ಹಿಂದೂ ಜಾಗರಣಾ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ದಿವಸದ ಅಂಗವಾಗಿ ಗುರುವಾರ ಚಿತ್ರದುರ್ಗದಲ್ಲಿ ಪಂಜಿನ ಮೆರವ ಣಿಗೆ ಜರುಗಿತು. ವೇದಿಕೆ ಕರ‍್ಯಕರ್ತರು, ಪ್ರಮುಖರು ಭಾಗವಹಿಸಿದ್ದರು.
- ಹಿಂದೂ ಜಾಗರಣಾ ವೇದಿಕೆಯ ಸತೀಶ್ ಪೂಜಾರ್ ಅಭಿಮತ
- ನಗರದಲ್ಲಿ ಪಂಜಿನ ಮೆರವಣಿಗೆ
- ಅಖಂಡ ಭಾರತ ಸಂಕಲ್ಪ ದಿವಸ
ಚಿತ್ರದುರ್ಗ:
ದೇಶದ ಸಾರ್ವಭೌಮತ್ವ, ಅಖಂಡತೆ ಹಾಗೂ ಸಶಕ್ತ ಭಾರತದ ನಿರ್ಮಾಣಕ್ಕಾಗಿ ಯುವಪೀಳಿಗೆಯು ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರ್ ಹೇಳಿದರು.
ಹಿಂದೂ ಜಾಗರಣÁ ವೇದಿಕೆಯಿಂದ ನಗರದ ಆನೆಬಾಗಿಲು ಆವರಣದಲ್ಲಿ ಗುರುವಾರ ಸಂಜೆ ಅಖಂಡ ಭಾರತ ಸಂಕಲ್ಪ ದಿವಸ ಆಚ ರಣೆಯಲ್ಲಿ ಮಾತನಾಡಿದ ಅವರು, ಅಖಂಡ ಭಾರತದ ಕಲ್ಪನೆಯನ್ನು ನನಸು ಮಾಡುವಲ್ಲಿ ಯುವಜನತೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ.
ದೇಶದ ನೈಜ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮೂಲಕ ಸಶಕ್ತ ಹಾಗೂ ಸದೃಢ ಭಾರತವನ್ನು ನಿರ್ಮಿಸ ಬೇಕಿ ದೆ. ಯುವ ಜನರು ಮಾದಕ ವ್ಯಸನಗಳಿಂದ ದೂರವಿರಬೇಕು. ರಾಜ್ಯವನ್ನು ನಶಾ ಮುಕ್ತಗೊಳಿಸುವ ನಿಟ್ಟಿನಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ಕುರಿತು ಸುಳಿವು ಸಿಕ್ಕರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ನಾಗರಿಕರಿಗೆ ಮನವಿ ಮಾಡಿದ ರು.
ಸುಭಾಷ್‌ಚಂದ್ರ ಬೋಸ್ ಹಾಗೂ ಸ್ವಾಮಿ ವಿವೇಕಾನಂದರ ತತ್ವಗಳನ್ನು ಉದಾಹರಿಸಿದ ಅವರು, ಜಾತಿ, ಪಕ್ಷ, ಪ್ರಾಂತ ಹಾಗೂ ಭಾಷೆ ಭೇದಗಳನ್ನು ಮರೆತು ನಾವೆಲ್ಲರೂ ಒಂದು ಎಂಬ ಭಾವನೆಯಿಂದ ತಾಯಿ ಭಾರತಿಯ ಸೇವೆಗೆ ಸಿದ್ಧರಾಗಬೇಕಿದೆ. ಹಿಂದೂ ಜಾಗರಣ ವೇದಿಕೆ ಎಂದಿಗೂ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ.
ದೇಶಪ್ರೇಮಿಗಳಾದ ಪ್ರತಿ ನಾಗರಿಕನೂ ನಮ್ಮ ಬಂಧು, ಸಂತ ಶಿಶುನಾಳ ಶರೀ-À ಹಾಗೂ ಡಾ.ಎಪಿಜೆ ಅಬ್ದುಲ್‌ಕಲಾಂ ಅವರಂ ತಹ ಮಹನೀಯರನ್ನು ದೇಶ ಗೌರವಿಸುತ್ತದೆ. ರಾಷ್ಟçದ್ರೋಹವನ್ನು ಸಹಿಸಲಾಗದು ಹಾಗೂ ರಾಷ್ಟçಪ್ರೇಮ ಎತ್ತಿಹಿಡಿಯುವುದೇ ಮುಖ್ಯಗುರಿ ಎಂದರು.
