ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿ¯್ಲÁ ಟಾ¸್ಕï-ÉÇÃರ್ಸ್(ಗಣಿ)ಸಮಿತಿ ಸಭೆ 
ಚಿತ್ರದುರ್ಗ

ಒಂದೇ ಕಾಮಗಾರಿಯಲ್ಲಿ ಎರಡು ಬಿಲ್ ಸಲ್ಲದು

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಕಾನೂನು ಬಾಹಿರ ಗಣಿಗಾರಿಕೆ ತಡೆಯಿರಿ
  • ಅಽಕಾರಿಗಳಿಗೆ ಡಿಸಿ ವೆಂಕಟೇಶ್ ಸೂಚನೆ
  • ಸಾರ್ವಜನಿಕರಿಂದ ದೂರು
ಚಿತ್ರದುರ್ಗ: ಜಿ¯್ಲೆಯ ಅನೇಕ ಕೆರೆಗಳಲ್ಲಿ ವಿವಿಧ ಯೋಜನೆಗಳಡಿ ನಡೆಯುತ್ತಿರುವ ಹೂಳೆತ್ತುವ, ಮತ್ತಿತರ ಕಾಮಗಾರಿಗಳು ಒಂ ದಕ್ಕೊAದು ಓವರ್‌ಲ್ಯಾಪ್ ಆಗದಂತೆ ಅಽಕಾರಿಗಳು ಕಟ್ಟುನಿಟ್ಟಿನ ನಿಗಾವಹಿಸುವಂತೆ ಜಿ¯್ಲÁಽಕಾರಿ ಟಿ. ವೆಂಕಟೇಶ್ ಸೂಚಿಸಿ ದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿ¯್ಲÁ ಟಾ¸್ಕï-ÉÇÃರ್ಸ್(ಗಣಿ)ಸಮಿತಿ ಸಭೆಯಲ್ಲಿ ಮಾತನಾಡಿದರು.
ಅಮೃತ ಸರೋವರ ಸೇರಿ ವಿವಿಧ ಇಲಾಖೆಯ ಯೋಜನೆಗಳಡಿ ಕೆರೆ ಹೂಳೆತ್ತುವ ಕಾರ್ಯಗಳು ಪ್ರಗತಿಯಲ್ಲಿವೆ. ಆದರೆ, ಒಂದೇ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆಯುವಾಗ ಗೊಂದಲ ಸೃಷ್ಟಿಸಬಾರದು. ಸಮನ್ವಯ ಇರಬೇಕು ಎಂದು ಎಚ್ಚರಿಸಿದರು.
ಒಂದು ಯೋಜನೆಯಡಿ ಹೂಳೆತ್ತಲಾಗುತ್ತಿದೆ ಎಂದು ದೃಢೀಕರಿಸಿ, ಅದೇ ಸ್ಥಳದಲ್ಲಿ ಮತ್ತೊಂದು ಯೋಜನೆಯಡಿ ಬಿಲ್ ಮಾಡುವಂ ತಹ ಲೋಪಗಳು ಕಂಡುಬರಬಾರದು ಎಂದು ತಾಕೀತು ಮಾಡಿದರು.
ಕೆಲವೆಡೆಗಳಲ್ಲಿ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಹೀಗಾಗಿ ತಾಪಂ ಇಒಗಳು ತೀವ್ರ ನಿಗಾವಹಿಸಬೇಕು. ಗ್ರಾಮೀಣ ಪ್ರದೇಶದ ಕೆರೆಗಳ ರಕ್ಷಣೆ, ಹೂಳೆತ್ತುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಅಽಕಾರಿಗಳು ನಿಯಮಿತವಾಗಿ ಸ್ಥಳ ಪರಿ ಶೀಲಿಸುವಂತೆ ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಅವರಿಗೆ ನಿರ್ದೇಶಿಸಿದರು.
ಜಿ¯್ಲÉಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಅದಿರು ಸಾಗಿಸುವ, ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುವ ಅದಿರು ಲಾರಿ ಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಡಿಸಿ ಪ್ರಾದೇಶಿಕ ಸಾರಿಗೆ ಅಽಕಾರಿಗಳಿಗೆ ಸೂಚಿಸಿದರು.
