ವಚನ ಕಾರ್ತಿಕ ಮಹೋತ್ಸವದ ಅಂಗವಾಗಿ ಚಿತ್ರದುರ್ಗದಲ್ಲಿ ಏರ್ಪಡಿಸಿದ್ದ ಕರ‍್ಯಕ್ರಮದಲ್ಲಿ ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ,ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಸಿ.ಎನ್.ಚಂದ್ರಶೇಖರ್,ವಿ.ಕೆ.ಶAಕರಪ್ಪ ಇತರರು ಇದ್ದರು.
- ಬಸವಾದಿ ಶರಣರು
- ವಚನ ಕಾರ್ತೀಕ ಮಹೋತ್ಸವ
- ಮುರುಘಾಮಠ
ಚಿತ್ರದುರ್ಗ: ಆಡುಭಾಷೆಯಲ್ಲಿ ವಚನಗಳನ್ನು ರಚಿಸಿದ್ದ ಬಸವಾದಿ ಶರಣರು ಸಮಾನತೆ, ಸಮಸಮಾಜ,ಕಾಯಕದ ಮೂಲಕ ದೈವತ್ವಕ್ಕೆ ಏರಿದ್ದಾರೆ ಎಂದು ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹೇಳಿದರು. ಮುರುಘಾಮಠದಲ್ಲಿ ವಚನ ಕಾರ್ತೀಕ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಶಿವಶರಣರಾದ ರಕ್ಕಸ ಬೊಮ್ಮಿತಂದೆ ಮತ್ತು ರಕ್ಕಸ ಬೊಮ್ಮಯ್ಯಗಳ ಮೈದುನ ರಾಮ ಯ್ಯನವರ ಸ್ಮರಣೆ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು,ಕಾಯಕ ಮಾಡುವ ಶ್ರೇಷ್ಠ ಚಿಂತಕರನ್ನು ಬಸವಣ್ಣನವರು ಅತೀ ಉನ್ನತ ಹುದ್ದೆ ಗೇರಿಸಿದ್ದಾರೆ.
೬೬ ವಚನಕಾರರ ವಚನ ವಿಶ್ಲೇಷಣೆ ಮೂಲಕ ಸಮಾಜಕ್ಕೆ ಅವರ ವಿಶೇಷ ಚಿಂತನೆಗಳ ಸಂದೇಶ ನೀಡುವ ಪ್ರಯತ್ನ ಶ್ರೀಮಠ ದಿಂದ ನಡೆಯುತ್ತಿದೆ. ವಚನಸಾಹಿತ್ಯ ಕನ್ನಡಕ್ಕೆ ಶ್ರೇಷ್ಠತೆಯನ್ನು ತಂದುಕೊಟ್ಟಿದೆ. ಶ್ರೀಮಠದ ಇಂತಹ ಕಾರ್ಯಗಳಿಗೆ ಸರ್ಕಾರದ ಪ್ರೋತ್ಸಾಹವೂ ಅಗತ್ಯವಿದೆ ಎಂದರು.
ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ನ.೨೩ರಂದು ನಡೆಯಲಿರುವ ವಚನ ಕಾರ್ತೀಕ ಮಹೋತ್ಸವದ ಸಮಾರೋಪದಲ್ಲಿ ಶರಣಶರಣೆಯರ ೫೦೦ ವಚನಗಳನ್ನು ಪಠಣ ಮಾಡುವವರಿಗೆ ೧೦ ಸಾವಿರ ನಗದು ಪುರಸ್ಕಾರ ನೀಡಲಾಗುವುದು. ವೇಷಭೂಷಣ,ಕಂಠಪಾಠ ಸ್ಪರ್ಧೆಗಳು ಮತ್ತು ವಿಚಾರ ಸಂಕಿರಣವನ್ನು ಅಂದು ಏರ್ಪಡಿಸಲಾಗಿದೆ ಎಂದರು.
ಬಸವೇಶ್ವರ ವಿದ್ಯಾಸಂಸ್ಥೆ ಕರ‍್ಯದರ್ಶಿ ವಿ.ಕೆ.ಶಂಕರಪ್ಪ ಶರಣ ರಕ್ಕಸ ಬೊಮ್ಮಿತಂದೆ ಕುರಿತು,ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಕರ‍್ಯ ದರ್ಶಿ ಎಚ್‌ಎಸ್‌ಟಿ ಸ್ವಾಮಿ ಅವರು ಶರಣ ರಕ್ಕಸ ಬೊಮ್ಮಯ್ಯನ ಮೈದುನ ರಾಮಯ್ಯ ಕುರಿತು ಮಾತನಾಡಿದರು.
ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಎಸ್.ಎನ್.ಚಂದ್ರಶೇಖರ್, ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ,ಎಂ.ವಿ.ನಾಗರಾಜ್ ಇತರರು ಇದ್ದರು. ಜಮುರಾ ಸಂಗೀತ ಕಲಾವಿದ ಉಮೇಶ್ ಪತ್ತಾರ್ ವಚನ ಪ್ರಾರ್ಥಿಸಿದರು. ಡಾ.ಎಂ.ಆರ್.ಚಿದಾನAದಪ್ಪ ಸ್ವಾಗತಿಸಿ, ಕೆಪಿಎಂ ಗಣೇಶಯ್ಯ ವಂದಿಸಿದರು.ಉಪನ್ಯಾಸಕ ಟಿ.ಎಸ್.ಗಿರೀಶ್ ನಿರೂಪಿಸಿದರು.