ಚಿತ್ರದುರ್ಗದ ಹೂವಿನ ಮಾರುಕಟ್ಟೆಯಲ್ಲಿ ಅಳತೆಯಲ್ಲಿ ಮೋಸವಾಗುತ್ತಿದೆ ಎಂದು ಆರೋಪಿಸಿ ಹೂ ಬೆಳೆಗಾರರು ಸೋಮವಾರ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಎಸಿ ಕಾಂತರಾಜ್ ಅವರಿಗೆ ಮನವಿ ಸಲ್ಲಿಸಿದರು. ಹಂಪಯ್ಯನಮಾಳಿಗೆ ಧನಂಜಯ, ಎನ್.ಎಸ್. ರಂಗೇಗೌಡ, ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ್, ಬಸ್ತಿಹಳ್ಳಿ ಸುರೇಶ್‌ಬಾಬು, ಕೆ.ಎಂ. ಕಾಂತರಾಜು ಇತರರು ಇದ್ದರು.
- ಉಪವಿಭಾಗಾಽಕಾರಿ ಕಾಂತರಾಜ್ ಅವರಿಗೆ ಮನವಿ ಸಲ್ಲಿಕೆ
- ಸ್ಥಳ ಪರಿಶೀಲನೆಗೆ ಡಿಸಿಗೆ ಒತ್ತಾಯ
- ಜಿಲ್ಲಾಽಕಾರಿ ಆವರಣದಲ್ಲಿ ಪ್ರತಿಭಟನೆ
ಚಿತ್ರದುರ್ಗ: ನಗರದ ಎಪಿಎಂಸಿ ಆವರಣದಲ್ಲಿರುವ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಅಳತೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಬೆಳೆಗಾರರು ಜಿಲ್ಲಾಽಕಾರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
೧೫-೧೬ ಅಡಿಗಳಿಗೆ ಒಂದು ಮಾರೆಂದು ಲೆಕ್ಕ ಹಾಕಲಾಗುತ್ತಿದೆ. ಇದನ್ನು ವಿರೋಽಸಿ ಅನೇಕ ಬಾರಿ ಜಿಲ್ಲಾಽಕಾರಿ, ಎಪಿಎಂಸಿ ಕಾರ್ಯದರ್ಶಿ, ತೂಕ ಮತ್ತು ಅಳತೆ ಮಾಪನ ಅಽಕಾರಿಗಳ ಗಮನಕ್ಕೆ ತರಲಾಗಿದೆ. ಜಿಲ್ಲಾಽಕಾರಿ ಸೂಚನೆಯಂತೆ ಸಿಸಿ ಕ್ಯಾಮರಾಗಳನ್ನು ಅಳ ವಡಿಸಿದ್ದರೂ ವಂಚನೆ ಮುಂದುವರಿದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹೂ ಅಂಗಡಿ ಮಾಲೀಕರು, ಅಽಕಾರಿಗಳ ಸಮ್ಮುಖದಲ್ಲೇ ೬ ಅಡಿಗೆ ಒಂದು ಮಾರೆಂದು ತೀರ್ಮಾನಿಸಿದ್ದರೂ ೧೫-೧೬ ಅಡಿ ಒಂದು ಮಾರೆಂದು ಅಳೆಯಲಾಗುತ್ತಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕೆಂದು ಜಿಲ್ಲಾಽಕಾರಿ ಅವರನ್ನು ಒತ್ತಾಯಿಸಿ ಉಪವಿಭಾಗಾಽಕಾರಿ ಕಾಂತರಾಜ್ ಅವರಿಗೆ ಮನವಿ ಸಲ್ಲಿಸಿದರು.
ಹಂಪಯ್ಯನಮಾಳಿಗೆ ಧನಂಜಯ, ಎನ್.ಎಸ್. ರಂಗೇಗೌಡ, ಡಿಎಸ್‌ಹಳ್ಳಿ ಮಲ್ಲಿಕಾರ್ಜುನ್, ಬಸ್ತಿಹಳ್ಳಿ ಸುರೇಶ್‌ಬಾಬು, ಕೆ.ಎಂ. ಕಾಂತರಾಜು, ಎಸ್.ಆರ್. ತಿಪ್ಪೇಶ್, ಡಿ. ಓಂಕಾರಪ್ಪ, ಆರ್. ಮಾರುತಿ, ಪಿ.ಆರ್. ಮಾರುತಿ, ಎ. ತಿಪ್ಪೇಸ್ವಾಮಿ, ವೀರೇಶ್, ರಾಜು, ಸಿ.ನಾಗರಾಜ್, ಪಿ. ಸೂರಪ್ಪ, ಎಂ.ಬಿ. ನಾಗರಾಜ್, ಡಿ.ಬಿ. ಮಹಾಂತೇಶ್, ಜಿ. ಮಹಂತಣ್ಣ, ಸಿದ್ದಪ್ಪ, ಸಂಜೀವಪ್ಪ, ಪುಟ್ಟಯ್ಯ, ಪಿ.ಎನ್. ವಾಸು, ಕುಮಾರ್ ಇನ್ನಿತರ ರೈತ ಪ್ರಮುಖರು, ಹೂ ಬೆಳೆಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.