ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಮಹರ್ಷಿ ಭಗೀರಥ ಜಯಂತ್ಯುತ್ಸವದಲ್ಲಿ ಶಿವಣ್ಣ ಗಂಜಿಕಟ್ಟೆ, ಎಸ್. ನಾಗರಾ ಜ, ಡಾ.ಕೆ.ಜೆ. ಕಾಂತರಾಜ್, ಡಿ.ಎಸ್. ಸುಮಾ, ಡಾ.ಬಿ.ಎಂ. ಗುರುನಾಥ್, ಪಾಪಣ್ಣ, ಗೋವಿಂದರಾಜ್, ಎನ್. ವೀರೇಶ್ ಇತರರು ಇದ್ದರು.
- ನಿವÊತ್ತ ಡಿವೈಎಸ್‌ಪಿ ಎಸ್. ನಾಗರಾಜ ಕಳವಳ
- ಜಿಲ್ಲಾಡಳಿತದಿಂದ ಶ್ರೀ ಭಗೀರಥ ಜಯಂತ್ಯುತ್ಸವ
- ಭಗೀರಥ ಮಹರ್ಷಿಯ ಛಲ
ಚಿತ್ರದುರ್ಗ: ದೇವಗಂಗೆ ಧರೆಗಿಳಿಸಿದ ಭಗೀರಥರ ಪ್ರಯತ್ನದಿಂದ ಭೂಮಂಡಲದ ಸಕಲ ಜೀವರಾಶಿಗಳಿಗೆ ಒಳಿತಾಗಿದೆ ಎಂದು ಶ್ರೀ ಭಗೀರಥ ಜಿಲ್ಲಾ ಉಪ್ಪಾರ ಸಂಘದ ಗೌರವ ಅಧ್ಯಕ್ಷ, ನಿವÊತ್ತ ಡಿವೈಎಸ್‌ಪಿ ಎಸ್. ನಾಗರಾಜ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಉಗಳ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಭಗೀರಥ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದರು.
ಉಪ್ಪಾರರ ಕುಲತಿಲಕ, ರಾಜ ಭಗೀರಥ ಮಹಾನ್ ಛಲಗಾರ, ಪ್ರಯತ್ನಶೀಲ ವ್ಯಕ್ತಿಯಾಗಿದ್ದರು. ರಾಜ್ಯಭಾರ ತ್ಯಜಿಸಿ, ಕಪಿಲ ಮಹರ್ಷಿ ಶಾಪದಿಂದ ಸುಟ್ಟು ಭಸ್ಮವಾಗಿದ್ದ ಸಗರ ಚಕ್ರವರ್ತಿಯ ಮಕ್ಕಳ ಸದ್ಗತಿಗೆ ಹಿಮಾಲಯದಲ್ಲಿ ಕಠಿಣ ತಪಸ್ಸು ಮಾಡಿದರು. ಭಗೀರಥ ಮಹರ್ಷಿಯ ಛಲ, ಪ್ರಯತ್ನ ಮತ್ತು ಸಾಧನೆಗಳ ಆದರ್ಶದೊಂದಿಗೆ ಸಮಾಜ ಸಂಘಟಿತವಾಗಬೇಕೆAದು ತಿಳಿಸಿದರು.
ದೇಶದ ೧೮ ರಾಜ್ಯಗಳಲ್ಲಿ ಉಪ್ಪಾರ ಸಮುದಾಯವಿದೆ. ಸ್ಥಳೀಯವಾಗಿ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿದೆ. ಕರ್ನಾಟಕದಲ್ಲಿ ಅಽಕ ಸಂಖ್ಯೆಯಲ್ಲಿದ್ದರೂ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರಕಿಲ್ಲ. ರಾಜ್ಯ ಉಪ್ಪಾರ ಅಭಿವÊದ್ಧಿ ನಿಗಮದ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಽಕಾರದ ಅಧ್ಯಕ್ಷ ಶಿವಣ್ಣ ಗಂಜಿಕಟ್ಟೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಅಽಕಾರಾವಽಯಲ್ಲೇ ಎಲ್ಲ ಜಾತಿಗಳ ಮಹಾಪುರುಷರ ಜಯಂತಿಗಳನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಅನುವು ಮಾ ಡಿಕೊಟ್ಟಿದ್ದಾರೆ. ಉಪ್ಪಾರ ಸಮಾಜ ಇತರ ಸಮುದಾಯಗಳೊಂದಿಗೆ ಸಾಮರಸ್ಯದಿಂದ ಬದುಕುವ ಶಾಂತಿಯ ಗುಣ ಹೊಂದಿದೆ ಎಂದರು.
