ಚಿತ್ರದುರ್ಗ ಜಿಲ್ಲಾ ಅಂಕಿತ ಅಽಕಾರಿ ಫಲಕ 
ಚಿತ್ರದುರ್ಗ

ಹಲ್ಲಿಲ್ಲದ ಆಹಾರ ಸುರಕ್ಷತೆ ಇಲಾಖೆ

ಪ್ರಮುಖ ಮುಖ್ಯಾಂಶಗಳು

  • ನಿಯೋಜನೆಯೇ ಆಧಾರ
  • ಹಲವೆಡೆ ನೌಕರರ ಹುದ್ದೆಗಳೂ ಖಾಲಿ
  • ಡಿಪಾರ್ಟ್ಮೆಂಟ್‌ಗೆ ಓಬೀರಾಯನ ಸ್ಟಾ-ï ಪ್ಯಾಟರ್ನ್

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಜನರ ಆರೋಗ್ಯ ರಕ್ಷಣೆಗಾಗಿ ಕಾಲಕ್ಕೆ ತಕ್ಕಂತೆ ಬಲಗೊಂಡು ಹೋಟೆಲ್, ಅಂಗಡಿಮುಂಗಟ್ಟು ಮತ್ತಿತರ ಆಹಾರ ಮಾರಾಟ ಸ್ಥಳಗಳ ನಿಯಮಿತ ತಪಾಸಣೆ ನಡೆಸಬೇಕಿದ್ದ `ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ' ಇದುವರೆಗೂ ನಿಯೋಜಿತ ಅಽಕಾರಿಗಳನ್ನೇ ನೆಚ್ಚಿಕೊಳ್ಳುವಂತಾಗಿದೆ.
ಇಲಾಖೆಯಲ್ಲಿ ನಿಯೋಜನೆ ಅಥವಾ ಹೆಚ್ಚುವರಿ ಪ್ರಭಾರದಲ್ಲಿರುವ ಅಽಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆ ಹಲ್ಲಿಲ್ಲದ ಹಾವಿನಂತಾಗಿದೆ. ಬೆಂಗಳೂರಿನಲ್ಲಿ ಸ್ಟಾರ್ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳ ಮೇಲೆ ನಡೆದ ದಾಳಿಗಳಿಂದ ಇಂಥದ್ದೊಂದು ಇಲಾಖೆ ಇದೆ ಎಂಬುದು ಜನರಿಗೆ ಗೊತ್ತಾಗುವಂತಾಗಿದೆ.
ಕಳೆದ ವರ್ಷದಿಂದ ತಾಲೂಕು ಆಹಾರ ಸುರಕ್ಷತಾ ಅಽಕಾರಿಗಳನ್ನಾಗಿ ಆಯಾ ತಾಲೂಕು ಆರೋಗ್ಯಾಽಕಾರಿಗಳನ್ನು ಹಾಗೂ ಜಿಲ್ಲಾ ಅಂಕಿತ ಅಽಕಾರಿಗಳನ್ನಾಗಿ ಉಪವಿಭಾಗಾಽಕಾರಿಗಳನ್ನು ನೇಮಿಸಲಾಗಿದೆ. ಅಂಕಿತ ಅಽಕಾರಿಗಳಾಗಿ ಎಸಿ, ತಾಲೂಕು ಆಹಾರ ಸುರಕ್ಷತಾ ಅಽಕಾರಿಗಳಾಗಿ ಟಿಎಚ್‌ಒಗಳು ನೇಮಕವಾಗಿದ್ದರೂ, ರಾಜ್ಯದ ಹಲವೆಡೆ ಅಂಕಿತ ಅಽಕಾರಿಗಳಾಗಿದ್ದ ಆರೋಗ್ಯ ಇಲಾಖೆ ವೈದ್ಯರೇ ಇನ್ನೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಕರ್ತವ್ಯದಲ್ಲಿದ್ದ ಎಂಎಸ್‌ಸಿ ಕೆಮಿಸ್ಟ್ರಿ, ಸ್ನಾತಕೋತ್ತರ ಪದವೀಧರರಾದ ೬೦-೭೦ ಆರೋಗ್ಯ ನಿರೀಕ್ಷಕರು ತಾಲೂಕು ಆಹಾರ ಸುರಕ್ಷತಾ ಅಽಕಾರಿಗಳಾಗಿ ಮುಂದುವರಿದಿದ್ದಾರೆ.
ಜಿಲ್ಲೆ ಹಾಗೂ ಆಯಾ ತಾಲೂಕಿಗೆ ಇರುವ ಒಬ್ಬೊಬ್ಬ ಅಽಕಾರಿಗಳಿಂದ ಗುರಿ ತಲುಪಲು ಕಸರತ್ತು ನಡೆಸಬೇಕಾಗಿದೆಯೇ ಹೊರ ತು, ಪರಿಣಾಮಕಾರಿ ತಪಾಸಣೆ ಸಾಧ್ಯವಾಗುತ್ತಿಲ್ಲ. ಕಂದಾಯ ಇಲಾಖೆ ಕಾರ್ಯಭಾರದಿಂದಾಗಿ ಎಸಿಗಳಿಗೂ ಹಾಗೂ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ನಿರ್ವಹಣೆಯಿಂದ ಟಿಎಚ್‌ಒಗಳಿಗೂ ಆಹಾರ ಸುರಕ್ಷತೆ ಚಟುವಟಿಕೆಗಳತ್ತ ಗಂಭೀರ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ.
