ವಿಶ್ವ ಪರಿಸರ ದಿನದ ಅಂಗವಾಗಿ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಅನಂತಕೃಷ್ಣ ಸಭಾಂಗಣದಲ್ಲಿ ಚಿತ್ರಗಳನ್ನು ಬಿಡಿಸುತ್ತಿರುವ ಚಿಣ್ಣರು.
- ಚಿಣ್ಣರ ಕೈಯಲ್ಲರಳಿದ ಪರಿಸರ ಪ್ರೇಮ
- ವಿಶ್ವ ಪರಿಸರ ದಿನಾಚರಣೆ
- ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ
ಚಿತ್ರದುರ್ಗ: ಅಲ್ಲಿ ಚಿಣ್ಣರ ಕಲರವ, ವರ್ಣಮಯ ಚಿತ್ತಾರ ಬಿಡಿಸುವ ತವಕ, ಪುಟಾಣಿಗಳ ಕೈಯಲ್ಲೊಂದು ಕಾರ್ಡ್ಬೋರ್ಡ್. ಚೀಲ ದಲ್ಲಿ ಕಲರ್ ಪೆನ್ಸಿಲ್, ಬಣ್ಣದ ಬಾಟಲಿ, ಬ್ರಷ್. ಕಣ್ಣಿಗೆ ಗೋಚರಿಸುವ ಪರಿಸರವನ್ನು ಡ್ರಾಯಿಂಗ್‌ಶೀಟ್ ಚೌಕಟ್ಟಿನಲ್ಲಿ ಸೆರೆಯಾಗಿ ಸುವ ಕೌತುಕ.
ಕನ್ನಡ ನಂ.೧ ದಿನಪತ್ರಿಕೆ ವಿಜಯವಾಣಿ, ಅರಣ್ಯ ಇಲಾಖೆ, ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ವಿಶ್ವ ಪರಿಸ ರ ದಿನಾಚರಣೆ ಅಂಗವಾಗಿ ನಗರದ ಎಸ್‌ಆರ್‌ಎಸ್ ಕಾಲೇಜಿನ ಅನಂತಕೃಷ್ಣ ಸಭಾಂಗಣದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಆ ಯೋಜಿಸಿದ್ದ ಜಿಲ್ಲಾಮಟ್ಟದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯ ಚಿತ್ರಣವಿದು.
ಬೆಳಗ್ಗೆ ಒಂಬತ್ತು ಗಂಟೆಯಿAದಲೇ ಹೆಸರು ನೋಂದಾಯಿಸಲು ವಿದ್ಯಾರ್ಥಿಗಳು ಶಾಲೆಯ ಕಡೆ ಧಾವಿಸಿದರು. ಅವರ ಸಹಾಯಕ್ಕೆ ಚಿತ್ರಕಲಾ ಶಿಕ್ಷಕರೂ ಹಾಜರಿದ್ದರು. ಶಿಸ್ತಿನ ಸಿಪಾಯಿಗಳಂತೆ ಸಾಲಾಗಿ ನಿಂತು, ಕೌಂಟರ್‌ಗಳಲ್ಲಿ ಹೆಸರು ನೋಂದಾಯಿಸಿ ಸ್ಪರ್ಧೆ ನಡೆಯುವ ಸ್ಥಳಕ್ಕೆ ತೆರಳಿ ಆಸೀನರಾದರು.
ಉದ್ಘಾಟನಾ ಸಮಾರಂಭ ಮುಗಿದು, ಕೈಗೆ ಡ್ರಾಯಿಂಗ್ ಶೀಟ್‌ಗಳು ಬಂದಾಗ ಆಡಿಟೋರಿಯಂ ಚಿತ್ರಣವೇ ಬದಲಾಯಿತು. ಬ್ಯಾ ಗಿನಲ್ಲಿದ್ದ ವಸ್ತುಗಳನ್ನು ಎದುರಿಗೆ ಜೋಡಿಸಿಕೊಂಡು ಕುಳಿತರು. ಹಲವರು ವೃತ್ತಾಕಾರದಲ್ಲಿ ಗುಂಪು-ಗುAಪಾಗಿ ಕುಳಿತರು.
