ಬಾಂಗ್ಲಾ ದೇಶದಲ್ಲಿ ಹಿಂದು ಯುವಕರ ಹತ್ಯೆ ಖಂಡಿಸಿ ವಿಹಿಂಪ, ಬಜರಂಗದಳದ ನೂರಾರು ಕಾರ್ಯಕರ್ತರು ಚಿತ್ರದುರ್ಗದಲ್ಲಿ ಶುಕ್ರವಾರ ಪಂಜಿನ ಮೆರವಣಿಗೆ ನಡೆಸಿದರು. 
ಚಿತ್ರದುರ್ಗ

ಹಿಂದುಗಳ ಹತ್ಯೆ ಖಂಡಿಸಿ ಪಂಜಿನ ಮೆರವಣಿಗೆ

ಪ್ರಮುಖ ಮುಖ್ಯಾಂಶಗಳು

  • ವಿಹಿಂಪ, ಬಜರಂಗದಳ
  • ಬಾಂಗ್ಲಾ ದೇಶದಲ್ಲಿ ಹಿಂದು ಯುವಕರ ಹತ್ಯೆ
  • ಪಂಜಿನ ಮೆರವಣಿಗೆ
ಚಿತ್ರದುರ್ಗ: ಬಾಂಗ್ಲಾ ದೇಶದಲ್ಲಿ ಹಿಂದು ಯುವಕರ ಹತ್ಯೆ ಖಂಡಿಸಿ ವಿಹಿಂಪ, ಬಜರಂಗದಳದ ನೂರಾರು ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪಂಜಿನ ಮೆರವಣಿಗೆ ನಡೆಸಿದರು.
ಆನೆಬಾಗಿಲು ಮುಂಭಾಗದಿAದ ಆರಂಭವಾದ ಮೆರವಣಿಗೆ ಗಾಂಽ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಪ್ರವಾಸಿ ಮಂದಿರ ಮಾರ್ಗ ವಾಗಿ ಸಂಚರಿಸಿ ವೀರವನಿತೆ ಒನಕೆ ಓಬವ್ವ ವೃತ್ತ ತಲುಪಿತು. ನಂತರ ದೀಪು ಚಂದ್ರದಾಸ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಾಂಗ್ಲಾದಲ್ಲಿ ನಡೆದ ದುಷ್ಕೃತ್ಯ ವಿಶ್ವದ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಹಿಂದುಗಳ ಮೇಲೆ ಹಲ್ಲೆ, ದೌರ್ಜನ್ಯ, ಹತ್ಯೆ ಪ್ರಕರಣಗಳು ನಡೆಯುತ್ತಿವೆ. ಇದರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವ ದೇಶ ಮತ್ತು ರಾಜ್ಯಗಳಲ್ಲಿ ಹಿಂದುಗಳನ್ನೇ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಘಟನೆ ಮರುಕಳಿಸುತ್ತಿವೆ. ಪಶ್ಚಿಮ ಬಂಗಾಳದಲ್ಲೂ ಹಿಂದು ಧರ್ಮೀಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇದಕ್ಕೆ ಕಡಿವಾಣ ಹಾಕಲು ಹಿಂದುಗಳಲ್ಲಿ ಒಗ್ಗಟ್ಟು ಅಗತ್ಯ ಎಂದರು.
ಪದಾಽಕಾರಿಗಳಾದ ಡಾ. ಮಂಜುನಾಥ್, ಕೇಶವ್, ಭಾನುಮೂರ್ತಿ, ಬಾಲಕೃಷ್ಣ, ದೀಪಕ್‌ರಾಜ್, ರಂಗಸ್ವಾಮಿ, ವಿನಯ್, ಸಚ್ಚಿನ್, ತೇಜೇಶ್ವರ್ ಇತರರಿದ್ದರು.