ಚಿತ್ರದುರ್ಗ ತಾಲೂಕಿನ ಹಂಪನೂರಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಗುರುವಾರ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗದ ಪ್ರಗತಿ ಪರಿಶೀಲನೆ ನಡೆಸಿದರು. ಶಾಸಕ ಡಾ.ಎಂ.ಚAದ್ರಪ್ಪ, ಸಂಸದ ಗೋವಿಂದ ಎಂ.ಕಾರಜೋಳ ಇತರರಿದ್ದರು.
- ಕೇಂದ್ರ ಸಚಿವ ವಿ.ಸೋಮಣ್ಣ ಭರವಸೆ
- ಹಂಪನೂರು ಸಮೀಪ ಪ್ರಗತಿ ಪರಿಶೀಲನೆ
- ಪ್ರತಿ ತಿಂಗಳು ವಿಸಿ ಮೂಲಕ ಮೇಲ್ವಿಚಾರಣೆ
ಚಿತ್ರದುರ್ಗ: ತುಮಕೂರು-ದಾವಣಗೆರೆ, ಗದಗ-ವಾಡಿ ಹಾಗೂ ರಾಯದುರ್ಗ-ತುಮಕೂರು ರೈಲ್ವೆ ಮಾರ್ಗದ ಯೋಜನೆಗಳನ್ನು ೨೦೨೭ರ ಡಿಸೆಂಬರ್ ಒಳಗೆ ಪೂರ್ಣಗೊಳಿಸುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಚಿತ್ರದುರ್ಗ ತಾಲೂಕಿನ ಹಂಪನೂರು ಬಳಿ ಗುರುವಾರ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿ ಪ್ರಗತಿ ಪರಿಶೀಲಿಸಿ ಮಾತನಾಡಿ, ೨೦೨೭ರ ಡಿಸೆಂಬರ್ ೨೭ರೊಳಗೆ ಈ ಯೋಜನೆಗಳ ಸಹಿತ, ೩೫ ರಿಂದ ೪೦ವರ್ಷಗಳ ಕಾಲ ನನೆಗುದಿಯಲ್ಲಿರುವ ರಾಜ್ಯದ ಇತರ ರೈಲ್ವೆ ಯೋಜನೆಗಳನ್ನು ಸಂಪೂರ್ಣಗೊಳಿಸಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಇದೆ. ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಈ ವರ್ಷ ೫೨ ಸಾವಿರ ಕೋಟಿ ರೂ. ಕೊಟ್ಟಿದ್ದು, ರಾಜ್ಯದಲ್ಲೇ ಯೋಜನೆಗಳ ಅನುಷ್ಠಾನ ತ್ವರಿತಗತಿಯಲ್ಲಿ ಆಗಬೇಕಿದೆ ಎಂದು ತಿಳಿಸಿದರು.
೨೦೨೭ರ ಜನವರಿಯೊಳಗೆ ಭರಮಸಾಗರದವರೆಗೆ ಸೇರಿ ಚಿತ್ರದುರ್ಗ-ದಾವಣಗೆರೆ ಮಾರ್ಗದ ಎಂಎ ಹಟ್ಟಿಯಿಂದ ಈಚಲನಾಗೇನಹಳ್ಳಿವರೆಗಿನ ೨೮.೭ ಕಿ.ಮೀ.ದೂರದ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಅಽಕಾರಿಗಳು, ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ನಿರೀಕ್ಷೆಯಂತೆ ಶೇ.೫೦ಕ್ಕೂ ಹೆಚ್ಚು ಪ್ರಗತಿಯಾಗಬೇಕಿತ್ತು. ಆದರೆ ಶೇ.೮ ರಿಂದ ೯ರವರೆಗೆ ಕೆಲಸವಾಗಿದ್ದು, ಕಾಮಗಾರಿ ಚುರುಕಾಗದಿದ್ದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ದಾವಣಗೆರೆಯ ಹಿಂದಿನ ಸಂಸದ ಮಲ್ಲಿಕಾರ್ಜುನಪ್ಪ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ ಅವರು ರೂಪಿಸಿದ ಯೋಜನೆ ಕಾರ್ಯರೂಪಕ್ಕೆ ಬಂದಿದೆ ಎಂದರು.
ಇನ್ನು ಮುಂದೆ ಪ್ರತಿ ತಿಂಗಳು ತಾವು ವಿಡಿಯೋ ಕಾನರೆನ್ಸ್ ಮೂಲಕ ಹಾಗೂ ೩ ತಿಂಗಳಿಗೊಮ್ಮೆ ಖುದ್ದು ಪರಿಶೀಲಿಸುವುದಾಗಿ ಹೇಳಿದ ಸಚಿವರು, ಜನಪ್ರತಿನಿಽಗಳೊಂದಿಗೆ ಸಮಾಲೋಚನೆ ನಡೆಸಿ ಕಾಮಗಾರಿ ತ್ವರಿತಕ್ಕೆ ನಿರ್ದೇಶಿಸಿದರು. ಈ ಮಾರ್ಗ ಕೈಗೂಡಿದರೆ ಪ್ರಯಾಣ ಅವಽಯಲ್ಲಿ ೩ ತಾಸು ಉಳಿತಾಯವಾಗಿ, ದಾವಣಗೆರೆ ಮತ್ತು ಬೆಂಗಳೂರು ನಡುವಿನ ದೂರ ಅಂದಾಜು ೮೦ ಕಿ.ಮೀ. ಕಡಿಮೆಯಾಗಲಿದೆ ಎಂದರು.