ಎ-ï‌ಡಿಎ, ಡಾಟಾ ಎಂಟ್ರಿ ಆಪರೇಟರ್, ಗ್ರೂಪ್ ಡಿ ನೌಕರ ಹಾಗೂ ಚಾಲಕ ಹುದ್ದೆಗಳು ವಿವಿಧ ಜಿಲ್ಲಾ ಅಂಕಿತ ಅಽಕಾರಿ ಕಚೇರಿ ಗಳಲ್ಲಿ ಖಾಲಿ ಇವೆ. ಹಲವು ಎ-ï‌ಡಿಎಗಳು ೨-೩ ಜಿಲ್ಲೆಗಳ ಪ್ರಭಾರದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿದ್ದ ಡೇಟಾ ಎಂಟ್ರಿ ಆಪರೇಟರ್‌ಗಳ ಸೇವೆ ಸ್ಥಗಿತಗೊಂಡಿದೆ.
ತಪಾಸಣೆ ನಡೆಸುವ ತಾಲೂಕು ಅಽಕಾರಿ ವಿವರಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಬೇಕು. ಲೋಪದೋಷಗಳಿದ್ದರೆ ಇಂಪ್ರೂವ್‌ಮೆಂಟ್ ನೋಟಿಸ್ ನೀಡಬೇಕು. ಅಸುರಕ್ಷಿತವೆಂಬ ಶಂಕೆ ಇದ್ದರೆ, ಆಹಾರ ಪದಾರ್ಥದ ಸ್ಯಾಂಪಲ್ ಹಾಗೂ ಎ-ï‌ಎಸ್‌ಎಸ್‌ಎಐ ಪರವಾನಗಿ ಇಲ್ಲದ ಪ್ಯಾಕಿಂಗ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕಾಗುತ್ತದೆ.
ಪರೀಕ್ಷಾ ವರದಿ ಬಂದ ಬಳಿಕ ಅಸುರಕ್ಷತೆ ಅಥವಾ ಕಡಿಮೆ ಗುಣಮಟ್ಟದ್ದಾಗಿದ್ದರೆ ಪುನಃ ನೋಟಿಸ್ ನೀಡಬೇಕು. ಗುಣಮಟ್ಟ ಕಡಿಮೆ ಇದ್ದರೆ ಎಸಿ, ಎಡಿಸಿ ಕೋರ್ಟ್ಗಳಲ್ಲಿ ದಂಡ ವಿಽಸಬೇಕಾಗುತ್ತದೆ. ಅಸುರಕ್ಷಿತ ಆಹಾರವಾದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಇಂತಹ ಕಚೇರಿ ಕೆಲಸ ಹಾಗೂ ಕಾರ್ಯಾಚರಣೆಗಳನ್ನು ಚುರುಕುಗೊಳಿಸಲು ಇಲಾಖೆ ಸಿಬ್ಬಂದಿ ಕೊರತೆ ನೀಗಿಸಬೇಕಿದೆ.
ಪ್ರತಿ ವರ್ಷ ತಾಲೂಕಿನಲ್ಲಿ ಕನಿಷ್ಠ ೨೫ ತಪಾಸಣೆಗಳ ಗುರಿ ಇದೆ. ಎಲ್ಲೆಡೆ ಹೆಚ್ಚುತ್ತಿರುವ ಹೋಟೆಲ್, ಧಾಬಾ, ಬೇಕರಿ,ರೆಸ್ಟೋರೆಂ ಟ್‌ಗಳ ಜತೆಗೆ ಬೀದಿಬದಿ ಆಹಾರ ಮಾರಾಟವೂ ವ್ಯಾಪಕವಾಗಿದೆ. ಅಂಗನವಾಡಿ, ಹಾಸ್ಟೆಲ್‌ಗಳನ್ನೂ ಪರಿಶೀಲಿಸಬೇಕಾಗಿದೆ. ಇಂ ತಹ ಸನ್ನಿವೇಶದಲ್ಲಿ ಹಳೆಯ ಸ್ಟಾ-ï ಪ್ಯಾಟರ್ನ್ ಇಟ್ಟುಕೊಂಡು ತಪಾಸಣೆ ಹೆಚ್ಚಿಸುವುದು ಹೇಗೆ ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕಾಗಿದೆ.
ಚಿತ್ರದುರ್ಗ ಜಿಲ್ಲೆಯ ಅಂಕಿಅಂಶ
೨೦೨೪-೨೫ನೇ ಸಾಲು: ೫೪೬ ವಿವಿಧ ಸ್ಥಳಗಳಲ್ಲಿ ತಪಾಸಣೆ ನಡೆಸಿ ೧,೫೭೬ ಆಹಾರ ಪದಾರ್ಥಗಳ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ೩೫ ಪ್ರಕರಣಗಳಲ್ಲಿ ದಂಡ ಮತ್ತಿತರ ಕ್ರಮ ಕೈಗೊಳ್ಳಲಾಗಿದೆ.
೨೦೨೫-೨೬ನೇ ಸಾಲು: ೨೨೮ ತಪಾಸಣೆÉ ನಡೆಸಿ, ೯೩೭ ಸ್ಯಾಂಪಲ್ ಸಂಗ್ರಹಿಸಿದ್ದು, ೩೬ ಪ್ರಕರಣದಲ್ಲಿ ಕ್ರಮ ಜರುಗಿಸಲಾಗಿದೆ. ಅಂದಾಜು ೧೨ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
"