೫,೬,೭ ನೇ ತರಗತಿಯ ಜೂನಿಯರ್, ೮, ೯, ೧೦ ನೇ ತರಗತಿಯ ಸೀನಿಯರ್ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಕೃತಿಯಿಂದ ಸ್ಪೂರ್ತಿ ಪಡೆಯೋಣ, ಹವಾಮಾನ ಸಂರಕ್ಷಣೆಗಾಗಿ ನಮ್ಮೆಲ್ಲರ ಭವಿಷ್ಯಕ್ಕಾಗಿ ಥೀಮ್ ನಿಗದಿಪಡಿಸಲಾಗಿತ್ತು.
ಸ್ಪರ್ಧೆಗೂ ಮುನ್ನ ಮತ್ತೊಮ್ಮೆ ವಿಷಯಗಳನ್ನು ಖಚಿತ ಪಡಿಸಿಕೊಂಡ ಚಿಣ್ಣರು ನಿಧಾನವಾಗಿ ಪೆನ್ಸಿಲ್‌ಗಳಿಂದ ಗೆರೆಗಳನ್ನು ಮೂಡಿ ಸತೊಡಗಿದರು. ಸಸ್ಯ, ಕೋಟೆ, ಸರೋವರ, ರಸ್ತೆಯಲ್ಲಿ ವಾಹನ ಸಂಚಾರ, ಭೂಮಿ ಸಂಕೇತಿಸುವ ವೃತ್ತ ಹೀಗೆ ಔಟ್‌ಲೈನ್‌ಗಳು ಡ್ರಾಯಿಂಗ್ ಶೀಟಿನಲ್ಲಿ ಅರಳತೊಡಗಿದವು.
ಮುಂದಿನ ಹಂತ ಬಿಡಿಸಿದ ಚಿತ್ರಗಳಿಗೆ ಬಣ್ಣ ತುಂಬಿದರು. ಬಹುಪಾಲು ಚಿತ್ರಗಳಲ್ಲಿ ಹಸಿರು ಬಣ್ಣವೇ ಪ್ರಧಾನವಾಗಿ ಕಂಡು ಬಂತು. ಕೆಲ ಮಕ್ಕಳು ವಾಹನಗಳ ದಟ್ಟಣೆಯಿಂದಾಗುವ ದುಷ್ಪರಿಣಾಮದ ದೃಶ್ಯಗಳನ್ನು ಕಟ್ಟಿಕೊಡುವಲ್ಲಿ ಮಗ್ನರಾಗಿದ್ದರು.
ಸ್ಪರ್ಧೆ ಅವಽ ಮುಗಿಯುತ್ತ ಬಂದರೂ ಮಕ್ಕಳಲ್ಲಿ ಉತ್ಸಾಹ ಕುಗ್ಗಿರಲಿಲ್ಲ. ಉಳಿದ ಅವಽಯ ಬಗ್ಗೆ ನೆನಪು ಮಾಡಿಕೊಟ್ಟಾಗಗೆಲ್ಲ, ಇಷ್ಟು ಬೇಗ ಟೈಮ್ ಮುಗಿಯಿತಾ ಮಿಸ್, ಟೈಮ್ ಸಾಕಾಗುತ್ತಿಲ್ಲ ಸರ್ ಎನ್ನುವವರಿಗೇನೂ ಕಡಿಮೆ ಇರಲಿಲ್ಲ.