ಉಪ ವಿಭಾಗಾಽಕಾರಿ ಡಾ.ಕೆ.ಜೆ. ಕಾಂತರಾಜು ಮಾತನಾಡಿ, ಭಗೀರಥ ಮಹರ್ಷಿಯನ್ನು ಭೂ ಮಂಡಲದ ಪ್ರತಿ ಜೀವಿಯೂ ಸ್ಮರಿಸಬೇಕು. ಗಂಗೆಯನ್ನು ಧರೆಗೆ ತರುವ ಮೂಲಕ ಚರಾಚರ ವಸ್ತುಗಳಿಗೆ ಬದುಕು ನೀಡಿದ್ದಾರೆ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಭಗೀರಥರು ಬ್ರಹ್ಮ ಮತ್ತು ಈಶ್ವರನನ್ನು ಒಲಿಸಿ ಗಂಗೆಯನ್ನು ತಂದರು. ಈ`ಭಗೀರಥ ಪ್ರಯತ್ನ' ಇಂದಿನ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗಿದೆ. ವಿದ್ಯಾಭ್ಯಾಸವನ್ನು ತಪಸ್ಸಿನಂತೆ ಸ್ವೀಕರಿಸಿ ಉನ್ನತ ಗುರಿ ತಲುಪಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಗೋವಿಂದರಾಜು ಮಾತನಾಡಿ, ಭಗೀರಥ ಮಹರ್ಷಿಗಳ ಜಯಂತಿ ಆಚರಿಸುತ್ತಿರುವುದು ಸಂತಸದ ವಿಷಯ. ಉ ಪ್ಪಾರ ಸಮುದಾಯ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಽಸಬೇಕಿದೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಾಗ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕ್ಪçತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ ಸ್ವಾಗತಿಸಿದರು. ಚಿಕ್ಕೋಬನಹಳ್ಳಿ ಸಿ.ಎಂ. ಬಾಬು ತಂಡದವರು ಗೀತಗಾಯನ ಪ್ರಸ್ತುತ ಪಡಿಸಿದರು. ಆಕಾಶವಾಣಿಯ ಡಾ. ನವೀನ್‌ಮಸ್ಕಲ್ ನಿರೂಪಿಸಿದರು. ಜಿಪಂ ಸಹಾಯಕ ಯೋಜನಾಽಕಾರಿ ಡಿ.ಎಸ್. ಸುಮಾ, ಜಿಲ್ಲಾ ಖಜಾನಾಽಕಾರಿ ಅಶೋಕ್, ಜಿಪಂ ಮಾಜಿ ಸದಸ್ಯ ಪಾಪಣ್ಣ ,ಶ್ರೀ ಭಗೀರಥ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಎನ್. ವೀರೇಶ್, ಪದಾಽಕಾರಿಗಳಾದ ಎನ್. ಮಹೇಶ್, ಎಚ್. ಅಜ್ಜಪ್ಪ, ಎಸ್. ಸಿದ್ದಪ್ಪ ಸೇರಿ ಉಪ್ಪಾರ ಸಮಾಜದ ಮುಖಂಡರು, ಗಣ್ಯರು ಭಾಗವಹಿಸಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಭಗೀರಥರ ಭಾವಚಿತ್ರದ ಮೆರವಣಿಗೆ ನಡೆಯಿತು. ನಗರದ ಯುನಿಯನ್ ಪಾರ್ಕ್ ಬಳಿ ಎಸಿ ಕಾಂತರಾಜ್ ಶ್ರೀ ಭಗೀರಥ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಉರುಮೆ, ಕಹಳೆ, ನಾಸಿಕ್‌ಡೊಲ್ ಇನ್ನಿತರ ಜಾನಪದ ಕಲಾತಂಡಗಳು ಮೆರವಣಿಗೆ ಮೆರಗು ನೀಡಿದವು. ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಪಾರ್ಕ್ನಿಂದ ಆರಂಭವಾದ ಮೆರವಣಿಗೆ ಗಾಂಽ ವÊತ್ತ, ಪ್ರವಾಸಿ ಮಂದಿರ, ಡಾ.ಬಿ.ಆರ್.ಅಂಬೇಡ್ಕರ್ ವÊತ್ತ, ಮದಕರಿ ನಾಯಕ ವÊತ್ತದ ಮಾರ್ಗವಾಗಿ ಮಹರ್ಷಿ ವಾಲ್ಮೀಕಿ ಭವನ ತಲುಪಿತು.