ಚಿತ್ರದುರ್ಗದಲ್ಲಿ ಶನಿವಾರ ನಡೆದ ದಿಶಾ ಕಮಿಟಿ ಸಭೆಯಲ್ಲಿ ಸಂಸದ ಗೋವಿಂದ ಎಂ.ಕಾರಜೋಳ, ಡಿಸಿ ಟಿ.ವೆಂಕಟೇಶ್, ಸಿಇಒ ಡಾ.ಎಸ್.ಆಕಾಶ್, ಎಎಸ್‌ಪಿ ಶಿವಕುಮಾರ್ ಇದ್ದರು. 
ಚಿತ್ರದುರ್ಗ

ಬೇಸಿಗೆಯಲ್ಲಿ ಅಬಾಽತ ಕುಡಿಯುವ ನೀರು

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಅಽಕಾರಿಗಳಿಗೆ ಸಂಸದ ಕಾರಜೋಳ ಸೂಚನೆ
  • ಜೆಜೆಎಂ ಕಳಪೆ ಕಾಮಗಾರಿಗೆ ಆಕ್ರೋಶ
  • ದಿಶಾ ಸಮಿತಿ ಸಭೆ
ಚಿತ್ರದುರ್ಗ: ಬೇಸಿಗೆ ವೇಳೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಸಂಸದ ಗೋವಿಂದ ಎಂ. ಕಾರಜೋಳ ಅವರು ಅಽಕಾರಿಗಳಿಗೆ ಸೂಚಿಸಿದರು.
ಜಿಪಂನಲ್ಲಿ ಶನಿವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಜಲಜೀವನ್ ಮಿಷನ್ ಅಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದರಲ್ಲದೆ, ಜೆಜೆಎಂ ಕಾಮಗಾರಿ ಕಳಪೆಯಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಜಿಪಂ ಸಿಇಒ ಡಾ. ಎಸ್. ಆಕಾಶ್ ಮಾತನಾಡಿ, ಜಿಲ್ಲೆಯ ೧೫೦೦ ಜೆಜೆಎಂ ಕಾಮಗಾರಿಗಳ ಪೈಕಿ ಅಂದಾಜು ೫೦೦ ಕಾಮಗಾರಿಗಳ ತಪಾಸಣೆ ನಡೆಸಲಾಗಿದೆ. ೧೬೦ ಅತ್ಯಂತ ಕಳಪೆಯಾಗಿವೆ ಎಂದರು.
ಕೇAದ್ರದ ಈ ಯೋಜನೆಯಡಿ ಜಿಲ್ಲೆಗೆ ೨ ಸಾವಿರ ಕೋಟಿ ರೂ. ಅನುದಾನವಿದೆ. ಕಳಪೆ ಕಾಮಗಾರಿ ನಡೆಸಿದ ಬಿಲ್ ಪಾವತಿಸಬಾರದು. ಗುಣಮಟ್ಟದ ಪ್ರಮಾಣಪತ್ರ ದೊರೆಯುವವರೆಗೆ ಕೇಂದ್ರದಿAದ ೪೫೦ ಕೋಟಿ ರೂ. ಬಾಕಿ ಅನುದಾನ ಬರುವುದಿಲ್ಲ ಎಂದರು.
೧೫ ದಿನಗಳಲ್ಲಿ ಪೈಪ್ ಗುಣಮಟ್ಟ, ನೀರು ಪರೀಕ್ಷೆ ವರದಿ ಪಡೆದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಿಇಒ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಇಇ ಅಮರನಾಥ್ ಜೈನ್ ಮಾತನಾಡಿ, ಜಿಲ್ಲೆಯಲ್ಲಿರುವ ೧೦೨೬ ಆರ್‌ಒಗಳ ಪೈಕಿ ೭೬೫ ಸುಸ್ಥಿತಿಯಲ್ಲಿವೆ. ಉಳಿದ ೨೬೧ರಲ್ಲಿ ೧೨೧ ಅನ್ನು ದುರಸ್ತಿ ಮಾಡಿ ಗ್ರಾಪಂಗಳಿಗೆ ಹಸ್ತಾಂತರಿಸಲಾಗುವುದು. ೧೪೦ ಸಂಪೂರ್ಣ ಹಾಳಾಗಿವೆ ಎಂದು ಮಾಹಿತಿ ನೀಡಿದರು.