ಸ್ಪರ್ಧೆ ನಂತರ ಮಕ್ಕಳಿಗೆ ಶುರುವಾಗಿದ್ದು ಬಹುಮಾನ ಯಾವಾಗ ಕೊಡುತ್ತಾರೆ ಎಂಬ ಪ್ರಶ್ನೆ. ಶಿಕ್ಷಕರಿಂದ ಸಮಾಧಾನಕರ ಉತ್ತರ ಪಡೆದು ಮತ್ತೆ ಬ್ಯಾಗ್ ಹೆಗಲಿಗೆ ಏರಿಸಿದ ಮಕ್ಕಳ ಮುಖದ ಮೇಲೆ ಏನನ್ನೋ ಗೆದ್ದ ಸಂಭ್ರಮವಿತ್ತು.
೫ರಿಂದ ೭ನೇ ತರಗತಿ ಹಾಗೂ ೮ರಿಂದ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ೫೦೦-೬೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ಪರ್ಧೆಯ -Àಲಿತಾಂಶವನ್ನು ಶೀಘ್ರವೇ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಬಹುಮಾನ ವಿತರಣೆ ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು. ಎರಡೂ ವಿಭಾಗದ ಮಕ್ಕಳಿಗೆ ಪ್ರತ್ಯೇಕವಾಗಿ ನಗದು ಬಹುಮಾನವಿದೆ. ಪ್ರಥಮ ೩ ಸಾವಿರ ರೂ., ದ್ವಿತೀಯ ೨ ಸಾವಿರ ರೂ., ತೃತೀಯ ೧ ಸಾವಿರ ರೂ., ಹಾಗೂ ತಲಾ ೧೦ ಸ್ಪಽðಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.
ನೂರು ಸಾಲಿನಲ್ಲಿ ಹೇಳುವುದನ್ನು ಒಂದು ಚಿತ್ರದಿಂದಲೇ ತಿಳಿಸಬಹುದು. ಒಂದು ಮರದಿಂದ ಹಲವು ಉಪಯೋಗವಿದೆ. ಅರಣ್ಯ ಇಲಾಖೆ ಕೂಡ ಪರಿಸರ ಕುರಿತು ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಚಿತ್ರಕಲೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆ, ನಿರೀಕ್ಷೆಗೂ ಮೀರಿದ ಕಲಿಕೆಗೆ ಪೂರಕ. ಬುದ್ಧಿಮತ್ತೆ ಹೆಚ್ಚಾಗಲಿದೆ. ಕಣ್ಣುಗಳು ತೀ ಕ್ಷ÷್ಣವಾಗಲಿವೆ. ಪರಿಸರ ಸಂರಕ್ಷಣೆ, ಸಮಾಜದ ಅಭಿವೃದ್ಧಿಗೂ ಸಹಕಾರಿ ಎಂದು ಜಿಪಂ ಉಪ ಕಾರ್ಯದರ್ಶಿ ಎಂ. ಬಾಬು ಹೇಳಿದರು.
ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದಲ್ಲಿ ಐಎಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿ ಆಗಲಿದೆ. ಹೆಚ್ಚು ಅಂಕ ಗಳಿಸಿ ಗುರಿ ಮುಟ್ಟಬಹುದು. ವಿದ್ಯೆ ಕದಿಯಲಾಗದ ಆಸ್ತಿ. ಕಲೆ ಜನರಿಗೆ ಬಹುಬೇಗ ತಲುಪುತ್ತದೆ. ಹೀಗಾಗಿ ಚಿತ್ರಕಲೆಯೊಂದಿಗೆ ಪ್ರಕೃತಿ ನಾಶ ತಡೆಗಟ್ಟಬೇಕಿದೆ ಎನ್ನುವ ಮೂಲಕ ಪರಿಸರದ ಜಾಗೃತಿ ಮೂಡಿಸಿದರು.