ಗಣಿ ಲಾರಿಗಳು ಸಾಗುವ ಮಾರ್ಗಗಳಲ್ಲಿ ತೀವ್ರ ಧೂಳಿನ ಸಮಸ್ಯೆ ಉಂಟಾಗುತ್ತಿದೆ.
ಇದರಿಂದ ಬೆಳೆಗಳು ನಾಶವಾಗುತ್ತಿರುವುದಾಗಿ ಗ್ರಾಮಸ್ಥರು ದೂರು ನೀಡುತ್ತಿದ್ದಾರೆ. ನಿಗದಿತ ಮಿತಿಗಿಂತ ಹೆಚ್ಚು ತೂಕ ಹೊತ್ತೊ ಯ್ಯುವುದಲ್ಲದೆ, ಅದಿರಿನ ಮೇಲೆ ನೀರು ಸಿಂಪಡಿಸದೆ, ತಾಡಪಾಲ್ ಮುಚ್ಚದೆ ಸಂಚರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಲಾರಿಗಳ ವಿರುದ್ಧ ಸಾರಿಗೆ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸಿ ದಂಡ ವಿಽಸಬೇಕೆಂದು ತಾಕೀತು ಮಾಡಿದರು.
ಜಿ¯್ಲÉಯಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಗಣಿಗಾರಿಕೆ, ಅನಽಕೃತ ಖನಿಜ, ಮರಳು ಸಾಗಣೆ ಸಂಪೂರ್ಣ ತಡೆಗೆ ಕಂದಾಯ, ಪೊಲೀಸ್, ಅರಣ್ಯ, ಗಣಿ ಮತ್ತು ಭೂವಿe್ಞÁನ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು. ಅಕ್ರಮ ತಡೆಯಲು ಪ್ರಮುಖ ಮಾರ್ಗಗಳಲ್ಲಿ ಆಯಕಟ್ಟಿನ ಜಾಗ ಗುರುತಿಸಿ ಜಂಟಿ ಚೆಕ್‌ಪೋ¸್ಟï‌ಗಳನ್ನು ಸ್ಥಾಪಿಸಬೇಕು. ನಿತ್ಯ ೨೪ ಗಂಟೆ ನಿರಂತರ ತಪಾಸಣೆ ನಡೆಸಬೇಕು ಎಂದು ಸೂಚಿಸಿದರು.
ಎಸ್ಪಿ ರಂಜಿತ್‌ಕುಮಾರ್ ಬಂಡಾರು, ಉಪ ಅರಣ್ಯ ಸಂರಕ್ಷಣಾಽಕಾರಿ ಗೋಪ್ಯನಾಯಕ್, ಗಣಿ ಮತ್ತು ಭೂವಿe್ಞÁನ ಇಲಾಖೆ ಉಪನಿರ್ದೇಶಕ ಎಂ.ಜೆ. ಮಹೇಶ್, ಪ್ರಾದೇಶಿಕ ಸಾರಿಗೆ ಅಽಕಾರಿ ಭರತ್ ಎಂ. ಕಾಳಿಸಿಂಗೆ ಇತರರು ಇದ್ದರು.
ಕೃಷಿಗಾಗಿ ಮಣ್ಣು ಬಳಸಬಹುದು
ರೈತರು ತಮ್ಮ ಕೃಷಿ ಭೂಮಿಗೆ ಉಚಿತವಾಗಿ ಕೆರೆ ಮಣ್ಣನ್ನು ಕೊಂಡೊಯ್ಯಲು ಯಾವುದೇ ಅಡ್ಡಿಯಿಲ್ಲ. ಆದರೆ, ಅದಕ್ಕೆ ಕೆರೆಯ ಮಾಲೀಕತ್ವ ಹೊಂದಿರುವ ಜಿಪಂ, ಸಣ್ಣ ನೀರಾವರಿ ಇಲಾಖೆಯ ಅಽಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ವೆಂಕಟೇಶ್ ತಿಳಿಸಿದರು. ಕೃಷಿ ಉದ್ದೇಶ ಹೊರತುಪಡಿಸಿ, ವಾಣಿಜ್ಯ ಅಥವಾ ಇತರ ಉದ್ದೇಶಗಳಿಗೆ ಮಣ್ಣು ಬಳಸಿಕೊಂಡಲ್ಲಿ ನಿಯಮಾನುಸಾರ ರಾಯಲ್ಟಿ ಪಾವತಿಸುವುದು ಕಡ್ಡಾಯ ಎಂದರು.