- ಸಂಸದ ಗೋವಿಂದ ಎಂ. ಕಾರಜೋಳ ಹೇಳಿಕೆ
- ತೆರವಾಗಲಿದೆ ವಿದ್ಯುತ್ ಪ್ರಸರಣ ಮಾರ್ಗಕ್ಕಿದ್ದ ಅಡ್ಡಿ
- ತುಂಗಾದಿAದ ನೀರೆತ್ತವು ಕಾಮಗಾರಿ ಸುಗಮ
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಪ್ಯಾಕೇಜ್ ಒಂದರಡಿ ತುಂಗಾ ಜಲಾಶಯದಿಂದ ೧೭.೫೪ ಟಿಎಂಸಿ ನೀರನ್ನು ಎತ್ತಿ ಭದ್ರಾ ಜಲಾಶಯಕ್ಕೆ ತುಂಬಿಸುವುದು ಹಾಗೂ ಎರಡನೇ ಪ್ಯಾಕೇಜ್‌ನಲ್ಲಿ ಭದ್ರಾ ಜಲಾಶಯದಿಂದ ೨,೨೫,೫೧೫ ಹೆಕ್ಟೇರ್ ಪ್ರದೇಶಕ್ಕೆ ಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತದೆ.
ಈಗ ಪ್ಯಾಕೇಜ್ ಒಂದಕ್ಕೆ ಸಂಬAಽಸಿದ ಕಾಮಗಾರಿಯನ್ನು ಅರಣ್ಯಪ್ರದೇಶದಲ್ಲಿ ಕೈಗೊಳ್ಳಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ನೀಡಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.
೧ನೇ ಪ್ಯಾಕೇಜ್‌ನಲ್ಲಿ ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಹೋಬಳಿ ಕಣಗಲಕೊಪ್ಪ, ಚಿಕ್ಕಮಗಳೂರು ಜಿಲ್ಲೆ ಕಸಬಾ ಹೋಬಳಿ ಕೆ. ಕನ ಬೂರು ಹಾಗೂ ಮುತ್ತಿನಕೊಪ್ಪ ಗ್ರಾಮಗಳ ಸರ್ವೆ ನಂಬರ್‌ಗಳ ಅಂದಾಜು ೭.೫೩ ಹೆಕ್ಟೇರ್ ಅರಣ್ಯದಲ್ಲಿ ೨೨೦ ಕೆವಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣಕ್ಕೆ ಅನುಮತಿ ಕೋರಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರಿಗೆ ತಾವು ನಿರಂತರ ಮನವಿ ಮಾಡಿದ್ದರÀ ಪರಿಣಾಮ ಜು.೧೦ ರಂದು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ೭.೫೩ ಎಕರೆ ಅರಣ್ಯದಲ್ಲಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲು ತಾತ್ವಿಕ ಅನು ಮೋದನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅರಣ್ಯಭೂಮಿಯಲ್ಲಿ ಕನಿಷ್ಠ ಸಂಖ್ಯೆ ಮರಗಳನ್ನು ಕತ್ತರಿಬೇಕು, ಕಾಮಗಾರಿಗಾಗಿ ಸಾಮಗ್ರಿಗಳನ್ನು ಸಾಗಿಸಲು ಅರಣ್ಯದ ಒಳಗೆ ಯಾ ವುದೇ ಹೆಚ್ಚುವರಿ, ಹೊಸ ರಸ್ತೆ ನಿರ್ಮಿಸಬಾರದು, ಅರಣ್ಯಭೂಮಿಯನ್ನು ಯೋಜನೆಗೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಬಾರದು. ಯೋಜನೆಗೆ ಬಳಸಿದ ಒಟ್ಟು ಅರಣ್ಯ ೭.೫೩ ಹೆಕ್ಟೇರ್ ಮೀರಬಾರದು ಎನ್ನುವ ನಿಬಂಧನೆ ಸೇರಿ ಹಲವು ಷರತ್ತುಗಳನ್ನು ಕೇಂದ್ರ ವಿಽಸಿ ಅನುಮೋದನೆ ನೀಡಿದೆ. ಇದು ೫ ವರ್ಷಗಳ ಅವಽವರೆಗೆ ಮಾನ್ಯವಾಗಿರುತ್ತದೆ ಎಂದು ಸಂಸದರು ಹೇಳಿಕೆಯಲ್ಲಿ ತಿಳಿಸಿದ್ದಾರೆ.