ಕೇಂದ್ರದ ಯೋಜನೆಗಳ ಸದ್ಬಳಕೆ
ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಸದ್ಬಳಕೆ ಮಾಡಿಕೊಳ್ಳುವಂತೆ, ಸಂಸದ ಕಾರಜೋಳ ಸೂಚಿಸಿದರು. ಜಿಲ್ಲೆಯಲ್ಲಿ ಶೇ. ೭೦ರಷ್ಟು ಜನರು ಪರಿಶಿಷ್ಟ ಜÁತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಬಡವರಿದ್ದಾರೆ. ಅಽಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಇವರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಎಸ್‌ಎಸ್‌ಎಲ್‌ಸಿ -Àಲಿತಾಂಶದಲ್ಲಿ ಗಣನೀಯ ಸುಧಾರಣೆ ತರಬೇಕು. ವಸತಿ ಯೋಜನೆಯಡಿ ಮಂಜೂರಾದ ಮನೆಗಳು ಶೀಘ್ರ ನಿರ್ಮಾಣವಾಗಬೇಕು. ಕೇಂದ್ರದ ಬಜೆಟ್‌ನಲ್ಲಿ ಕೃಷಿ, ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ ಹಾಗೂ ಮೀನುಗಾರಿಕೆಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಇದರ ಲಾಭ ರೈತರಿಗೆ ತಲುಪಬೇಕು ಎಂದರು.
ಅಕ್ರಮ ಬ್ಲಾಸ್ಟಿಂಗ್ ನಿಯಂತ್ರಿಸಿ
ಇತ್ತೀಚೆಗೆ ಅಪಘಾತದಲ್ಲಿ ಐದು ಕರಡಿಗಳ ಸಾವಿಗೆ ಕಾರಣರಾದವರ ವಿರುದ್ಧ ಅಪರಿಚಿತರು ಎಂದು ಎ-ï‌ಐಆರ್ ದಾಖಲಿಸಿರುವ ಅರಣ್ಯಾಽಕಾರಿಗಳ ಕ್ರಮಕ್ಕೆ ಸಂಸದರು ಆಕ್ರೋಶ ವ್ಯಕ್ತಪಡಿಸಿದರು. ಗಣಿಗಾರಿಕೆ ಪ್ರದೇಶಗಳಲ್ಲಿ ವನ್ಯ ಜೀವಿಗಳು ಬಲಿಯಾಗುತ್ತಿವೆ. ಕಟ್ಟುನಿಟ್ಟಿನ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೀಸಲು ಅರಣ್ಯದ ಅಂದಾಜು ೧೧೨ ಎಕರೆಯಲ್ಲಿ ವಿಂಡ್-ೆÇÃರ್ಸ್ ಇಂಡಿಯಾ ಕಂಪನಿ ಗಾಳಿ ಯಂತ್ರ ಅಳವಡಿಸಿದೆ. ಇದರ ಪರವಾನಗಿ ನವೀಕರಣಕ್ಕೆ ಶಿ-Áರಸು ಮಾಡಿದ್ದು ಯಾರು? ಪರಿಸರ ಸೂಕ್ಷ÷್ಮ ವಲಯದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಬೇಡ ಎಂದರು.
ಡಿಎ-ï‌ಒ ಪ್ರತಿಕ್ರಿಯಿಸಿ, ಕೇಂದ್ರ ವಿಽಸಿರುವ ೨೩ ಕೋಟಿ ರೂ. ದಂಡವನ್ನು ಕಂಪನಿ ಪಾವತಿಸಿದ್ದು, ೨೦ ವರ್ಷ ಅವಽಗೆ ಪರವಾನಗಿ ನವೀಕರಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಖಾಸಗಿ ಕಂಪನಿಗಳು ಸಿಎಸ್‌ಆರ್ -Àಂಡ್ ಅನ್ನು ಸ್ಥಳೀಯ ಅಭಿವೃದ್ಧಿಗೆ ಬಳಸುತ್ತಿಲ್ಲ, ಈ ಕುರಿತು ಚರ್ಚಿಸುವಂತೆ ಡಿಸಿ ಟಿ. ವೆಂಕಟೇಶ್ ಅವರಿಗೆ ಸಂಸದರು ಸೂಚಿಸಿದರು.
