- DC
- ಅನಿಲ ಸರಬರಾಜುದಾರ ಕಂಪನಿ
- ದಾಸ್ತಾನು
ಚಿತ್ರದುರ್ಗ: ಗೃಹಬಳಕೆಯ ಅಡುಗೆ ಅನಿಲದ ದಾಸ್ತಾನು ಜಿ¯್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿದ್ದು, ಗ್ರಾಹಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿ¯್ಲÁಽಕಾರಿ ಟಿ. ವೆಂಕಟೇಶ್ ತಿಳಿಸಿದರು.
ಡಿಸಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಅಡುಗೆ ಅನಿಲ ಸರಬರಾಜುದಾರ ಕಂಪನಿಗಳಾದ ಐಒಸಿಎಲï ಮತ್ತು ಬಿಪಿಸಿಎಲï ಸೇಲ್ಸï ಅಽಕಾರಿಗಳ ಸಭೆಯಲ್ಲಿ ಮಾತನಾಡಿದರು.
ಮಧ್ಯಪ್ರಾಚ್ಯ ರಾಷ್ಟçಗಳಲ್ಲಿ ನಡೆಯುತ್ತಿರುವ ಯುದ್ಧದಿಂದ ಜಿಲ್ಲೆಯಲ್ಲೂ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದೆAಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಆದರೆ, ದಾಸ್ತಾನು ಸಮರ್ಪಕವಾಗಿದೆ ಎನ್ನುವುದನ್ನು ಸೇಲ್ಸï ಅಽಕಾರಿಗಳಿಂದಲೇ ಡಿಸಿ ಖಚಿತ ಪಡಿಸಿಕೊಂಡರು.
ಸರಬರಾಜು ಸಹಜ ಸ್ಥಿತಿಯ¯್ಲÉÃ ಇದೆ. ಅಡುಗೆ ಅನಿಲ ಸಿಲಿಂಡರ್ ಸಿಗುವುದಿಲ್ಲವೆಂಬ ತಪ್ಪು ಕಲ್ಪನೆ ಮತ್ತು ಭಯದಿಂದ ಗ್ರಾಹ ಕರು ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲುಗಟ್ಟಿ ನಿಲ್ಲುವ, ಮುಗಿಬೀಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಗ್ರಾಹಕರು ನೀಡುವುದು ಕಂಡುಬAದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಸೇಲ್ಸï ಅಽಕಾರಿಗಳಾದ ಭರತ್ ಚಂದ್ರ, ಸುಶ್ರಿಮ ಬೆಹ್ರ ಇದ್ದರು.