ಹೊಸದಾಗಿ ಗಣಿಗಾರಿಕೆಗೆ ಪರವಾನಿಗೆ ನೀಡಬಾರದು ಎನ್ನುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ರೈತ ಸಂಘದ ಕಾರ್ಯಕರ್ತರು ಎಡಿಸಿ ಬಿ.ಟಿ. ಕುಮಾರಸ್ವಾಮಿ ಬಳಿ ಗಣಿಗಾರಿಕೆಯಿಂದಾಗುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು. ಉಗ್ರನರಸಿಂಹ ಗೌಡ್ರು, ಧನಂಜಯ, ವಸಂತ್‌ಕುಮಾರ್, ಶಂಕರಮೂರ್ತಿ ಹಾಗೂ ವಿ.ಪಾಳ್ಯ ಗ್ರಾಮಸ್ಥರು ಇದ್ದರು. 
ಚಿತ್ರದುರ್ಗ

ಗಣಿಬಾಽತ ಗ್ರಾಮಗಳ ಪುನಶ್ಚೇತನಕ್ಕೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಪಾದಯಾತ್ರೆ
  • ಡಿಸಿ ಕಚೇರಿ ಮುಂದೆ ಪ್ರತಿಭಟನೆ
  • ಹೊಸದಾಗಿ ಗಣಿಗಾರಿಕೆಗೆ ಪರವಾನಿಗೆ ನೀಡಬಾರದು
ಭೀಮಸಮುದ್ರ: ಗಣಿಬಾಽತ ಗ್ರಾಮಗಳ ಪುನಶ್ಚೇತನಕ್ಕೆ ಒತ್ತಾಯಿಸಿ, ಹೊಸದಾಗಿ ಗಣಿಗಾರಿಕೆಗೆ ಪರವಾನಿಗೆ ನೀಡಬಾರದು ಎನ್ನುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ವಿ. ಪಾಳ್ಯದಿಂದ ಚಿತ್ರದುರ್ಗಕ್ಕೆ ಪಾದಯಾತ್ರೆ ನಡೆಸಿದ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಡಿಸಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ, ರಾಜ್ಯ ರೈತ ಸಂಘದ ಜಿಲ್ಲಾ ಮತ್ತು ಭೀಮಸಮುದ್ರ ಘಟಕ, ಕೆಆರ್‌ಎಸ್ ಪಕ್ಷದ ಸಹಯೋಗದಲ್ಲಿ ನಡೆದ ಪಾದಯಾತ್ರೆ ವಿ. ಪಾಳ್ಯದಲ್ಲಿ ಆರಂಭವಾಗಿ ಭೀಮಸಮುದ್ರ, ಬೊಮ್ಮೇನಹಳ್ಳಿ, ಹಿರೇಗುಂಟನೂರು, ಹಳಿಯೂರು, ಮಾನಂಗಿ, ಸಿದ್ದಾಪುರ, ಮಾಳಪ್ಪನಹಟ್ಟಿ ಮಾರ್ಗವಾಗಿ ಡಿಸಿ ಕಚೇರಿ ತಲುಪಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಮಾತನಾಡಿ, ಗಣಿಯಿಂದ ಹೊರಸೂಸುವ ಧೂಳು ಈ ಭಾಗದ ೧೫ ರಿಂದ ೨೦ ಗ್ರಾಮಗಳ ತೆಂಗು, ಅಡಿಕೆ, ಬಾಳೆ, ಸೇವಂತಿಗೆ, ಕನಕಾಂಬರ ಸೇರಿ ಹಲವು ಬೆಳೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಸಾಕಷ್ಟು ಮಂದಿ ಆನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಶಾಲಾ, ಕಾಲೇಜಿಗೆ ಓಡಾಡುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಜಿಲ್ಲೆಯಲ್ಲಿ ಗಣಿಗಾರಿಕೆ ಇದೆ. ಆದರೆ, ಅದರ ಅನುದಾನದಿಂದ ಯಾವುದೇ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನಾವು ಮೈನಿಂಗ್ ವಿರೋಽಗಳಲ್ಲ. ಆದರೆ, ರಸ್ತೆ ಬದಲು ರೈಲುಗಳಲ್ಲಿ ಅದಿರು ಸಾಗಿಸಿದರೆ ಜನರು ನೆಮ್ಮದಿಯಿಂರಬಹುದು. ಈ ಭಾಗದಲ್ಲಿ ಸಾಕಷ್ಟು ನಿರುದ್ಯೋಗಿ ಯುವಕರಿದ್ದರೂ ಅನ್ಯ ರಾಜ್ಯದವರಿಗೆ ಕೆಲಸ ನೀಡಲಾಗಿದೆ.
ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಂತೆ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರು. ರೈತಸಂಘ ಭೀಮಸಮುದ್ರ ಘಟಕದ ಅಧ್ಯಕ್ಷ ಶಂಕರಮೂರ್ತಿ ಮಾತನಾಡಿ, ಗಣಿಬಾಽತ ಎಲ್ಲ ಹಳ್ಳಿಗಳಲ್ಲೂ ಕುಡಿಯುವ ನೀ ರಿನ ವ್ಯವಸ್ಥೆ ಕಲ್ಪಿಸಬೇಕು. ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು. ಉಚಿತ ಆರೋಗ್ಯ ತಪಾಸಣೆ, ಶಸöಚಿಕಿತ್ಸೆ, ತುರ್ತು ಆಂಬುಲೆನ್ಸ್ಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.
ಸಮಿತಿ ಸದಸ್ಯ ವಸಂತ್‌ಕುಮಾರ್ ಮಾತನಾಡಿ, ನಮ್ಮ ಭಾಗದಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಒತ್ತು ಕೊಡುತ್ತಿಲ್ಲ. ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ಪಾದಯಾತ್ರೆ ಮೂಲಕ ಸುಮಾರು ೨೧ ಹಕ್ಕುಗಳ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಕೋರಿದರು.
ರೈತ ಮುಖಂಡರಾದ ಕೆ.ಪಿ. ಭೂತಯ್ಯ, ಹೊರಕೇರಪ್ಪ, ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಸುರೇಶ್‌ಬಾಬು, ಹುಣಸೆಕಟ್ಟೆ ಕಾಂತರಾಜ್, ಬಳ್ಳಾರಿ ಶ್ರೀಶೈಲ, ಮಲ್ಲಿಕಾರ್ಜುನ್, ಎಂ.ಎನ್.ಕೆ. ನಾಯ್ಡು, ಉಗ್ರನರಸಿಂಹ ಗೌಡ್ರು, ಪ್ರಸನ್ನಕುಮಾರ್, ಕರಿಬಸಣ್ಣ ಇತರರು ಇದ್ದರು.