ಯೋಜನೆಗೆ ಭೂಮಿ ಕೊಟ್ಟಿರುವ ರೈತರ ಸಹಕಾರವನ್ನು ಮರೆಯಲಾಗದು. ಭೂಸ್ವಾಽÃನ ಪಡಿಸಿಕೊಂಡಿದ್ದರೆ ಬೆಳೆಗೆ ಅಡ್ಡಿಪಡಿಸಿಲ್ಲ. ಈಗ ಯಾರೂ ತೊಂದರೆ ಕೊಡದೆ ಸಹಕರಿಸಬೇಕು. ವಿಳಂಬವಾದರೆ ಕಾಮಗಾರಿ ವೆಚ್ಚ ಹೆಚ್ಚಾಗಿ, ಕೋಟ್ಯಂತರ ರೂ.ಅಽಕ ಅನುದಾನ ಬೇಕಾಗುತ್ತದೆ ಎಂಬುದನ್ನು ಗಮನಿಸಬೇಕೆಂದು ಮನವಿ ಮಾಡಿದರು. ಈ ವೇಳೆ ರೈತರು ನೀರು ಹಾಕದೆ ಕಾಮಗಾರಿ ನಡೆಸುತ್ತಿರುವ ಕಾರಣಕ್ಕೆ ಬೆಳೆಗಳಿಗೆ ಆಗುತ್ತಿರುವ ಹಾನಿ ಕುರಿತಂತೆ ಸಚಿವರ ಗಮನ ಸೆಳೆದರು.
ಭೂ ಸ್ವಾಽÃನಕ್ಕೆ ಸಂಬAಽಸಿದAತೆ ಹದ್ದುಬಸ್ತು ಇತರ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಬಗೆಹರಿಸಲಿದೆ. ಚಿತ್ರದುರ್ಗ-ದಾವಣಗೆರೆ ಮಾರ್ಗದ ಸಿರಿಗೆರೆ ಕ್ರಾಸ್ ಬಳಿಯ ನಿಲ್ದಾಣದ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಲಕ್ಷಿ÷್ಮÃಸಾಗರದಲ್ಲಿ ಮುಖ್ಯ ನಿಲ್ದಾಣವಾಗುತ್ತಿದೆ. ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಾಜಿ ಸಂಸದ ಸಿದ್ದೇಶ್ ಅವರು ಮಾತನಾಡಿದ್ದಾರೆ.
ಶಾಸಕರು, ಸಂಸದರು ಅಽಕಾರಿಗಳೊಂದಿಗೆ ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಸೂಕ್ತ ಸಮಾಲೋಚನೆ ನಡೆಸಿ, ಭಕ್ತರಿಗೆ ಅನುಕೂಲವಾಗುವಂತೆ ಮೂಲಸೌಕರ್ಯ ಕಲ್ಪಿಸುವುದಾಗಿ ಹೇಳಿದರು.
ದಾವಣಗೆರೆ-ತುಮಕೂರು ಮಾರ್ಗದಲ್ಲಿ ೧೯೨ ರೈಲ್ವೆ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಅಗತ್ಯವಿರುವೆಡೆ ಸೇತುವೆ ನಿರ್ಮಾಣಕ್ಕೆ ಶಾಸಕರು, ಸಂಸದರು ಕೋರಿಕೆ ಸಲ್ಲಿಸಿದರೆ ಪರಿಗಣಿಸಲಾಗುವುದು. ಭರಮಸಾಗರ-ಚಿತ್ರದುರ್ಗ ಸಹಿತ ಈ ಯೋಜನೆಯ ಭೂ ಸ್ವಾಽÃನ ಪ್ರಕ್ರಿಯೆ ಬಾಕಿ ಉಳಿಸಬಾರದೆಂದು ಅಽಕಾರಿಗಳಿಗೆ ಸೂಚಿಸಿದರು.
ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಕಾಮಗಾರಿ ನಿಧಾನಗತಿಯಲ್ಲಿದೆ. ವಿಳಂಬ ಮಾಡುತ್ತಿರುವ ಗುತ್ತಿಗೆದಾರರಿಗೆ ಕೂಡಲೇ ನೋಟಿಸ್ ಜಾರಿ ಮಾಡಬೇಕು. ಕಾಮಗಾರಿ ತ್ವರಿತಗೊಳಿಸಿ ನಿಗದಿತ ಅವಽಯಲ್ಲಿ ಪೂರ್ಣಗೊಳಿಸಬೇಕು ಎಂದರು. ಸಚಿವರು ಬಳಿಕ ಭರಮಸಾಗರ ರೈಲ್ವೆ ನಿಲ್ದಾಣದ ಜಾಗದ ಪರಿಶೀಲನೆ ನಡೆಸಿದರು.
ಶಾಸಕ ಡಾ.ಎಂ.ಚAದ್ರಪ್ಪ, ರೈಲ್ವೆ ಇಲಾಖೆ ನಿರ್ಮಾಣ ವಿಭಾಗದ ಮುಖ್ಯ ಇಂಜಿನಿಯರ್ ಪ್ರದೀಪ್‌ಪುರಿ, ದಾವಣಗೆರೆ ಡಿಸಿ ಗಂಗಾಧರಸ್ವಾಮಿ, ವಿಶೇಷ ಭೂ ಸ್ವಾಽÃನಾಽಕಾರಿ ವೆಂಕಟೇಶ್‌ನಾಯಕ್ ಇತರ ಅಽಕಾರಿಗಳು, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಚ್. ಎಸ್.ಲಿಂಗಮೂರ್ತಿ, ಜಿ.ಎಸ್.ಅನಿತ್‌ಕುಮಾರ್ ಇತರರಿದ್ದರು.