ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ನಮ್ಮೂರ ನೆಂಟರು ಸರಣಿ ಮಾಲಿಕೆಯಲ್ಲಿ ನಟ ಶರತ್ ಲೋಹಿತಾಶ್ವ ಅವರನ್ನು ಸನ್ಮಾನಿಸಲಾಯಿತು. ಕೆ.ಎಂ. ವೀರೇಶ್, ಎನ್.ಆರ್. ಮಹಾಂತರೆಡ್ಡಿ, ಡಾ. ಹೇಮಂತರಾಜು, ಚಿಕ್ಕಪ್ಪನಹಳ್ಳಿ ಷಣ್ಮುಖ, ವಿನಾಯಕ ತೊಡರನಾಳ್, ಹಂಪಯ್ಯನಮಾಳಿಗೆ ಧನಂಜಯ ಇತರರು ಇದ್ದರು. 
ಚಿತ್ರದುರ್ಗ

ಪ್ರೇಕ್ಷಕನ ಮೆಚ್ಚುಗೆಗಿಂತ ಮಿಗಿಲಾದದ್ದು ಯಾವುದು ಇಲ್ಲ

ಪ್ರಮುಖ ಮುಖ್ಯಾಂಶಗಳು

  • ನಟ ಶರತ್ ಲೋಹಿತಾಶ್ವ ಅಭಿಪ್ರಾಯ
  • ನಮ್ಮೂರ ನೆಂಟರು ಸರಣಿ ಮಾಲಿಕೆಯಲ್ಲಿ ದುರ್ಗದಲ್ಲಿ ಸನ್ಮಾನ
  • ಭಾಷಾಭಿಮಾನ
ಚಿತ್ರದುರ್ಗ: ಪಾತ್ರ ಯಾವುದೇ ಇರಲಿ ಪ್ರೇಕ್ಷಕರು ಮನಪೂರ್ವಕವಾಗಿ ಮೆಚ್ಚಿಕೊಂಡರೆ ಕಲಾವಿದನಿಗೆ ಅದು ಪ್ರಶಸ್ತಿಗಿಂತ ಮಿಗಿ ಲಾದದ್ದು ಎಂದು ನಟ ಶರತ್ ಲೋಹಿತಾಶ್ವ ಹೇಳಿದರು.
ಪತ್ರಿಕಾ ಭವನದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಗೆಳೆಯರ ಬಳಗ, ದುರ್ಗದಸಿರಿ ಕಲಾಸಂಘ, ಶರಣ ಸಾಹಿತ್ಯ ಪರಿ ಷತ್ ಜಿಲ್ಲಾ ಘಟಕ ಹಾಗೂ ರೈತಸಂಘ ಬುಧವಾರ ಆಯೋಜಿಸಿದ್ದ ನಮ್ಮೂರ ನೆಂಟರು ಸರಣಿ ಮಾಲಿಕೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಜನಪರ, ಜೀವಪರ, ರೈತಪರ ಕಾಳಜಿ, ಭಾಷಾಭಿಮಾನ, ಕಲೆ, ಸಂಸ್ಕೃತಿ, ನಮ್ಮತನ ಸೇರಿ ಎಲ್ಲ ವಿಚಾರದಲ್ಲೂ ತಂದೆ ಲೋಹಿ ತಾಶ್ವ ಅವರು ಪ್ರಭಾವ ಬೀರಿದರು.
ಬಹಳಷ್ಟು ಚಿತ್ರಗಳಲ್ಲಿ ಊರ ಗೌಡನ ಪಾತ್ರಕ್ಕೆ ಆಯ್ಕೆಯಾಗಲು ಗ್ರಾಮೀಣ ಸೊಗಡನ್ನು ಚೆ ನ್ನಾಗಿ ಅರಿತಿರುವುದು ಕಾರಣ. ಅಲ್ಲ ದೆ, ಪಾತ್ರದಲ್ಲಿ ದರ್ಪ ತೋರಿಸಲಿಕ್ಕೂ ಬಡವರ ನೋವು ಗೊತ್ತಿರಬೇಕು. ಹೀಗಾಗಿ ಸಮರ್ಥ ವಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದರು.
ಈ ಜಿಲ್ಲೆಯೊಂದಿಗೆ ಬಾಲ್ಯದಿಂದಲೂ ಅವಿನಾಭಾವ ಸಂಬAಧ ಇದೆ. ಜನಿಸಿದ್ದು ಹಿರಿಯೂರು ಸಮೀಪದ ಹಳ್ಳಿಯಲ್ಲಿ. ನನ್ನ ಪತ್ನಿ ಕೂಡ ಅದೇ ತಾಲೂಕಿನವರು. ಹೀಗಾಗಿ ನಾನೂ ಈ ಮಣ್ಣಿನೊಂದಿಗೆ ನಂಟು, ನೆಂಟು ಎರಡನ್ನೂ ಹೊಂದಿದ್ದೇನೆ. ಚಿತ್ರದುರ್ಗದಲ್ಲಿ ಕಂಪನಿ ನಾಟಕಗಳನ್ನು, ಟೆಂಟ್‌ಗಳಲ್ಲಿ ಸಿನಿಮಾಗಳನ್ನು ನೋಡಿದ ಮೇಲೆ ಕಲಾವಿದನಾಗುವ ಆಸಕ್ತಿ ಬೆಳೆಯಿತು ಎಂದು ತಿಳಿ ಸಿದರು.
ಕಲಾವಿದನಾಗಿ ಬೆಳೆಯಬೇಕೆಂಬ ಬಯಕೆ ಚಿಕ್ಕಂದಿನಲ್ಲೇ ಇತ್ತಾದರೂ ಚಿವುಟುವ ಪ್ರಯತ್ನಗಳು ಸಾಕಷ್ಟು ನಡೆದಿದೆ. ಉತ್ತಮ ಪಾತ್ರಗಳನ್ನು ಅಭಿನಯಿಸಬೇಕೆಂಬ ಆಸೆ ನನಗೂ ಇದೆ. ಆದರೆ, ಸಿಕ್ಕ ಅವಕಾಶ ಬಳಸಿಕೊಂಡು ಇಲ್ಲಿಯವರೆಗೂ ಸಾಗಿ ಬಂದಿದ್ದೇನೆ.
