ಯುಗಾದಿ ಹಬ್ಬದ್ದಂಗವಾಗಿ ಚಿತ್ರದುರ್ಗ ತಾಲೂಕಿನ ಗೋನೂರು ನಿರಾಶ್ರಿತರ ಕೇಂದ್ರದಲ್ಲಿ ಗುರುವಾರ ಸಾಮೂಹಿಕವಾಗಿ ಎಣ್ಣೆ ಹಚ್ಚಿಕೊಂಡು ಸಂಭ್ರಮಿಸುತ್ತಿರುವ ನೂರಾರು ಮಂದಿ.
- ಎಣ್ಣೆ ಹಚ್ಚಿಕೊಂಡು ಸಂಭ್ರಮ
- ಸಾಮೂಹಿಕ ಯುಗಾದಿ ಆಚರಣೆ
- ಅಭ್ಯಂಜನ
ಚಿತ್ರದುರ್ಗ: ಹಿಂದೂಗಳ ಹೊಸ ವರ್ಷ `ಯುಗಾದಿ' ಹಬ್ಬದ ಅಂಗವಾಗಿ ಮನೆಯಲ್ಲಿ ಹಿರಿಯರು, ಕಿರಿಯರು, ಮಧ್ಯ ವಯಸ್ಕರೆಲ್ಲ ಎಣ್ಣೆ ಹಚ್ಚಿಕೊಂಡು ಬೇವಿನ ಮಿಶ್ರಣದ ನೀರಿನೊಂದಿಗೆ ಅಭ್ಯಂಜನಕ್ಕೆ ಮುಂದಾಗುವ ಸಂಪ್ರದಾಯ ಚಾಲ್ತಿಯಲ್ಲಿದೆ. ಆದರೆ, ಇಲ್ಲಿನ ಪರಿಸ್ಥಿತಿ ಭಿನ್ನ. ಇವರಿಗೆ ಸ್ವಂತ ಸೂರಿಲ್ಲ. ತಮ್ಮವರು ಎನ್ನುವವರೂ ಇಲ್ಲ. ಆದರೂ ಗುರುವಾರ ಅವರಿಗೆಲ್ಲ ಎಣ್ಣೆ ಮಜ್ಜನದ ಸಂಭ್ರಮ...
ಅAದ ಹಾಗೆ ಈ ಹೃದಯಸ್ಪರ್ಶಿ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ತಾಲೂಕಿನ ಗೋನೂರು ನಿರಾಶ್ರಿತರ ಪರಿಹಾರ ಕೇಂದ್ರ. ಇಲ್ಲಿ ಒಟ್ಟು ೪೨೫ ಮಂದಿ ಆಶ್ರಯ ಪಡೆಯುತ್ತಿದ್ದಾರೆ. ಈ ಪೈಕಿ ಅಂಗವಿಕಲರು, ಮಕ್ಕಳಿಂದ ದೂರವಾದ ವಯೋವೃದ್ಧರು ಇದ್ದಾರೆ. ಇವರಲ್ಲಿ ಅನಾಥ ಪ್ರe್ಞೆಯಾಗಲಿ, ಜಾತಿ-ಭೇದವಾಗಲಿ ಕಾಣಲು ಸಾಧ್ಯಲಿಲ್ಲ. ಎಲ್ಲರೂ ಕೂಡು ಕುಟುಂಬದವರAತೆ ಬಾಳುತ್ತಿದ್ದು, ಸ್ನೇಹದಿಂದ ಬದುಕುತ್ತ ಅಲ್ಲೇ ಸ್ವರ್ಗ ಕಾಣುತ್ತಿದ್ದಾರೆ.
ಹಲವು ಕಾರಣಕ್ಕೆ ನಿರಾಶ್ರಿತರ ಕೇಂದ್ರ ಸೇರಿದ್ದರೂ ದ್ವೇಷ, ಅಸೂಯೆ ಭಾವನೆ ಮೈಗೂಡಿಸಿಕೊಳ್ಳದೆ ಅಣ್ಣ-ತಮ್ಮಂದಿರAತೆ, ಅಕ್ಕ-ತಂಗಿಯರAತೆ ಬದುಕುತ್ತಿದ್ದಾರೆ. ಗುರುವಾರ ಸಾಮೂಹಿಕವಾಗಿ ಎಣ್ಣೆ ಹಚ್ಚಿಕೊಂಡು, ಒಗ್ಗಟ್ಟಿನಿಂದ ಯುಗಾದಿ ಹಬ್ಬ ಆಚರಿಸಿ, ಸಂಭ್ರಮಿಸಿದರು.
