ಹಿರಿಯೂರು ತಾಲೂಕು ಹೊಸಯಳನಾಡು ಕೆಪಿಎಸ್ ಶಾಲೆಯಲ್ಲಿ ಗುರುವಾರ ನೂತನ ತರಗತಿ ಕೊಠಡಿಗಳನ್ನು ರಾಜ್ಯಪಾಲಥಾವ ರ್‌ಚಂದ್ ಗೆಹಲೋತ್ ಉದ್ಘಾಟಿಸಿದರು. ಶ್ರೀ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ,ಸಚಿವ ಟಿ.ರಘುಮೂರ್ತಿ,ಸಂಸದ ಗೋ ವಿಂದ ಎಂ.ಕಾರಜೋಳ,ಎಂಎಲ್‌ಸಿಗಳಾದ ಕೆ.ಎಸ್.ನವೀನ್,ಚಿದಾನಂದಗೌಡ,ಸಿಇಒ ಡಾ.ಎಸ್.ಆಕಾಶ್,ಎಸ್‌ಪಿ ರಂಜಿತ್‌ಕುಮಾರ್ ಬಂಡಾರು,ರಾಜ್ಯಸ-Áಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಮತ್ತಿತರರು ಇದ್ದರು.
- ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅಭಿಮತ
- ಹೊಸಯಳನಾಡು ಕೆಪಿಎಸ್ ಶಾಲೆ ನೂತನ ಕೊಠಡಿಗಳ ಉದ್ಘಾಟನೆ
- ಕರ್ನಾಟಕ ಪಬ್ಲಿಕ್ ಶಾಲೆ
ಚಿತ್ರದುರ್ಗ: ಜ್ಞಾನದೊಂದಿಗೆ ವಿವೇಕ,ವಿಜ್ಞಾನದೊಂದಿಗೆ ಸಂವೇದನೆ,ಯಶಸ್ಸಿನೊಂದಿಗೆ ಮೌಲ್ಯಗಳು ಮತ್ತು ಹಕ್ಕುಗಳೊಂದಿಗೆ ಕರ್ತವ್ಯ ಪ್ರಜ್ಞೆ ಬೆಳೆ ಸುವುದೇ ನಿಜವಾದ ಶಿಕ್ಷಣವೆಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.
ಹಿರಿಯೂರು ತಾಲೂಕು ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ(ಕೆಪಿಎಸ್)ಗುರುವಾರ ನೂತನ ತರಗತಿ ಕೊಠಡಿಗಳು,ಪ್ರಾರ್ಥನಾ ಮಂದಿರ,ಕುಟೀರಗಳನ್ನು ಉದ್ಘಾಟಿಸಿ ಮಾತನಾಡಿದ ಅವರು,ಶಿಕ್ಷಣ ಅಂಕಗಳಿಕೆ,ಉದ್ಯೋಗಕ್ಕೆ ಸೀಮಿತವಾಗಬಾರದು. ತರಗತಿ ಕೊಠಡಿಗಳು ಮುಂದಿನ ಪೀಳಿಗೆಯ ಕನಸುಗಳಿಗೆ,ವಿಕಸಿತ ಭಾರತಕ್ಕೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಭದ್ರ ಅಡಿಪಾಯ ಒದಗಿಸುವಂಥವು.
ಇಲ್ಲಿಯ ಸೌಕರ್ಯಗಳು ದೇಶದ ಭವಿಷ್ಯದ ನಿರ್ಮಾಣಕ್ಕೆ ಪೂರಕವಾಗಿರಬೇಕು. ವಿದ್ಯಾರ್ಥಿಗಳು ಮುಂದೆ ವಿಜ್ಞಾನಿ,ವೈದ್ಯ, ಇಂಜಿನಿಯರ್,ಶಿಕ್ಷಕ,ಅಽಕಾರಿ,ಜನಪ್ರತಿನಿಽಗಳಾಗಬಹುದು. ಯಾವುದೇ ದೇಶದ ಅತಿ ದೊಡ್ಡ ಶಕ್ತಿಯೆಂದರೆ ಅದು ಪ್ರಾಕೃತಿಕ,ಆರ್ಥಿಕ ಸಂಪನ್ಮೂಲಗಳಿಗಿಂತ ಜ್ಞಾನವಂತ,ಸಂಸ್ಕಾರಯುತ ಮತ್ತು ಜವಾಬ್ದಾರಿಯುತ ನಾಗರಿಕರು ಎಂದರು.
