್ಪ, ಡಿ.ಎಸ್. ರಾಜೇಶ್, ನೀಲಕಂಠೇಶ್ವರಪ್ಪ, ಕೆ.ಜಿ. ರೀನಾ, ಜಿ.ಆರ್. ನಿವೇದಿತಾ, ಎಂ. ಶೈಲಜಾ ಇದ್ದರು. 
ಚಿತ್ರದುರ್ಗ

ವೀರಶೈವ ಅರ್ಬನ್ ಕೋ ಆಪರೇಟಿವ್ ಸೊಸೈಟಿ ವಹಿವಾಟು ದುಪ್ಪಟ್ಟು ಗುರಿ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಪಟೇಲ್ ಶಿವಕುಮಾರ್ ಘೋಷಣೆ
  • ರಜತ ಭವನ ನಿರ್ಮಾಣದ ಸವಾಲು
  • ಅಭಿವೃದ್ಧಿಗೆ ಬೇಕು ಎಲ್ಲರ ಸಹಕಾರ
ಚಿತ್ರದುರ್ಗ: ಮುಂದಿನ ದಿನಗಳಲ್ಲಿ ಸೊಸೈಟಿ ವಹಿವಾಟನ್ನು ದುಪ್ಪಟ್ಟುಗೊಳಿಸಲಾಗುವುದು ಎಂದು ವೀರಶೈವ ಅರ್ಬನ್ ಕೋ ಆ ಪರೇಟಿವ್ ಅಧ್ಯಕ್ಷ ಪಟೇಲ್‌ಶಿವಕುಮಾರ್ ಹೇಳಿದರು.
ಸೊಸೈಟಿಯಲ್ಲಿ ಗುರುವಾರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧÀ ಆಯ್ಕೆ ನಡೆದು ಮರು ಆಯ್ಕೆಯಾಗಿರುವ ಅವರು ಅಽ ಕಾರಿ ಸ್ವೀಕರಿಸಿ ಮಾತನಾಡಿ, ಕಳೆದ ಆರ್ಥಿಕ ಸಾಲಿನಲ್ಲಿ ಒಂದು ಕೋಟಿ ರೂ. ಲಾಭ ಬಂದಿದೆ. ಮುಂದಿನ ಐದು ವರ್ಷಗಳ ಆಡಳಿ ತಾವಽಯಲ್ಲಿ ವಹಿವಾಟನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಇದಕ್ಕಾಗಿ ನಿರ್ದೇಶಕರು, ಷೇರುದಾರರು, ಅಽಕಾರಿ, ಸಿಬ್ಬಂದಿ ಸಹಕಾರ ಹಾಗೂ ಸಮಾಜದ ಹಿರಿಯರ ಮಾರ್ಗದರ್ಶನದ ಅಗತ್ಯವಿದೆ ಎಂದರು.
ಕೋಟ್ಯAತರ ರೂ.ವೆಚ್ಚದಲ್ಲಿ ರಜತ ಭವನ ನಿರ್ಮಿಸುವ ಬಹುದೊಡ್ಡ ಸವಾಲು ನಮ್ಮ ಮುಂದಿದೆ. ಇದಕ್ಕಾಗಿ ಮಾಜಿ ಅಧ್ಯಕ್ಷ ಜ ಯಕುಮಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಎಲ್ಲ ೧೮೦೦ ಷೇರುದಾರರಿಗೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಮತ ಹಾಕಲು ಅರ್ಹತೆ ಒದಗಿಸಬೇಕಿದೆ.
ಇದಕ್ಕಾಗಿ ಅವರು ಕನಿಷ್ಠ ಮೂರು ಸಾಮಾನ್ಯ ಸಭೆಗಳಿಗೆ ಕಡ್ಡಾಯ ಹಾಜರಾತಿ ಹಾಗೂ ನಿರಂತರ ವಹಿವಾಟಿನ ಅಗತ್ಯವಿದೆ. ಈಗ ಕನಿಷ್ಠ ೨ ಸಾಮಾನ್ಯ ಸಭೆಗೆ ಹಾಜರಾದರೂ ಸಾಕೆಂದು ಕಾಯ್ದೆ ತಿದ್ದುಪಡಿಯಾಗಿದ್ದರೂ ಷೇರುದಾರರು ಸೊಸೈಟಿಯ ಅಭಿವೃದ್ಧಿಗಾಗಿ ಎಲ್ಲ ೫ ಸಭೆಗಳಿಗೂ ತಪ್ಪದೇ ಹಾಜರಾಗಬೇಕಿದೆ ಎಂದು ತಿಳಿಸಿದರು.