ಒಬ್ಬರಿಗೊಬ್ಬರು ಎಣ್ಣೆ ಹಚ್ಚುತ್ತ ಸಹಕಾರ ನೀಡಿ ಸ್ನೇಹ-ಬಾಂಧವ್ಯಕ್ಕೆ ಸಾಕ್ಷಿಯಾದರು. ಸಂತಸದಲ್ಲಿದ್ದ ಎಲ್ಲರೂ ಕೆಲಕಾಲ ಕೇಂದ್ರ ದ ಸುತ್ತ ಸುತ್ತಾಡಿದರು. ೩೪೭ ಪುರುಷರು, ೭೮ ಮಹಿಳೆಯರಿದ್ದು, ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೇಂದ್ರದಿAದ ನಿರಾಶ್ರಿತರಿಗೆ ಹೊಸ ಬಟ್ಟೆ ಹಾಗೂ ಯೂನಿ-Áರ್ಮ್ ವಿತರಿಸಲಾಯಿತು. ನಂತರ ಎಲ್ಲರ ಅಭ್ಯಂಜನ ಸ್ನಾನ ಮುಗಿ ದ ಬಳಿಕ ಒಗ್ಗೂಡಿ ಹಬ್ಬ ಆಚರಿಸಲಾಯಿತು. ಸಾಮೂಹಿಕ ಆಚರಣೆಯಾದ್ದರಿಂದ ಹೊಸಬರ ಗಮನ ಸೆಳೆಯಿತು. ಕೇಂದ್ರದಲ್ಲಿ ಹೋಳಿಗೆ ಸೇರಿ ತರಹೇವಾರಿ ಖಾದ್ಯ ಸಿದ್ಧಪಡಿಸಲಾಗಿತ್ತು. ಎಲ್ಲರೂ ಹಬ್ಬದೂಟ ಸವಿದರು. ಕೇಂದ್ರದ ಮೇಲ್ವಿಚಾರಕ ಎನ್. ಮಹದೇವಯ್ಯ, ಅಽÃಕ್ಷಕ ಬಿ. ವಿಜಯಕುಮಾರ್, ಸಿಬ್ಬಂದಿ ಬಿ. ದೇವರಾಜ್, ಬಿ.ಎಂ. ಪಾಲಯ್ಯ, ಬಿ. ರಮೇಶ್, ಪ್ರಕಾಶ್ ಇತರರಿದ್ದರು.
ಗ್ರಾಮೀಣ ಭಾಗಗಳಲ್ಲಿ ವಿಶೇಷಾಚರಣೆ
ಬುಡಕಟ್ಟು ಹಾಗೂ ಬಯಲುಸೀಮೆಯ ಕೋಟೆನಾಡು ಚಿತ್ರದುರ್ಗ ಜಿ¯್ಲÉಯ ಗ್ರಾಮೀಣ ಭಾಗಗಳ ಪೈಕಿ ಕೆಲವೆಡೆ ಧಾನ್ಯಗಳನ್ನು ಮನೆ ತುಂಬಿಸಿಕೊಳ್ಳುವ ಮೂಲಕ ಅನ್ನದಾತರು ಯುಗಾದಿ ಹಬ್ಬ ಆಚರಿಸಿದರು. ಮಾವಿನಕಾಯಿ, ಹುಣಸೇಹಣ್ಣು, ಮೆಣಸು, ಉಪ್ಪು, ಬೆಲ್ಲ, ಬೇವು ಇತರೆ ಪದಾರ್ಥಗಳನ್ನು ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ತಯಾರಿಸಿ ಅದನ್ನು ಸೇವಿಸುವ ಮೂಲಕವೂ ಕೆಲವರು ವಿಶೇಷವಾಗಿ ಆಚರಿಸಿದರು. ಹಲವು ದೇಗುಲಗಳಲ್ಲಿ ವರ್ಷದ -Àಲವನ್ನು ಸೂಚಿಸುವ ಪಂಚಾAಗ ಶ್ರಾವಣ ನಡೆಯಿತು.