ವಿಕಸಿತ ಭಾರತದ ಗುರಿ ಸಾಧನೆಯಲ್ಲಿ ಹೆಣ್ಣುಮಕ್ಕಳ ಪಾತ್ರವೂ ಹಿರಿದಾಗಿದೆ. ಶಿಕ್ಷಣ,ಸುರಕ್ಷತೆ ಆರೋಗ್ಯ ಮತ್ತು ನಾಯಕತ್ವ ಸಾಮರ್ಥ್ಯದೊಂದಿಗೆ ಅವರು ಸ್ವಾವಲಂಬಿಗಳಾಗಬೇಕು. ಕÊತಕ ಬುದ್ಧಿಮತ್ತೆ(ಎಐ),ರೊಬೊಟಿಕ್ಸ್,ಜೈವಿಕ ತಂತ್ರ ಜ್ಞಾನ ಮತ್ತು ಬಾಹ್ಯಾಕಾಶ ತಂತ್ರ ಜ್ಞಾನಗಳಿವತ್ತು ಮುಂಚೂಣಿಯಲ್ಲಿವೆ. ಪಠ್ಯಕ್ಕೆ ಸೀಮಿತಗೊಳಿಸದೆ ವಿದ್ಯಾರ್ಥಿಗಳನ್ನು ಕ್ರಿಯಾಶೀಲ ಚಟುವಟಿಕೆಗಳಿಗೂ ಪ್ರೋತ್ಸಾಹಿಸ ಬೇಕು.
ಅವರಲ್ಲಿ ಪರಿಸರ ಪ್ರಜ್ಞೆ ಮೂಡಿಸಿ ಪರಿಸರ ರಾಯಬಾರಿಗಳನ್ನಾಗಿ ರೂಪಿಸ ಬೇಕು. ಸಮಾಜಕ್ಕಾಗಿ ಬದುಕುವ ಮನೋಭಾವ,ಪ್ರಾ ಮಾಣಿಕತೆ,ಶಿಸ್ತು,ಆತ್ಮವಿಶ್ವಾಸ, ವೈಜ್ಞಾನಿಕ ದÊಷ್ಟಿ ಕೋನ,ಸೂಕ್ಷ÷್ಮತೆ,ತಂತ್ರಜ್ಞಾನದ ಸÊಜನಾತ್ಮಕ ಬಳಕೆ,ದೇಶಭಕ್ತಿಯನ್ನು ಅವರಲ್ಲಿ ಬೆಳೆಸ ಬೇಕು.
ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರ ಕೌಶಲಾಧಾರಿತ,ನಾವೀನ್ಯತೆ ಹಾಗೂ ವಿದ್ಯಾರ್ಥಿ ಕೇಂದ್ರಿತವಾಗಿದೆ. ಹೊಸಯಳನಾಡು ಶಾಲೆ,ಜ್ಞಾನ, ಶಿಸ್ತು, ಸಂಸÊ್ಕತಿ, ನಾವೀನ್ಯತೆ ಮತ್ತು ಶ್ರೇಷ್ಠತೆ ಕೇಂದ್ರವಾಗಿ ಬೆಳೆಯಲಿದೆ ಎಂದು ರಾಜ್ಯಪಾಲರು ವಿಶ್ವಾಸ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಸುತ್ತೂರುಮಠದ ಶ್ರೀ ಜಗದ್ಗುರು ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿ ಅವರು ಮಾತನಾಡಿ,ಉತ್ತಮ ಸೌಲಭ್ಯ ಗಳನ್ನು ಒದಗಿಸಿದರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ ಎಂಬುದಕ್ಕೆ ೬೦ ವರ್ಷ ಇತಿಹಾಸವಿರುವ ಈ ಕೆಪಿಎಸ್ ಶಾಲೆ ಸಾಕ್ಷಿ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು,ಪ್ರಸಿದ್ಧ ವಿದ್ವಾಂಸರು ಓದಿದ್ದು ಸರ್ಕಾರಿ ಶಾಲೆಗಳಲ್ಲೇ ಎಂಬುದನ್ನು ಅರಿಯಬೇಕು.
ಎಐ ಯುಗದಲ್ಲಿಂದು ಗ್ರಾಮೀಣ ಶಾಲೆಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕಿದೆ. ನಾ.ತಿಪ್ಪೇಸ್ವಾಮಿ ಮತ್ತವರ ತಂಡ ಕೆಪಿಎಸ್ ಶಾಲೆಯಲ್ಲಿ ಉಚಿತ ಶಿಕ್ಷಣಕ್ಕಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಶ್ಲಾಘಿಸಿದರು.
