ಹೊಳಲ್ಕೆರೆ ತಾಲೂಕಿನ ರಾಮಗಿರಿ ವಿರಕ್ತಮಠದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಹಕೀಬ್, ಚಂದ್ರಶೇಖರನಾಯ್ಕ, ಮುರಳಿ, ಶ್ರೀಧರ್, ಷಣ್ಮುಖಪ್ಪ ಇತರರಿದ್ದರು. Blood Donation 
ಚಿತ್ರದುರ್ಗ

ರಕ್ತದಾನದಿಂದ ಅಡ್ಡಪರಿಣಾಮ ಆಗದುBlood Donation

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ವೈದ್ಯಾಧಿಕಾರಿ ಡಾ.ಹಕೀಬ್ ಹೇಳಿಕೆ
  • ರಾಮಗಿರಿಯ ವಿರಕ್ತಮಠದಲ್ಲಿ ಶಿಬಿರ
ಹೊಳಲ್ಕೆರೆ: ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬ ತಪ್ಪು ಕಲ್ಪನೆ ಜನಸಾಮಾನ್ಯರಲ್ಲಿದೆ. ಅಂತಹ ಮನೋಭಾವದಿಂದ ಎಲ್ಲರೂ ಹೊರಬರಬೇಕು ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಹಕೀಬ್ ತಿಳಿಸಿದರು. Blood Donation
ತಾಲೂಕಿನ ರಾಮಗಿರಿ ವಿರಕ್ತಮಠದ ಆವರಣದಲ್ಲಿ ಜಿಲ್ಲಾಸ್ಪತ್ರೆ, ರಕ್ತ ನಿಧಿ ಕೇಂದ್ರ, ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಆಸ್ಪತ್ರೆ, ರಾಮಗಿರಿ ಹಾಗೂ ಗೌಡಿಹಳ್ಳಿ ಪ್ರಾಥಮಿಕ ಅರೋಗ್ಯ ಕೇಂದ್ರ, ಹೊಳಲ್ಕೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಆರೋಗ್ಯವಂತ ವ್ಯಕ್ತಿ ವರ್ಷಕ್ಕೆ ಕನಿಷ್ಠ ಎರಡು ಬಾರಿ ರಕ್ತದಾನ ಮಾಡಿದರೂ ತಪ್ಪಿಲ್ಲ. ಇದರಿಂದ ದೇಹದಲ್ಲಿ ರಕ್ತ ಪುನಃ ಉತ್ಪತ್ತಿಯಾಗುವ ಜತೆಗೆ ಶುದ್ಧಿಯಾಗುತ್ತದೆ ಎಂದರು.
ರಾಮಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಚಂದ್ರಶೇಖರನಾಯ್ಕ ಮಾತನಾಡಿ, ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ಸುಸ್ಥಿತಿಯಲ್ಲಿಡುವ ಜತೆಗೆ ಅನೇಕ ಜನರ ಪ್ರಾಣ ಉಳಿಸಬಹುದಾಗಿದೆ. ರಕ್ತದಾನ ಮಾಡುವವರು ಒಗ್ಗೂಡಿ ತಾಲೂಕಿನಲ್ಲಿ ಸಂಘ ಸ್ಥಾಪಿಸಿದರೆ ಇದು ದೇಶದ ಪ್ರಗತಿಗೆ ಪೂರಕ ಸಂಘಟನೆಯಾಗಲಿದೆ ಎಂದು ಹೇಳಿದರು. ಹಿರಿಯ ಪ್ರಯೋಗ ಶಾಲಾ ತಜ್ಞ ಮುರಳಿ, ಮುಖಂಡ ಶ್ರೀಧರ್ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಷಣ್ಮುಖಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಪಾಂಡು, ಹಿರಿಯ ಆರೋಗ್ಯ ನಿರೀಕ್ಷಕ ಗೋಪಾಲನಾಯ್ಕ, ಆಪ್ತ ಸಮಾಲೋಚಕರಾದ ರೂಪಶ್ರೀ, ಹೇಮಂತ್, ಪ್ರಯೋಗ ಶಾಲಾ ತಂತ್ರಜ್ಞೆ ರಾಜೇಶ್ವರಿ, ಹಿರಿಯ ಆರೋಗ್ಯ ಸಹಾಯಕಿಯರಾದ ಅನುಸೂಯ, ವೀಣಾ ಇತರರಿದ್ದರು.
ಶಿಬಿರದಲ್ಲಿ 45 ಜನ ರಕ್ತದಾನ ಮಾಡಿದರು.