ನಮ್ಮನ್ನು ನಂಬಿ ನಮ್ಮ ಗುಂಪಿಗೆ ಪೂರ್ಣ ಪ್ರಮಾಣದ ಬಹುಮತವನ್ನು ಷೇರುದಾರರು ಕೊಟ್ಟಿದ್ದರಿಂದ ಅಭಿವೃದ್ಧಿ ಹೊಣೆ ನಮ್ಮ ಮೇಲಿದೆ. ಪೂರ್ಣ ಪರೀಶೀಲನೆ ಬಳಿಕ ಸಾಲ ಮಂಜೂರು ಮಾಡಬೇಕಿದೆ. ಹಿಂದಿನ ಅವಽಯಲ್ಲಿ ಯಾವುದೇ ಸುಸ್ತಿ ಇಲ್ಲದಂತೆ ಆಡಳಿತ ನಡೆಸಲಾಗಿದೆ. ಆಡಳಿತ ಮಂಡಳಿಗೆ ಚುನಾಯಿತರಾದ ೧೧ ನಿರ್ದೇಶಕರಲ್ಲಿ ಹೊಸದಾಗಿ ಆಯ್ಕೆಯಾಗಿದವರು ಸೊಸೈಟಿ ನಿಯಮಗಳನ್ನು ತಿಳಿದುಕೊಳ್ಳಬೇಕು ಎಂದರು.
ಚಿಕ್ಕ ಸಾಲವನ್ನೂ ಕೊಟ್ಟಿಲ್ಲ ಎನ್ನುವ ಆರೋಪ ತಳ್ಳಿ ಹಾಕಿದ ಅವರು, ಹಿಂದಿನ ಅವಽಯಲ್ಲಿ ೨೫ ಸಾವಿರ ರೂ.ನಿಂದ ಗರಿಷ್ಠ ೫ ಲ ಕ್ಷ ರೂ. ವರೆಗೆ ಮಂಜೂರು ಮಾಡಿದ ಸಾಲದ ವಿವರವನ್ನು ಒದಗಿಸಿದರು. ದಾಖಲಾತಿ ಸರಿ ಇದ್ದಲ್ಲಿ ಸಾಲಕ್ಕಾಗಿ ಶಿಫಾರಸು ಬೇಕಾಗಿಲ್ಲ ಎಂದರು.
ಉಪಾಧ್ಯಕ್ಷ ಸಿ. ಚಂದ್ರಪ್ಪ, ನಿರ್ದೆಶಕರಾದ ಬಿ.ಎಂ. ಕರಿಬಸಯ್ಯ, ಜೆ.ಎಸ್. ಪ್ರಸಾದ್, ಜಿ.ಟಿ. ಸುರೇಶ್‌ಸಿದ್ದಾಪುರ, ಕೆ.ಎಚ್. ಮು ರುಗೇಂದ್ರಪ್ಪ, ಡಿ.ಎಸ್. ರಾಜೇಶ್, ನೀಲಕಂಠೇಶ್ವರಪ್ಪ, ಕೆ.ಜಿ. ರೀನಾ, ಜಿ.ಆರ್. ನಿವೇದಿತಾ, ಎಂ. ಶೈಲಜಾ, ಮಾಜಿ ನಿರ್ದೇಶಕ ಕೆಇಬಿ ಷಣ್ಮುಖಪ್ಪ, ಚುನಾವಣಾಽಕಾರಿ ಮೊಹಮ್ಮದ್ ಯೂನುಸ್ ಫರ್ವಿಜ್, ಮ್ಯಾನೇಜರ್ ಕುಸಮಾ, ಅಕೌಂಟೆAಟ್ ಚಂಪಾ ಮತ್ತಿತರ ಸೊಸೈಟಿ ಅಽಕಾರಿ, ಸಿಬ್ಬಂದಿ ಇದ್ದರು.
---
ಕ್ಯೂಆರ್ ಕೋಡ್ ಬಿಡುಗಡೆ
ಸೊಸೈಟಿಗೆ ಹಣ ಪಾವತಿಸಲು ಅನುಕೂಲವಾಗುವಂತೆ ಕ್ಯೂಆರ್ ಕೋಡ್‌ನ್ನು ಶಿವಕುಮಾರ್ ಬಿಡುಗಡೆ ಮಾಡಿದರು. ಸೊಸೈಟಿಯಿಂದ ಷೇರುದಾರರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಕೊಡಲಾಗುತ್ತದೆ. ಈ ನಿಟ್ಟಿನಲ್ಲಿ ಕ್ಯೂಆರ್ ಕೋಡ್ ಬಿಡುಗಡೆ ಆಗಿದ್ದು, ಇದರಿಂದ ಷೇರುದಾರರು ಸುಲಭವಾಗಿ ವಹಿವಾಟು ನಡೆಸಬಹುದಾಗಿದೆ ಎಂದರು.
---