ಧರ್ಮೋ ರಕ್ಷತಿ ರಕ್ಷಿತಃ ಮಾತಿನಂತೆ ವೃಕ್ಷೆÆÃ ರಕ್ಷತಿ ರಕ್ಷಿತಃ ಎಂಬುದು ಕೂಡ ಅತ್ಯಂತ ಸತ್ಯವಾದುದು. ದೇಶ ಸಮೃದ್ಧ ವಾಗಿರಲು ಶೇ. ೩೦ರಷ್ಟು ಅರಣ್ಯ ಇರಬೇಕು. ಅದಕ್ಕಾಗಿ ಪ್ರಕೃತಿಯನ್ನು ಆರಾಽಸಬೇಕು ಎಂದು ಆರ್‌ಎ-ïಒ ಆರ್. ವಸಂತ ಕುಮಾರ್ ಮಕ್ಕಳಲ್ಲಿ ಪರಿಸರ ಪ್ರೇಮದ ಬೀಜ ಬಿತ್ತಿದರು.
ಮಾನವನಿಗೆ ಅಗತ್ಯವಾಗಿ ಎಷ್ಟು ಆಕ್ಸಿಜನ್ ಬೇಕೆಂಬುದು ಪ್ರತಿಯೊಬ್ಬರಿಗೂ ತಿಳಿದಿರಬೇಕು. ಮರಗಳೊಂದಿಗೆ ಸಂವಹನ ನಡೆಸು ವುದನ್ನು ಕಲಿಯಬೇಕು. ಪ್ರಕೃತಿಯ ಪ್ರತಿ ಅಂಶವೂ ಉಪಯುಕ್ತವಾಗಿದ್ದು, ಮಕ್ಕಳನ್ನು ಪರಿಸರದೊಂದಿಗೆ ಬೆರೆಯಲು ಬಿಡುವಂತೆ ಸಲಹೆ ನೀಡಿದರು.
*ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶ ಸಲ್ಲ
ಮಾನವನ ದುರಾಸೆ, ನಗರೀಕರಣ ಸೇರಿ ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶವಾಗುತ್ತಿದೆ ಎನ್ನುವ ಆತಂಕವನ್ನು ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಽಕಾರಿ ಡಾ.ಟಿ.ಎಸ್.ರವಿ ವ್ಯಕ್ತಪಡಿಸಿದರು.
ಪೂರ್ವಜರು ಪ್ರಕೃತಿಯನ್ನು ದೇವರೆಂದು ಪೂಜಿಸುತ್ತಿದ್ದರು. ಹೆತ್ತವಳು ಒಂದೆಡೆಯಾದರೆ, ಹೊತ್ತವಳು ಪ್ರಕೃತಿ ಮಾತೆ ಎಂಬುದನ್ನು ನಾವೆಲ್ಲರೂ ಮರೆಯಬಾರದು. ನಿಜವಾದ ಅಭಿವೃದ್ಧಿ ಎಂದರೆ ಪ್ರಾಕೃತಿಕ ಸಂಪತ್ತು. ಅದನ್ನು ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಕಿವಿಮಾತು ಹೇಳಿದರು.
*ಪರಿಸರ ನಾಶದಿಂದ ತೊಂದರೆ ಹೆಚ್ಚು
ದೇಶದಲ್ಲಿ ೧೪೬ ಕೋಟಿ ಜನಸಂಖ್ಯೆ ಇದೆ. ೧೩೮ ಕೋಟಿ ವಾಹನಗಳಿವೆ. ಅವುಗಳನ್ನು ಬಳಸುತ್ತೇವೆಯೇ ಹೊರತು ಸುಸ್ಥಿಯಲ್ಲಿಡಲು ಮುಂದಾಗದ ಕಾರಣ ತೊಂದರೆಗಳು ಹೆಚ್ಚಾಗುತ್ತಿವೆ. ಇದರಿಂದ ಪರಿಸರ ಮತ್ತು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಆರ್‌ಟಿಒ ಭರತ್ ಎಂ. ಕಾಳಿಸಿಂಗೆ ಎಚ್ಚರಿಸಿದರು.
