ಹಿರಿಯೂರು- ಹುಳಿಯಾರು ಮಾರ್ಗದಲ್ಲಿ ಅಪಘಾತಕ್ಕೀಡಾದ ಕಾರು. Accident
- ಬೊಲೆರೋ ಕಾರು -ಲಾರಿ ಡಿಕ್ಕಿ
- ಮೃತರು ಬೀದರ್ ಜಿಲ್ಲೆಯವರು
ಹಿರಿಯೂರು: ತಾಲೂಕಿನ ಉಳುವಿನಾ ಗೇಟ್ ಬಳಿ ಬೀದರ್, ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಮಂಗಳವಾರ ಲಾರಿ ಮತ್ತು ಕಾರು ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. Accident
ಮೃತರನ್ನು ಬೀದರ್ ಜಿಲ್ಲೆ ಶೋರಾಪುರ ತಾಲೂಕು ಬರದೇವನಾಳ ಗ್ರಾಮದ ಪ್ರಭು (28), ಹನುಮಂತ (40) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗಿನ ಜಾವ ಹಿರಿಯೂರಿನಿಂದ ಹುಳಿಯಾರು ಮಾರ್ಗವಾಗಿ ಹೋಗುವ ವೇಳೆ ಎದುರಿನಿಂದ ಬಂದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿ ಕಾರು ಪಲ್ಟಿಯಾಗಿದೆ, ಪರಿಣಾಮ ಇಬ್ಬರು ಕಾರಿನಲ್ಲಿಯೇ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ಪ್ರಕರಣ ದಾಖಲಾಗಿದೆ.