ರಾಜ್ಯಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಪದಗ್ರಹಣ ಸಮಾರಂಭ ದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಆರ್.ಶ್ರೀನಿವಾಸ, ಎ.ಮಲ್ಲಿಕಾರ್ಜುನ, ಎಸ್.ರಾಜಪ್ಪ, ರಮೇಶ್, ಡಾ.ಚಂದ್ರಕಾAತ ಎಸ್.ನಾಗಸಮುದ್ರ, ಬಿ.ವಿ.ತುಕಾರಾಂರಾವ್, ಕೆ.ಪ್ರಕಾಶ್, ರುದ್ರಮುನಿ ಎಚ್.ಪೂಜಾರ್, ವಿಶ್ವನಾಥ್, ಕೆ.ಟಿ.ತಿಮ್ಮಾರೆಡ್ಡಿ, ಬಾಗೇಶ್ ಉಗ್ರಾಣ ಇತರರು ಇದ್ದರು.
- ನೌಕರರಿಗೆ ಮಾಲತೇಶ್ ಮುದ್ದಜ್ಜಿ ಮನವಿ
- ಕನ್ನಡ ರಾಜ್ಯೋತ್ಸವ, ಪದಗ್ರಹಣ ಸಮಾರಂಭ
- ಕನ್ನಡ ರಾಜ್ಯೋತ್ಸವ
ಚಿತ್ರದುರ್ಗ: ಆಡಳಿತ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಎಲ್ಲರೂ ತಪ್ಪದೇ ಕಚೇರಿಗಳಲ್ಲಿ ಬಳಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ ಮುದ್ದಜ್ಜಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ನಾಮನಿರ್ದೇಶಿತ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಕನ್ನಡವನ್ನು ಉಳಿಸಿ, ಬೆಳೆಸುವ ಗುರುತರ ಹೊಣೆಗಾರಿಕೆ ರಾಜ್ಯ ಸರ್ಕಾರಿ ನೌಕರರ ಮೇಲಿದೆ. ಭಾಷೆ ಬೆಳವಣಿಗೆಗೆ ಶ್ರಮಿಸಿದ ಸಾಹಿತಿಗಳು, ಕವಿಗಳು ವಿದ್ವಾಂಸರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲರಲ್ಲೂ ಸಾಹಿತ್ಯಾಭಿರುಚಿ ಬೆಳೆಯಬೇಕು. ಹಲವು ವೈಶಿಷ್ಟ್ಯಗಳಿಂದ ಕೂಡಿರುವ ಪುಣ್ಯಭೂಮಿ ಕನ್ನಡನಾಡಿನಲ್ಲಿ ಜನ್ಮ ಪಡೆದ ನಾವುಗಳೇ ಧನ್ಯರು ಎಂದರು.
ಜಿಲ್ಲಾ ಸಂಘದ ನಾಮನಿರ್ದೇಶನ ಸದಸ್ಯರು ಸಂಘಟನೆ ಜತೆಗೆ ಕೈಜೋಡಿಸಬೇಕು. ಸರ್ಕಾರಿ ನೌಕರರಿಗೆ ಸೇವೆ ಸಲ್ಲಿಸುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಮಾತನಾಡಿ, ಕನ್ನಡನಾಡು ಹಲವು ವೈವಿಧ್ಯಗಳ ಬೀ ಡು. ಇಲ್ಲಿನ ಪ್ರತಿಯೊಂದು ಅಂಶವು ನಮ್ಮಲ್ಲಿ ರಾಷ್ಟಾçಭಿಮಾನಕ್ಕೆ ಪೂರಕವಾಗಿದೆ. ಇಂತಹ ಅದ್ಭುತ ಕನ್ನಡ ನಾಡು ಉದಯವಾಗಲು ಹಲವು ಮಹನೀಯರು ಶ್ರಮಿಸಿದ್ದಾರೆ ಎಂದರು.
ಕನ್ನಡ ಭಾಷೆ,ಸಂಸ್ಕೃತಿಯ ಏಕೀಕರಣ ಮತ್ತು ಉತ್ತೇಜನಕ್ಕಾಗಿ ೧೯೬೨ರಲ್ಲಿ ಸ್ಥಾಪಿತವಾದ ಕರ್ನಾಟಕ ಸಂಯುಕ್ತ ರಂಗ ಎಂಬ ಸಂಘಟನೆ ಶ್ರಮಿಸಿತು. ಈ ಸಂಘಟನೆ ೧೯೬೩ರಲ್ಲಿ ಮೊದಲ ಬಾರಿಗೆ ರಾಜ್ಯೋತ್ಸವ ಆಚರಣೆಯನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಿತ್ತು. ಇದು ರಾಜ್ಯೋತ್ಸವ ಆಚರಣೆಗೆ ನಾಂದಿ ಹಾಡಿತು ಎಂದರು.
ಸAಘದ ಜಿಲ್ಲಾ ಕರ‍್ಯದರ್ಶಿ ಆರ್.ಶ್ರೀನಿವಾಸ, ಖಜಾಂಚಿ ಎ.ಮಲ್ಲಿಕಾರ್ಜುನ, ರಾಜ್ಯಪರಿಷತ್ ಸದಸ್ಯ ಎಸ್.ರಾಜಪ್ಪ, ಹಿರಿಯೂರು ಘಟಕದ ಅಧ್ಯಕ್ಷ ರಮೇಶ್, ಹಿರಿಯ ಉಪಾಧ್ಯಕ್ಷ ಡಾ.ಚಂದ್ರಕಾAತ ಎಸ್.ನಾಗಸಮುದ್ರ, ಉಪಾಧ್ಯಕ್ಷರಾದ ಬಿ.ವಿ.ತುಕಾರಾಂ ರಾ ವ್, ಕೆ.ಪ್ರಕಾಶ್, ರುದ್ರಮುನಿ ಎಚ್.ಪೂಜಾರ್, ಕರ‍್ಯಾಧ್ಯಕ್ಷ ವಿಶ್ವನಾಥ್, ನಿಕಟಪೂರ್ವ ಅಧ್ಯಕ್ಷರಾದ ಕೆ.ಟಿ.ತಿಮ್ಮಾರೆಡ್ಡಿ, ಬಾಗೇಶ್ ಉಗ್ರಾಣ ಇತರರು ಇದ್ದರು.
ಜಿಲ್ಲೆಯ ಎಲ್ಲ ವ್ಯಾಪಾರ, ವಹಿವಾಟು ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕರುನಾಡು ವಿಜಯಸೇನೆ ಕಾರ‍್ಯಕರ್ತರು ಶನಿವಾರ ಚಿತ್ರದುರ್ಗದಲ್ಲಿ ಜಿಲ್ಲಾಽಕಾರಿ ಟಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು. ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್, ಗೋಪಿನಾಥ್, ವೀಣಾ ಗೌರಣ್ಣ, ಜಗ ದೀಶ್, ಅಖಿಲೇಶ್ ಇತರರು ಇದ್ದರು.