ಹಾಸ್ಟೆಲ್ ವಿದ್ಯಾರ್ಥಿಗಳ ಅಸ್ವಸ್ಥತೆ
ಮರಡಿಹಳ್ಳಿ ಸಮಾಜಕಲ್ಯಾಣ ಹಾಸ್ಟೆಲ್‌ನಲ್ಲಿ ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣ ಪ್ರಸ್ತಾಪಿಸಿದ ಸಿಇಒ, ಸಂಬAಽಸಿದ ಜಿಲ್ಲಾಮಟ್ಟದ ಅಽಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲಿ ವಿದ್ಯಾರ್ಥಿಗಳು ಜ್ವರದ ಸೋಂಕಿಗೆ ಒಳಗಾಗಿದ್ದು ಕಂಡು ಬಂದಿದೆ. ಅಽಕಾರಿಗಳು ವಾರಕ್ಕೊಮ್ಮೆ ಹಾಸ್ಟೆಲ್‌ಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು. ಇಂಥ ಪ್ರಕರಣಗಳು ಮರುಕಳಿಸಿದರೆ ಜಿಲ್ಲಾಮಟ್ಟದ ಅಽಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಡಿಸಿ ಎಚ್ಚರಿಸಿದರು.
ನೇರ ರೈಲ್ವೆ, ಬೆಳೆ ವಿಮೆ ಪರಿಹಾರ, ಬೆಳೆ ನಷ್ಟ ಪರಿಹಾರ, ಕೃಷಿ, ಆರೋಗ್ಯ, ಕೇಂದ್ರ ಪುರಸ್ಕೃತ ಇತರ ಯೋಜನೆಗಳ ಕುರಿತು ಚರ್ಚಿಸಲಾಯಿತು. ಎಎಸ್‌ಪಿ ಶಿವಕುಮಾರ್, ದಿಶಾ ಸಮಿತಿ ಸದಸ್ಯರು, ಅಽಕಾರಿಗಳಿದ್ದರು.
ಎಂಪಿ ಡಮ್ಮಿ ಅಲ್ಲ
ಶಿಕ್ಷಣ ಇಲಾಖೆ ಚರ್ಚೆ ವೇಳೆ ಗರಂ ಆದ ಸಂಸದ ಗೋವಿಂದ ಕಾರಜೋಳ, ಎಂಪಿ ಅಂದರೆ ಡಮ್ಮಿ ಅಲ್ಲ. ಸಂಸದರ ನಿಽಯಿಂದ ಅಭಿವೃದ್ಧಿ ಪಡಿಸಿದ ಶಾಲೆ ಉದ್ಘಾಟನೆಗೆ ತಾವು ಹೋಗಿದ್ದ ಕಾರ್ಯಕ್ರಮಕ್ಕೆ ಸಂಬAಽಸಿದAತೆ ಶಿಕ್ಷಕರಿಗೆ ನೋಟಿಸ್ ಕೊಡಲಾಗಿ ದೆ. ಸಂಬAಽಸಿದ ಶಾಸಕರು ಊರಲ್ಲಿ ಇರಲಿಲ್ಲ.
ಶಿಷ್ಟಾಚಾರದಂತೆ ಎಷ್ಟು ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸಿದ್ದೀರಿ? ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಖ್ಯಕಾರ್ಯದರ್ಶಿ ಜತೆ ಚರ್ಚಿಸಿ, ತಪ್ಪಿತಸ್ಥರ ಅಮಾನತಿಗೆ ಶಿ-Áರಸು ಮಾಡುತ್ತೇನೆ ಎಂದು ಎಚ್ಚರಿಸಿದರು.
ಬ್ಯಾಂಕ್ ಅಽಕಾರಿಗಳ ಕಾರ್ಯವೈಖರಿಗೂ ಅಸಮಾಧಾನ ವ್ಯಕ್ತಪಡಿಸಿದ ಅವರು, ನಾವೇನು ಬ್ರಿಟಿಷರ ಕಾಲದಲ್ಲಿ ಇದ್ದೀವಾ? ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದವರು ಬ್ಯಾಂಕ್ ವಹಿವಾಟಿನಲ್ಲಿ ಪಾಲ್ಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ೩೦ ಲಕ್ಷ ಕೋಟಿ ರೂ. ಅನುದಾನ ಕೊಟ್ಟಿದ್ದಾರೆ ಎಂದು ನೆನಪಿಸಿದರು.