ಇದುವರೆಗೆ ಇದ್ದ ಕೆಲವು ತಾಂತ್ರಿಕ ತೊಡಕುಗಳು ಈಗ ನಿವಾರಣೆಯಾಗಿವೆ. ಜಿಲ್ಲೆಯಲ್ಲಿ ತಪಾಸಣೆ ಸಂಖ್ಯೆ ಹೆಚ್ಚಿಸಲಾಗುವುದು. ಟಿಎಚ್‌ಒಗಳಿಗೆ ಕಾರ್ಯದೊತ್ತಡ ಅಽಕವೆಂಬುದನ್ನು ಒಪ್ಪುವುದಾದರೂ, ಈ ಜವಾಬ್ದಾರಿಯನ್ನು ಅವರು ನಿರ್ವಹಿಸಲೇಬೇಕಾಗುತ್ತದೆ.

— ಡಾ. ಕೆ.ಜೆ. ಕಾಂತರಾಜ್, ಜಿಲ್ಲಾ ಅಂಕಿತ ಅಽಕಾರಿ ಹಾಗೂ ಎಸಿ, ಚಿತ್ರದುರ್ಗ.

"

ನಗರಸಭೆಯಿಂದ ಹೋಟೆಲ್ ಮತ್ತಿತರ ಆಹಾರ ಪದಾರ್ಥ ಮಾರಾಟ ಸ್ಥಳಗಳ ಸ್ವಚ್ಛತೆ ಪರಿಶೀಲಿಸಬಹುದಫಿÉ್ಟÃ. ಆದರೆ ಆಹಾರ ಗುಣಮಟ್ಟದ ಪರಿಶೀಲನೆಗೆ ನಮಗೆ ಅಽಕಾರವಿಲ್ಲ.

— ಎಸ್. ಲಕ್ಷಿ÷್ಮ, ಆಯುಕ್ತರು, ನಗರಸಭೆ, ಚಿತ್ರದುರ್ಗ.