ಸರ್ದಾರ್ ವಲ್ಲಭಾಯಿ ಪಟೇಲ್ ಅವರ ೧೫೦ನೇ ಜನ್ಮ ದಿನಾಚರಣೆ ಅಂಗವಾಗಿ ಚಿತ್ರದುರ್ಗದಲ್ಲಿ ಬುಧವಾರ ಏರ್ಪಡಿಸಿದ್ದ ಏಕತಾ ನಡಿಗೆಗೆ ಸಂಸದ ಗೋವಿಂದ ಎಂ. ಕಾರಜೋಳ ಚಾಲನೆ ನೀಡಿದರು. ಎಡಿಸಿ ಬಿ.ಟಿ. ಕುಮಾರಸ್ವಾಮಿ, ಡಿವೈಎಸ್‌ಪಿ ಪಿ.ಕೆ. ದಿನಕರ್, ಸ್ನೇಹಲತಾ, ಕೆ.ಟಿ. ಕುಮಾರಸ್ವಾಮಿ, ಮಾಧುರಿಗಿರೀಶ್, ಮುರುಳಿ, ಸಂಪತ್‌ಕುಮಾರ್, ರೇಖಾ ಇತರರು ಇದ್ದರು. 
ಚಿತ್ರದುರ್ಗ

ಪಟೇಲ್ ಹುಟ್ಟುಹಬ್ಬಕ್ಕೆ ಏಕತಾ ನಡಿಗೆಯ ಮೆರುಗು

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸಂಸದ ಗೋವಿಂದ ಎಂ.ಕಾರಜೋಳ ಚಾಲನೆ
  • ಕನಕ ವೃತ್ತದಿಂದ ಜಿಲ್ಲಾ ಕ್ರೀಡಾಂಗಣದವರಿಗೆ ಸಾಗಿದ ಮೆರವಣಿಗೆ
  • ಯುವ ಜನರಿಗೆ ಪ್ರಬಂಧ, ಚರ್ಚಾ ಸ್ಪರ್ಧೆ
ಚಿತ್ರದುರ್ಗ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮದಿನದ ಪ್ರಯುಕ್ತ ನಗರದಲ್ಲಿ ಬುಧವಾರ ಏಕತಾ ನಡಿಗೆ ಆಯೋಜಿಸಲಾಗಿತ್ತು.
ಕನಕ ವೃತ್ತದ ಬಳಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂಸದ ಗೋವಿಂದ ಎಂ. ಕಾರಜೋಳ ಚಾಲನೆ ನೀಡಿದರು.
ಕನಕ ವÊತ್ತದಿಂದ ಆರಂಭವಾದ ನಡಿಗೆ ಸಂಗೊಳ್ಳಿರಾಯಣ್ಣ ವÊತ್ತ, ಗಾಂಽ ವÊತ್ತ, ರಾಣಿ ಚನ್ನಮ್ಮ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವÊತ್ತದ ಮೂಲಕ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ತಲುಪಿತು.
ಮೈ ಭಾರತ್ ಸ್ವಯಂ ಸೇವಕರು, ಎನ್‌ಸಿಸಿ ಕೆಡಿಟ್‌ಗಳು, ಎನ್‌ಎಸ್‌ಎಸ್ ಸ್ವಯಂ ಸೇವಕರು, ಕ್ರೀಡಾಪಟಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ಬಳಿಕ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಾರಜೋಳ ಅವರು, ದೇಶದ ಎಲ್ಲೆಡೆ ಕಳೆದ ಅಕ್ಟೋಬರ್ ೩೧ರಿಂದ ನವೆಂಬರ್ ೨೫ ರವರೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮದಿನ ಆಚರಿಸಲಾಗುತ್ತಿದೆ ಎಂದರು.
ಪಟೇಲ್ ಅವರ ಕುರಿತಂತೆ ಅರಿವು ಮೂಡಿಸಲು ವಿದ್ಯಾರ್ಥಿಗಳು, ಯುವ ಜನರಿಗೆ ಪ್ರಬಂಧ, ಚರ್ಚಾ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಪ್ರತಿಯೊಬ್ಬರೂ ಪಟೇಲ್ ಅವರ ಜೀವನ ಚರಿತ್ರೆ ಓದಬೇಕು. ಸ್ವಾತಂತ್ರ‍್ಯ ಹೋರಾಟದಲ್ಲಿ ಅವರ ಕೊಡುಗೆಯನ್ನು ಅರಿತುಕೊಳ್ಳಬೇಕು. ಸ್ವಾತಂತ್ರ‍್ಯಾನAತರ ದೇಶದಲ್ಲಿದ್ದ ಎಲ್ಲ ಸಂಸ್ಥಾನಗಳನ್ನು ಒಗ್ಗೂಡಿಸುವಲ್ಲಿ ಪಟೇಲ್ ಅವರ ಕೊಡುಗೆ ದೊಡ್ಡದಿದೆ ಎಂದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಡಿವೈಎಸ್‌ಪಿ ಪಿ.ಕೆ.ದಿನಕರ್, ಮೇರಾ ಯುವ ಭಾರತ್‌ನ ಜಿಲ್ಲಾ ಯುವಜನ ಅಽಕಾರಿ ಸ್ನೇಹಲತಾ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮಾಧುರಿ ಗಿರೀಶ್, ಮುರುಳಿ, ಸಂಪತ್‌ಕುಮಾರ್, ರೇಖಾ ಇತರರು ಇದ್ದರು.
ಸರ್ದಾರ್ ವಲ್ಲಭಾಯಿ ಪಟೇಲ್ ಅವರ ೧೫೦ನೇ ಜನ್ಮ ದಿನಾಚರಣೆ ಅಂಗವಾಗಿ ಚಿತ್ರದುರ್ಗದಲ್ಲಿ ಬುಧವಾರ ಏರ್ಪಡಿಸಿದ್ದ ಏಕತಾ ನಡಿಗೆಗೆ ಸಂಸದ ಗೋವಿಂದ ಎಂ. ಕಾರಜೋಳ ಚಾಲನೆ ನೀಡಿದರು. ಎಡಿಸಿ ಬಿ.ಟಿ. ಕುಮಾರಸ್ವಾಮಿ, ಡಿವೈಎಸ್‌ಪಿ ಪಿ.ಕೆ. ದಿನಕರ್, ಸ್ನೇಹಲತಾ, ಕೆ.ಟಿ. ಕುಮಾರಸ್ವಾಮಿ, ಮಾಧುರಿಗಿರೀಶ್, ಮುರುಳಿ, ಸಂಪತ್‌ಕುಮಾರ್, ರೇಖಾ ಇತರರು ಇದ್ದರು.