ಒಳ್ಳೆಯ-ಕೆಟ್ಟ ಪಾತ್ರ ಎಂಬುದಕ್ಕಿAತಲೂ ಅಭಿನಯವೇ ಮುಖ್ಯ. ಅಭಿನಯದಷ್ಟೇ ಒಲವು ಕ್ರಿಕೆಟ್ ಮೇಲೂ ಇತ್ತು. ಕಾಲೇಜು ಹಂತದಲ್ಲಿ ಅನಿಲï‌ಕುಂಬ್ಳೆ, ರಾಹುಲï ದ್ರಾವಿಡ್ ಅವರೊಟ್ಟಿಗೆ ಕ್ರಿಕೆಟ್ ಆಡಿದ್ದೇನೆ ಎಂದು ಸ್ಮರಿಸಿಕೊಂಡರು.
ಆದಿಜಾAಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಪ್ರಕಾಶ್‌ರಾಜ್ ತರುವಾಯ ಕಂಚಿನ ಕಂಠದ ಖಳನಟ ಯಾರಾದರೂ ಕನ್ನಡದಲ್ಲಿ ಇದ್ದರೆ ಅದು ಶರತ್ ಲೋಹಿತಾಶ್ವ. ಪಾತ್ರದೊಳಗೆ ಪರಕಾಶ ಪ್ರವೇಶ ಮಾಡುವುದರಲ್ಲಿ ವಜ್ರಮುನಿ ಇದ್ದಂತೆ ಎಂದು ಬಣ್ಣಿಸಿದರು.
ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್ ಸೇರಿ ಅನೇಕ ನಟರು ದುರ್ಗದ ಮಣ್ಣಿನೊಂದಿಗೆ ನಂಟು ಹೊಂದಿದ್ದಾರೆ. ಹೀಗಾಗಿ ದುರ್ಗ ಕಲಾವಿದರ ತವರಾಗಿದೆ. ಇಲ್ಲಿನ ಪ್ರತಿಯೊಬ್ಬರೂ ಒಂದೊAದು ರೀತಿಯ ಕಲೆ ಕರಗತ ಮಾಡಿಕೊಂಡಿದ್ದಾರೆ. ಕಲಾವಿದರನ್ನು ಪ್ರೋತ್ಸಾಹಿಸುವಲ್ಲೂ ಇಲ್ಲಿನ ಜನ ಹಿಂದೆ ಬಿದ್ದಿಲ್ಲ ಎಂದರು.
ದುಶ್ಚಟಗಳಿಗೆ ಯುವಕರು, ಮಕ್ಕಳೂ ಬಹುಬೇಗ ಆಕರ್ಷಿತರಾಗುತ್ತಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ದೇಶ ಮುನ್ನಡೆಯುತ್ತಿದೆ. ಆದ್ದರಿಂದ ಫಿಜಿಕಲï ಫಿಟ್ನೆಸ್ ಬಗ್ಗೆ ಗಮನ ಹರಿಸದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ದಶಕಗಳ ಹಿಂದೆ ಚಂದ್ರಪ್ಪ ದುರ್ಗದ ನಗರಸಭಾಧ್ಯಕ್ಷರಾಗಿದ್ದ ವೇಳೆ ಎರಡು ಲಕ್ಷ ಮರ ಬೆಳೆಸಿದರು. ನಾವೆಲ್ಲರೂ ಬರದ ನಾಡೆಂ ದು ಹೇಳುತ್ತೇವೆ. ಆದರೆ, ಗಿಡ-ಮರ ಬೆಳೆಸುವ ಕಾರ್ಯ ಯಾರೂ ಮಾಡುತ್ತಿಲ್ಲ. ಪರಿಸರ ಕಾಳಜಿ ಮರೆತಿದ್ದೇವೆ. ೩೦ ಅಡಿ ರಸ್ತೆ ಯಲ್ಲಿ ೨೦ ಅಡಿ ಮಾತ್ರ ಉಳಿದಿದೆ. ಚರಂಡಿಗಳು ಒತ್ತುವರಿಯಾಗಿವೆ. ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿ ದೆ ಎಂದು ಬೇಸರಿಸಿದರು.
ತಮ್ಮ ಮನೋಜ್ಞ ಅಭಿನಯದ ಮೂಲಕ ನಾಡಿನ ಗಮನ ಸೆಳೆದಿರುವ ಶರತ್ ಅವರು ಮದಕರಿನಾಯಕ ಪಾತ್ರಕ್ಕೂ ಅತ್ಯಂತ ಸೂಕ್ತರು ಎಂದು ದುರ್ಗದಸಿರಿ ಕಲಾಸಂಘದ ಅಧ್ಯಕ್ಷ ಎನ್.ಆರ್. ಮಹಾಂತರೆಡ್ಡಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ. ವೀರೇಶ್ ಅಭಿಪ್ರಾಯಪಟ್ಟರು.
ಉಪನ್ಯಾಸಕ ಡಾ. ಹೇಮಂತರಾಜು, ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿನಾಯಕ ತೊಡರನಾಳ್, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಇತರರಿದ್ದರು.