ಇರುವುದೊಂದೇ ಪರಿಸರ. ಅದನ್ನು ಕಾಪಾಡಿಕೊಳ್ಳದಿದ್ದರೆ ಇಡೀ ಜೀವ ಸಂಕುಲ ಅಳಿವಿನಂಚಿಗೆ ಬಂದು ನಿಲ್ಲಬಹುದು ಎಂಬ ಆತಂಕ ಅವರ ಧ್ವನಿಯಲ್ಲಿತ್ತು. ಪರಿಸರ ನಾಶದ ಅನಾಹುತಗಳನ್ನರಿತು, ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ಪ್ರತಿವರ್ಷ ಜೂ. ೫ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ ಎಂಬುದನ್ನು ನೆನಪಿಸಿದರು.
ಮನೆ, ಶಾಲೆಯಿಂದಲೇ ಆರಂಭವಾಗಲಿ
ಪರಿಸರ ಪ್ರಜ್ಞೆ ಮನೆ, ಶಾಲೆಯಿಂದಲೇ ಆರಂಭವಾಗಬೇಕು ಎಂದು ವಿಜಯವಾಣಿ ಚಿತ್ರದುರ್ಗ ಆವೃತ್ತಿ ಮುಖ್ಯಸ್ಥ ನವೀನ್ ಎಂ.ಬಿ. ಹೇಳಿದರು.
ಜನ, ಜಾನುವಾರುಗಳಿಗೆ ಉಪಯುಕ್ತವಾಗಿರುವ ಕೆರೆಗಳು ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಒತ್ತುವರಿಯಾಗಿ ಪರಿಸರ ನಾಶಕ್ಕೂ ಕಾರಣವಾಗಿದೆ. ರಾಜಧಾನಿ ಬೆಂಗಳೂರೇ ಇದಕ್ಕೆ ನಿದರ್ಶನ ಎಂದರು.
ವಿಜಯವಾಣಿ ಪರಿಸರ ಜಾಗೃತಿ ಮಾತ್ರವಲ್ಲ. ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದೆ. ಪರಿಸರಕ್ಕೆ ಪೂರಕ ಅಂಶಗಳನ್ನು ನಿತ್ಯ ಜೀವನದಲ್ಲಿ ಪಾಲಿಸುವ ಮೂಲಕ ಸಂರಕ್ಷಣೆಗೆ ಮುಂದಾಗೋಣ ಎಂದು ಕಿವಿಮಾತು ಹೇಳಿದರು.
ಎಸಿಎ-ï ಎಂ.ಪಿ. ನಾಗೇಂದ್ರನಾಯ್ಕ್, ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ ಪ್ರಾಚಾರ್ಯ ಎಂ.ಎಸ್. ಪ್ರಭಾಕರ್, ವಿಜಯವಾಣಿ ಚಿತ್ರದುರ್ಗ ಆವೃತ್ತಿ ಮುಖ್ಯಉಪ ಸಂಪಾದಕ ಹರ್ಷ ಪುರೋಹಿತ್, ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಎಂ.ಎಸ್. ಕುಮಾರಸ್ವಾಮಿ, ವಿಶೇಷ ವರದಿಗಾರ ಡಿ.ಪಿ. ನಾಗರಾಜ ಶ್ರೇಷ್ಠಿ, ವರದಿಗಾರ ಕೆ.ಎಸ್. ಪ್ರಣವಕುಮಾರ್, ಛಾಯಾಚಿತ್ರಗ್ರಾಹಕ ವರದರಾಜ್ ಯಾದವ್, ಪ್ರಸರಣ ವಿಭಾಗದ ಶುಭಾಕರ್, ಸಂಸ್ಥೆಯ ಬೋಧಕರು, ಬೋಧಕೇತರ ಸಿಬ್ಬಂದಿ, ನಗರ ಮತ್ತು ಜಿಲ್ಲೆಯ ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರು ಇದ್ದರು. ವಿದ್ಯಾರ್ಥಿನಿ ಜಿ. ಹಾಸಿನಿ ಪ್ರಾರ್ಥಿಸಿದರು. ಶಿಕ್ಷಕ ಶೋಬಿನ್ ಜೋಷ್ ನಿರೂಪಿಸಿದರು.