ಕರ‍್ಯಕ್ರಮದಲ್ಲಿ ಸುಭಾಷ್ ಚಂದ್ರಬೋಸ್, ಭಗತ್‌ಸಿಂಗ್, ರಾಜಗುರು, ಡಾ.ಬಿ.ಆರ್.ಅಂಬೇಡ್ಕರ್, ಮದಕರಿ ನಾಯಕ, ವೀರ ವನಿ ತೆ ಒನಕೆ ಓಬವ್ವ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತಿತರ ವೀರರು,
ಸ್ವಾತಂತ್ರ‍್ಯ ಹೋರಾಟಗಾರರು, ದಾರ್ಶನಿಕರು, ಮಹನೀಯರ ಹೆಸರಲ್ಲಿ ಜೈಕಾರಗಳನ್ನು ಕೂಗುವ ಮೂಲಕ, ಸಶಕ್ತ ಹಾಗೂ ಅಖಂಡ ಭಾರತ ನಿರ್ಮಾಣದ ಸಂಕಲ್ಪವನ್ನು ಮಾಡ ಲಾಯಿತು. ವೇದಿಕೆ ಪ್ರಮುಖರಾದ ಹನುಮಂತಪ್ಪ, ರುದ್ರೇಶ್ ಇದ್ದರು.
ಸಂಕಲ್ಪ ದಿನದ ಅಂಗವಾಗಿ ನಗರದಲ್ಲಿ ಗುರುವಾರ ರಾತ್ರಿ ಹಿಂದೂ ಜಾಗರಣಾ ವೇದಿಕೆ ನೇತÊತ್ವದಲ್ಲಿ ಭಾರತ ಮಾತೆಯ ಭಾ ವಚಿತ್ರ ದೊಂದಿಗೆ ಆಯೋಜಿಸಿದ್ದ ಪಂಜಿನ ಮೆರವಣಿಗೆಗೆ ಆನೆಬಾಗಿಲು ಬಳಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ,s.k. ಬ ಸವರಾಜನ್ ಹಾಗೂ ಕಲ್ಲೇಶ್ ಅವರು ಚಾಲನೆ ನೀಡಿದರು. ನಗರದ ಮುಖ್ಯಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ದೇಶದ ಪ ರಂಪರೆ, ಸಮಗ್ರತೆ, ಏಕತೆ, ಅಹಿಂಸಾ ತತ್ವ, ಪ್ರಜಾಪ್ರಭುತ್ವ, ಸಂವಿಧಾನ, ದೇಶದ ಪರಂಪರೆ, ಸಂಸ್ಕೃತಿ ಕುರಿತು ಜಾಗÊತಿ ಮೂಡಿಸಲಾಯಿತು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿದರು. ಲೀಲಾಧರ ಠಾಕೂರ್, ಎ.ಮುರಳಿ, ಜಿತೇಂದ್ರ, ರುದ್ರೇಶ್,
ಯ
ರ‍್ರಿಸ್ವಾಮಿ, ಶ್ರೀನಿವಾಸ್, ಓಂಕಾರ್, ವೀಣಾ, ಎ.ರೇಖಾ ಮತ್ತಿತರರು ಮೆರವಣಿಗೆಯಲ್ಲಿ ಇದ್ದರು. ಮೆರಣಿಗೆಯುದ್ದಕ್ಕೂ ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆಗಳು ಮೊಳಗಿದವು.
ಮುಂದಿನ ಪೀಳಿಗೆಗೆ ದೇಶವನ್ನು ಭಾರತವನ್ನಾಗಿಯೇ ಉಳಿಸಬೇಕಾದರೆ, ದೇಶಭಕ್ತರ ಬಲಿದಾನ ಸಾರ್ಥಕವಾಗಬೇಕಾದರೆ ಭಾ ರತ ಮತ್ತೆ ಅಖಂಡವಾಗಲೇಬೇಕೆAದು ತಿಪ್ಪಾರೆಡ್ಡಿ ಹೇಳಿದರು. ದೇಶ ವಿಭಜನೆ ಸ್ವಾರ್ಥ, ಅಽಕಾರದ ದುರಾಸೆ, ಮೂರ್ಖ ನಿರ್ಣ ಯದಿಂದಾಗಿ ಅಖಂಡವಾಗಿದ್ದ ಭಾರತವನ್ನು ತುಂಡರಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.