ಶಾಲೆ ಮಹಾಪೋಷಕ ನಾ.ತಿಪ್ಪೇಸ್ವಾಮಿ ಅವರು ಮಾತನಾಡಿ,೨೦೧೪ರ ಶಾಲಾ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಈ ಶಾಲೆ ಕಾಯಕಲ್ಪಕ್ಕೆ ನಿರ್ಧಾರವಾಯಿತು. ಸುಸಜ್ಜಿತ ಸಭಾಂಗಣ,ಇ-ಲೈಬ್ರರಿ,ಕಂಪ್ಯೂಟರ್‌ಲ್ಯಾಬ್,ವಿಜ್ಞಾನ ಪ್ರಯೋಗಾಲಯ ಗಳಿವೆ. ಅಭಿವೃದ್ಧಿಗೆ ದಾನಿಗಳು ಹಾಗೂ ಬೆಂಗಳೂರಿನ ಹಲವು ವೈದ್ಯರು ನೆರವು ನೀಡಿದ್ದಾರೆ ಎಂದರು.
ಪರಿಶಿಷ್ಟ ಪಂಗಡಗಳ ಕಲ್ಯಾಣ,ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅವರು ಮಾತನಾಡಿ,ಸರ್ಕಾರಿ ಅನುದಾನದೊಂದಿಗೆ ದಾನಿಗಳಿಂದಲೂ ೨೫ ಕೋಟಿ ರೂ.ಸಂಗ್ರಹಿಸಿ ಈ ಶಾಲೆಯನ್ನು ರಾಜ್ಯಕ್ಕೇ ಮಾದರಿಯಾಗಿ ಅಭಿವೃದ್ಧಿ ಪಡಿಸಲಾಗಿದೆ. ಜನಿಸಿದ ತಾಯಿ- ತಂದೆ ಬಳಿಕ ನಮ್ಮ ಜೀವನ ಮುಂದುವರಿಯುವುದು ಶಾಲೆಗಳಲ್ಲಿ.ಉತ್ತಮ ಶಿಕ್ಷಣ,ಒಳ್ಳೆಯ ಸಂಸ್ಕಾರ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗಿದೆ ಎಂದರು.
ಸಂಸದ ಗೋವಿಂದ ಎಂ.ಕಾರಜೋಳ,ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ತಿಮ್ಮಶೆಟ್ಟಿ ಅವರು ಮಾತನಾಡಿದರು. ಎಂಎಲ್‌ಸಿಗಳಾದ ಕೆ.ಎಸ್.ನವೀನ್,ಚಿದಾನಂದಗೌಡ,ಜಿಪಂ ಸಿಇಒ ಡಾ.ಎಸ್.ಆಕಾಶ್,ಎಸ್‌ಪಿ ರಂಜಿತ್‌ಕುಮಾರ್ ಬಂಡಾರು,ರಾಜ್ಯಸ-Áಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಮತ್ತಿತರರು ಇದ್ದರು.
ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ಅವಽ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿತ್ತು ಎಂದು ಸಂಸ ದ ಗೋವಿಂದ ಎಂ.ಕಾರಜೋಳ ಹೇಳಿದರು. ಎನ್‌ಇಪಿಯಿಂದಾಗಿ ರಾಜ್ಯದ ವಿದ್ಯಾರ್ಥಿಗಳು ೨ ವರ್ಷ ತ್ರಿಭಾಷಾ ಪಠ್ಯ ಅಭ್ಯಾಸ ಮಾಡಿದ್ದಾ ರೆ. ಆದರೆ ಸಿದ್ದರಾಮಯ್ಯ ಸರ್ಕಾರ ಎನ್‌ಇಪಿ ತಿರಸ್ಕರಿಸಿ ರಾಜ್ಯಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ಹೇಳಿದ್ದರು.
ಆದರೆ ಈಗ ಎನ್‌ಇಪಿ ಅಥವಾ ಎಸ್‌ಇಪಿ ಇಲ್ಲದೆ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯದ ಅನೇಕ ರಾಜಕಾರ ಣಿಗಳ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಿಬಿಎಸ್‌ಸಿಯಂಥ ತ್ರಿಭಾಷ ಪಠ್ಯ ನೀತಿ ಇದೆ,ಎಸ್‌ಸಿ,ಎಸ್‌ಟಿ,ಬಡ ವಿದ್ಯಾರ್ಥಿಗಳು ಓದುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ನೀತಿಯಡೆ ಸ್ಪಷ್ಟತೆ ಇಲ್ಲದಂತಾಗಿದೆ. ಈ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚಿಸುವಂತೆ ಸಂಸದರು,ಸಚಿವ ರಘುಮೂರ್ತಿ ಅವರಿಗೆ ಮನವಿ ಮಾಡಿದರು.