ಚಿತ್ರದುರ್ಗದ ಮುರುಘಾಮಠದಲ್ಲಿ ಬುಧವಾರ ಆಯೋಜಿಸಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ನವ ವಧು-ವರರಿಗೆ ಬಸವಕುಮಾರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ ಆಶೀರ್ವದಿಸಿದರು. ಡಾ.ಕೆ.ಬಿ. ಗುಡಸಿ ಇದ್ದರು. 
ಚಿತ್ರದುರ್ಗ

ವಿಶ್ವಾಸ ಇದ್ದೊಡೆ ಜಗತ್ತೇ ಆನಂದಮಯ

ಪ್ರಮುಖ ಮುಖ್ಯಾಂಶಗಳು

  • ದುಂದು ವೆಚ್ಚದಿಂದ ರಾಷ್ಟಿçÃಯ ಸಂಪತ್ತು ಹಾಳು
  • ಸಾಮೂಹಿಕ ಕಲ್ಯಾಣದಲ್ಲಿ ಬಸವಕುಮಾರ ಸ್ವಾಮೀಜಿ ಅಭಿಮತ
  • ೧೨ನೇ ಶತಮಾನದ ವಚನ ಚಳವಳಿ

ಚಿತ್ರದುರ್ಗ:

ಗುರು-ಶಿಷ್ಯರು, ಸತಿ-ಪತಿ, ಸ್ನೇಹ, ಸಂಬAಧದಲ್ಲಿ ವಿಶ್ವಾಸ ಇದ್ದೊಡೆ ಜಗತ್ತೇ ಆನಂದಮಯವಾಗುತ್ತದೆ ಎಂದು ಮುರುಘಾಮಠ ದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮುರುಗಾಮಠದಲ್ಲಿ ಬುಧವಾರ ಆಯೋಜಿಸಿದ್ದ ೩೬ನೇ ವರ್ಷದ ೮ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದರು.
೧೨ನೇ ಶತಮಾನದ ವಚನ ಚಳವಳಿ ಕುಟುಂಬ, ಸಮಾಜ, ಮಾನವ ಸಂಬAಧ ಹೇಗಿರಬೇಕೆಂಬ ತತ್ವ ತಿಳಿಸಿದೆ. ಅವುಗಳನ್ನು ನಾವೆಲ್ಲರೂ ಅನುಸರಿಸಬೇಕು. ಅನಗತ್ಯ ದುಂದುವೆಚ್ಚ ಮಾಡಿದರೆ ರಾಷ್ಟಿçÃಯ ಸಂಪತ್ತನ್ನು ಹಾಳು ಮಾಡಿದಂತೆ. ಮೊದಲು ಇದಕ್ಕೆ ಕಡಿವಾಣ ಹಾಕಬೇಕು ಎಂದರು.
ಲಿA. ಮಲ್ಲಿಕಾರ್ಜುನ ಸ್ವಾಮೀಜಿ ಅವರು ಮಠದಲ್ಲಿ ಸಾಮೂಹಿಕ ಕಲ್ಯಾಣ ನಡೆಯಲು ಕಾರಣೀಭೂತರು. ಜಾತಕ, ಗಳಿಗೆ, ರಾಶಿ ನೋಡದೆ, ವಧು-ವರರು ವಿವಾಹವಾಗುತ್ತಿದ್ದಾರೆ. ಅವರ ಕುಟುಂಬ ವರ್ಗಕ್ಕೆ ಬಸವಾದಿ ಪ್ರಮಥರ ಕರುಣೆ ಪ್ರಾಪ್ತಿಯಾಗಲಿದೆ. ಮನುಷ್ಯ ಶ್ವಾಸ ಇರುವವರೆಗೂ ವಿಶ್ವಾಸದಿಂದಲೇ ಜೀವಿಸಬೇಕು ಎಂದು ಸಲಹೆ ನೀಡಿದರು.
