ಚಿತ್ರದುರ್ಗ ಸಂಚಾರ ಠಾಣೆ ಬಳಿ ಆಟೋಗಳಿಗೆ ಟಿಪಿಸಿ ಸಂಖ್ಯೆ ಸ್ಟಿಕ್ಕರ್‌ನ್ನು ಸಂಚಾರ ಠಾಣೆ ಪಿಎಸ್‌ಐ ಜಿ.ಎನ್.ವಿಶ್ವನಾಥ್ ಅಂಟಿಸಿದರು. ಬಡಾವಣೆ ಸಿಪಿಐ ತಿಮ್ಮಣ್ಣ, ಎಎಸ್‌ಐಗಳಾದ ಬಸವರಾಜ್, ಡಿ.ವೆಂಕಟೇಶ ಹಾಗೂ ಆಟೋ ಚಾಲಕರು ಇದ್ದಾರೆ.
- ಪ್ರತಿ ರಿಕ್ಷಾಕ್ಕೂ ಇನ್ನು ಪ್ರತ್ಯೇಕ ಗುರುತಿನ ಸಂಖ್ಯೆ
- ಡಿಸೆಂಬರ್ ಅಂತ್ಯದೊಳಗೆ ನೋಂದಣಿ ಕಡ್ಡಾಯ
- ಕಾನೂನು ಬಾಹಿರ ಸಂಚಾರಕ್ಕೆ ತೆರೆ ಎಳೆಯಲು ಸಿದ್ಧತೆ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಚಿತ್ರದುರ್ಗ: ನಗರ ಸೇರಿದಂತೆ ಜಿ¯್ಲೆಯಾದ್ಯಂತ ಎಗ್ಗಿಲ್ಲದೆ ಸಾಗುತ್ತಿರುವ ಅನಽಕೃತ ಆಟೋಗಳ ಹಾವಳಿಗೆ ಕಡಿವಾಣ ಹಾಕಲು ಜಿ¯್ಲÁ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಇದರ ಭಾಗವಾಗಿ, ಪ್ರತಿ ಆಟೋರಿಕ್ಷಾಕ್ಕೂ ಪ್ರತ್ಯೇಕ ಗುರುತಿನ ಸಂಖ್ಯೆ ನೀಡುವ ಅಭಿಯಾನ ಆರಂಭವಾಗಿದ್ದು, ಕಾನೂನು ಬಾಹಿರ ಸಂಚಾರಕ್ಕೆ ತೆರೆ ಎಳೆಯಲು ಸಿದ್ಧತೆ ನಡೆದಿದೆ.
ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಪೊಲೀಸ್ ಇಲಾಖೆಯು ಈ ಕಾರ್ಯಾಚರಣೆ ನಡೆಸುತ್ತಿದ್ದು, ಆಟೋ ಚಾಲಕ ಮತ್ತು ವಾಹನದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಈ ವಿಶೇಷ ಸಂಖ್ಯೆಯನ್ನು ಮಂಜೂರು ಮಾಡಲಾಗುತ್ತಿದೆ. ಈ ಸಂಖ್ಯೆಯುಳ್ಳ ಸ್ಟಿಕ್ಕರ್ ಅನ್ನು ಆಟೋದ ಮುಂಬದಿ ಮತ್ತು ಹಿಂಬದಿಯಲ್ಲಿ ಅಂಟಿಸಲಾಗುತ್ತದೆ.
ಪ್ರಸ್ತುತ ಚಿತ್ರದುರ್ಗ ಮತ್ತು ಚಳ್ಳಕೆರೆ ನಗರಗಳಲ್ಲಿ ಈ ಪ್ರಕ್ರಿಯೆ ಆರಂಭವಾಗಿದೆ. ಚಿತ್ರದುರ್ಗದಲ್ಲಿ ಸಂಚಾರ ಠಾಣೆಯಿಂದ ಟಿಪಿಸಿ (ಟ್ರಾಫಿಕ್ ಪೊಲೀಸ್ ಚಿತ್ರದುರ್ಗ) ಎಂಬ ಕೋಡ್ ಇರುವ ಸಂಖ್ಯೆಯನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮೊಳಕಾಲ್ಮೂರು, ಹೊಸದುರ್ಗ, ಹೊಳಲ್ಕೆರೆ ಮತ್ತು ಹಿರಿಯೂರು ಪಟ್ಟಣಗಳಿಗೂ ಇದು ವಿಸ್ತರಣೆಯಾಗಲಿದೆ.
ರಸ್ತೆಯಲ್ಲಿ ಸಂಚರಿಸುವ ಆಟೋ ಮೇಲೆ ಈ ನಿರ್ದಿಷ್ಟ ಗುರುತಿನ ಸಂಖ್ಯೆ ಇದ್ದರೆ, ಅದು ಪರ್ಮಿಟ್ ಹೊಂದಿರುವ ಅಽಕೃತ ವಾಹನ ಎಂದು ಪೊಲೀಸ್ ಹಾಗೂ ಸಾರಿಗೆ ಅಽಕಾರಿಗಳಿಗೆ ದೂರದಿಂದಲೇ ತಿಳಿಯುತ್ತದೆ. ಇದರಿಂದ ಬಾಡಿಗೆ ಕರಾರು ಒಪ್ಪಂದ ಅಥವಾ ಪರ್ಮಿಟ್ ಹೊಂದಿರುವ ಪ್ರಾಮಾಣಿಕ ಚಾಲಕರನ್ನು ಅನಗತ್ಯವಾಗಿ ತಪಾಸಣೆಗೆ ನಿಲ್ಲಿಸುವುದು ತಪ್ಪುತ್ತದೆ. ಅಲ್ಲದೆ, ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಿ, ಎಂಬುದು ಪೊಲೀಸ್ ಇಲಾಖೆಯ ಅಭಿಪ್ರಾಯವಾಗಿದೆ.
