ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಹೇಳಿದರು.
- ಹಕ್ಕೋತ್ತಾಯಗಳ ಈಡೇರಿಕೆಗೆ ಆಗ್ರಹ
- ಕೆಲಸದ ಅವಽ ಹೆಚ್ಚಳಕ್ಕೆ ವಿರೋಧ
- ಸಂಯುಕ್ತ ಹೋರಾಟ ಕರ್ನಾಟಕ
ಚಿತ್ರದುರ್ಗ: ವಿವಿಧ ಹಕ್ಕೋತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕದಿಂದ ನ.೨೬ ರಂದು ಬÊಹತ್ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ನೀತಿಗಳನ್ನು ವಿರೋಽಸಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಮಾತುಕೊಟ್ಟಂತೆ ೧೫ ಪ್ರಮುಖ ಅಂಶಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಚಲೋ ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು.
ಅಂದು ಸಂಬAಽಸಿದ ಸಚಿವರು ಸ್ಪಷ್ಟ ತೀರ್ಮಾನಗಳನ್ನು ಘೋಷಿಸಬೇಕು. ಸಂವಿಧಾನ ದಿನವಾದ ನ.೨೬ ಜನರ ಹಕ್ಕುಗಳ ಕುರಿತು ಖಚಿತ ನಿರ್ಣಯಗಳಾಗುವ ದಿನವಾಗಬೇಕು. ಸರ್ಕಾರ ನಿರ್ಲಕ್ಷಿಸಿದರೆ ಸ್ವಾತಂತ್ರ‍್ಯ ಉದ್ಯಾನದಲ್ಲಿ ತೀವ್ರ ಹೋರಾಟದ ತೀರ್ಮಾನ ಆಗಲಿದೆ ಎಂದ ಅವರು, ಎಸ್‌ಐಆರ್ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ರಾಜ್ಯದಲ್ಲಿರುವ ಜನವಿರೋಽ ಕಾಯ್ದೆಗಳು ರದ್ದಾಗಿಲ್ಲ. ವಿದ್ಯುತ್ ಪೂರೈಕೆ ಸಂಸ್ಥೆಗಳು ಗ್ರಾಹಕರನ್ನು ಯಾಮಾರಿಸುತ್ತಿವೆ. ವಿದ್ಯುತ್ ಖಾಸಗೀಕರಣ ಮತ್ತು ಪ್ರೀಪೇಯ್ಡ್ ಮೀಟರ್ ಅಳವ ಡಿಕೆ ಕೈಬಿಡಬೇಕು, ವಿದ್ಯುತ್ ದರ ತಗ್ಗಿಸಬೇಕು ಎಂದು ಆಗ್ರಹಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು ಮಾತನಾಡಿ, ಕಾರ್ಮಿಕರ ದುಡಿಮೆ ಅವಽ ಹೆಚ್ಚಿಸುವ ತೀರ್ಮಾನ ರದ್ದುಪಡಿಸ ಬೇಕು. ಹೆಚ್ಚುವರಿ ಕೆಲಸಕ್ಕೆ ೨ ಪಟ್ಟು ವೇತನ ನೀಡಬೇಕೆಂದು ಒತ್ತಾಯಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಡಿಎಸ್‌ಹಳ್ಳಿ ಮಲ್ಲಿಕಾ ರ್ಜುನ್ ಮಾತನಾಡಿ, ಕೇಂದ್ರದ ಬೆಂಬಲ ಬೆಲೆ ಘೋಷಣೆ ಅವೈಜ್ಞಾನಿಕವಾಗಿದೆ. ರಾಜ್ಯ ಸರಕಾರ ಬೆಲೆ ಕುಸಿತ ತಡೆಗೆ ಮುಂದಾ ಗಬೇಕು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನ ಮಾಳಿಗೆ, ಬಸ್ತಿಹಳ್ಳಿ ಸುರೇಶ್‌ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಟಿ. ಶಫಿವುಲ್ಲಾ ಇತರರು ಇದ್ದರು.