ಶ್ರೀಮಠವು ಈ ಹಿಂದೆ ಮಹಾಲಯ ಅಮಾವಾಸ್ಯೆಯಂದು ೧೮೦ ಜೋಡಿ ವಿವಾಹ ಮಾಡಿಸಿದ ನಿದರ್ಶನವಿದೆ. ನಮ್ಮ ನಡೆ-ನುಡಿ ಶುದ್ಧವಾಗಿರದೆ, ಕಾಲ ಸರಿಯಿಲ್ಲ ಎನ್ನುವವರು ವಿಕಾರಿಗಳು. ಮನಸು ಕಲುಷಿತಗೊಂಡರೆ, ಅಹಂಕಾರದಿAದ ವರ್ತಿಸಿದರೆ, ಯಾವ ಪ್ರಯೋಜನವಿಲ್ಲ. ಕುಟುಂಬ, ಸಮಾಜ ಚೆನ್ನಾಗಿರಲು ನಿರಹಂಕಾರಿ, ಕರುಣಾಮಯಿ ಆಗಿರಬೇಕು ಎಂದು ಕಿವಿಮಾತು ಹೇಳಿದರು.
ಗುರು ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಶ್ರೀಮಠದ ಮಲ್ಲಿಕಾರ್ಜುನ ಶ್ರೀಗಳು ಜಯವಿಭವ ಸ್ವಾಮೀಜಿ ಸ್ಮರಣಾರ್ಥ ಸಾಮೂಹಿಕ ಕಲ್ಯಾಣ ಆರಂಭಿಸಿದರು. ಅದು ಕ್ರಮೇಣ ಪ್ರತಿ ತಿಂಗಳು ೫ನೇ ತಾರೀಕಿನಂದು ನಿರಂತರವಾಗಿ ನೆರವೇರುತ್ತಿದೆ. ಮಧ್ಯಕರ್ನಾಟಕ ಭಾಗದ ಹಲವರಿಗೆ ಅನುಕೂಲವಾಗಿದೆ ಎಂದರು.
ವೈಚಾರಿಕ, ವೈಜ್ಞ್ಞಾನಿಕ ಹಾಗೂ ಬಸವಾದಿ ಶರಣರ ಚಿಂತನೆ ಬಿತ್ತುವ ಕೆಲಸ ಶ್ರೀಮಠ ಮಾಡುತ್ತಿದೆ. ಅದ್ದೂರಿ, ಆಡಂಬರದ ಮದುವೆಗಳಿಂದಾಗಿ ಬಡ, ಮಧ್ಯಮ ವರ್ಗ ಸಾಲದ ಸುಳಿಗೆ ಸಿಲುಕಲಿದೆ. ಹೀಗಾಗಿ ಇಂತಹ ಆದರ್ಶದ ಮದುವೆಗೆ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಸಾಲಿಮಂಜಪ್ಪ ಮಾತನಾಡಿ, ಕಷ್ಟಪಟ್ಟು ಕಾಯಕ ಮಾಡಿದರೆ ಉತ್ತಮ -Àಲ ಭಗವಂತ ಕರುಣಿಸಲಿದ್ದಾನೆ ಎಂದರು.
ಎಸ್‌ಜೆಎA ವಿವಿ ಕುಲಪತಿ ಡಾ.ಕೆ.ಬಿ. ಗುಡಸಿ ಮಾತನಾಡಿ, ನವ ವಧು-ವರರು ಹೊಂದಾಣಿಕೆಯಿAದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ದೇಶಕ್ಕೆ ಕೊಡುಗೆ ನೀಡುವಂತಹ ಮಕ್ಕಳು ನಿಮಗೆ ಜನಿಸಲಿ ಎಂದು ಆಶಿಸಿದರು.
ಇದೇ ವೇಳೆ ಮೂರು ಜೋಡಿ ವಿವಾಹ ನೆರವೇರಿತು. ಡಾ. ಬಸವಪ್ರಭು ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪೈಲ್ವಾನ್ ತಿಪ್ಪೇಸ್ವಾಮಿ, ಉಮೇಶ್ ಪತ್ತಾರ್, ಲಿಂಗರಾಜ್ ಇತರರಿದ್ದರು.