ಚಿತ್ರದುರ್ಗ ನಗರದಲ್ಲಿ ಪರ್ಮಿಟ್ ಇಲ್ಲದೆ ನೋಂದಣಿಯಾಗಿರುವ ಆಟೋಗಳ ಸಂಖ್ಯೆ ಹೆಚ್ಚಿದೆ. ಅಲ್ಲದೆ, ಅಕ್ಕಪಕ್ಕದ ತಾಲೂಕು ಕೇಂದ್ರಗಳಿAದ ಬೆಳಗ್ಗೆ ಬಂದು, ನಗರದಲ್ಲಿ ಬಾಡಿಗೆ ಹೊಡೆದು ಸಂಜೆ ಮರಳುವ ಆಟೋಗಳ ಹಾವಳಿ ವಿಪರೀತವಾಗಿದೆ. ಕೆಲವರು ಬೇರೆ ತಾಲೂಕಿನಿಂದ ನಗರಕ್ಕೆ ವಿಳಾಸ ಬದಲಿಸಿದ್ದರೂ, ನಗರ ಸಂಚಾರದ ಪರ್ಮಿಟ್ ಪಡೆದಿಲ್ಲ ಎಂಬುದು ಸಾರಿಗೆ ಇಲಾಖೆಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಚಾಲಕರು ತಮ್ಮ ಆಧಾರ್ ಕಾರ್ಡ್, ಚಾಲನಾ ಪರವಾನಗಿ, ವಾಹನದ ಆರ್.ಸಿ, ಪರ್ಮಿಟ್, ವಾಯು ಮಾಲಿನ್ಯ ತಪಾಸಣಾ ಪತ್ರ ಮತ್ತು ಫಿಟ್‌ನೆಸ್ ಸರ್ಟಿಫಿಕೇಟ್ ನೀಡಿ ಈ ಗುರುತಿನ ಸಂಖ್ಯೆಯನ್ನು ಪಡೆಯಬಹುದು.
ಡಿಸೆಂಬರ್ ಅಂತ್ಯದವರೆಗೂ ಗುರುತಿನ ಸಂಖ್ಯೆ ಪಡೆಯಲು ಅವಕಾಶವಿದ್ದು, ೨೦೨೬ರ ಜನವರಿಯಿಂದ ಕಾರ್ಯಾಚರಣೆ ಚುರುಕುಗೊಳ್ಳಲಿದೆ. ಆನಂತರ ಪರ್ಮಿಟ್ ಮತ್ತು ಗುರುತಿನ ಸಂಖ್ಯೆ ಇಲ್ಲದ ಆಟೋಗಳನ್ನು ಮುಲಾಜಿಲ್ಲದೆ ಜಪ್ತು ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.
೧೦,೨೪೫: ಜಿ¯್ಲÉಯಲ್ಲಿ ನೋಂದಣಿಯಾಗಿರುವ ಒಟ್ಟು ಆಟೋಗಳು.
೭,೮೮೪: ಜಿ¯್ಲÉಯಲ್ಲಿ ಪರ್ಮಿಟ್ ಹೊಂದಿರುವ ಆಟೋಗಳು.
೩,೯೮೮: ಚಿತ್ರದುರ್ಗ ನಗರದಲ್ಲಿ ಓಡಿಸಲು ಪರ್ಮಿಟï ಹೊಂದಿರುವವರು.
೮,೦೦೦+: ಚಿತ್ರದುರ್ಗ ನಗರದಲ್ಲಿ ಪ್ರಸ್ತುತ ಸಂಚರಿಸುತ್ತಿರುವ ಅಂದಾಜು ಆಟೋಗಳ ಸಂಖ್ಯೆ!
ಚಿತ್ರದುರ್ಗ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಆಟೋಗಳಿಗೆ ಪ್ರತ್ಯೇಕ ಗುರುತಿನ ಸಂಖ್ಯೆ ಕೊಡಲಾಗುತ್ತದೆ. ಈ ಕಾರ್ಯ ಪೂರ್ಣ ಬಳಿಕ ಅನಽಕೃತ ಆಟೋಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಸಾರಿಗೆ ಹಾಗೂ ನಮ್ಮ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಲಿವೆ. ಇದರಿಂದ ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೂ ಅನುಕೂವಾಗಲಿದೆ.
ಜನಸಂಖ್ಯೆ ಲೆಕ್ಕಾಚಾರದಲ್ಲಿ ಚಿತ್ರದುರ್ಗ ನಗರ ಸಹಿತ ಜಿಲ್ಲೆಯಲ್ಲಿ ಆಟೋಗಳಿಗೆ ಪರ್ಮಿಟ್ ಕೊಡಲು ಯಾವುದೇ ಮಿತಿ ಇಲ್ಲ. ಚಾಲಕರು ಸೂಕ್ತ ವಿಳಾಸ, ದಾಖಲೆ ಸಲ್ಲಿಸಿ ಪರ್ಮಿಟ್ ಪಡೆದು ಆಟೋ ಓಡಿಸಬಹುದು. ಪರ್ಮಿಟ್ ಇಲ್ಲದೆ ಓಡಿಸಿದರೆ ನಿಯಮಾನುಸಾರ ಕ್ರಮ ಎದುರಿಸಬೇಕಾಗುತ್ತದೆ.