- ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಲಿ
- ಜಿ¯್ಲÁ ಕಲ್ಲು ಕ್ವಾರೆ ಮತ್ತು ಕ್ರಷರ್ ಮಾಲೀಕರ ಸಂಘ ಒತ್ತಾಯ
- ಸರಕು-ಸಾಗಾಣಿಕೆ
ಚಿತ್ರದುರ್ಗ: ರಾಜ್ಯ ಸರ್ಕಾರ ೪೪ `ಎ' ಕಾಯ್ದೆ ಹಿಂಪಡೆದು ಮಾತುಕತೆ ಮೂಲಕ ಸಮಸ್ಯೆಗಳನ್ನು ಇತ್ಯರ್ಥ ಪಡಿಸದಿದ್ದರೆ ಕ್ರಷರ್ ಗಳ ಚಟುವಟಿಕೆ ಸ್ಥಗಿತಗೊಳಿಸಿ ಹೋರಾಟಕ್ಕೆ ಮುಂದಾಗುವುದಾಗಿ ಜಿ¯್ಲÁ ಕಲ್ಲು ಕ್ವಾರೆ ಮತ್ತು ಕ್ರಷರ್ ಮಾಲೀಕರ ಸಂಘ ಎಚ್ಚರಿಸಿದೆ.
ಗುತ್ತಿಗೆದಾರರು, ಕ್ರಷರ್‌ಗಳ ಮಾಲೀಕರ ಬಳಿ ಸರ್ಕಾರ ರಾಯಲ್ಟಿ ಸಂಗ್ರಹಿಸುತ್ತಿದೆ. ಇದರಿಂದ ನಮಗೆ ನಷ್ಟವಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಅಬ್ದುಲï ಮಜೀದ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಸರ್ಕಾರ ೪೪ `ಎ' ಕಾಯ್ದೆ ಹಿಂಪಡೆದು ಒಂದೇ ನೀತಿ ಅನುಸರಿಸಬೇಕು. ಆಂಧ್ರ ಪ್ರದೇಶ, ತಮಿಳುನಾಡಿನಿಂದ ಇಲ್ಲಿಗೆ ಜೆಲ್ಲಿ ಆಮ ದಾಗುತ್ತಿದೆ. ಆದರೆ, ಅವರಿಂದ ಯಾವುದೇ ತೆರಿಗೆ ಪಾವತಿಯಾಗುತ್ತಿಲ್ಲ. ಒಂದು ವರ್ಷದಿಂದ ನಮ್ಮ ಬೇಡಿಕೆಗಳನ್ನು ಈಡೇರಿ ಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿ ಸಿದರು.
ಸರ್ಕಾರಕ್ಕೆ ರಾಯಲ್ಟಿ ಪಾವತಿಸಲಾಗಿದೆ. ಆದರೂ ನಮಗೆ ಕಿರುಕುಳ ನಿಂತಿಲ್ಲ. ಸಾಲ ತೀರಿಸಲಾಗದೆ ಕ್ರಷರ್‌ಗಳ ಮಾಲೀಕರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ. ಆದ್ದರಿಂದ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಇನ್ನೂ ನಾಲ್ಕÊೆದು ದಿನ ಕಾದು ನೂತನ ಸಚಿವರಿಗೂ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಕಲ್ಲು ಗಣಿಗಾರಿಕೆ ಸಂಬಂಧ ಡಿಎಂಜಿ ಕಡೆಯಿಂದ ಪ್ರತಿ ವರ್ಷ ಆಡಿಟ್ ಆಗುತ್ತಿದೆ. ಹೀಗಾಗಿ ಕೆಇಬಿ ಶುಲ್ಕ ಪಾವತಿಸಿಕೊಳ್ಳುವುದ ನ್ನು ತಕ್ಷಣ ನಿಲ್ಲಿಸಬೇಕು. ೫೦ ಸಾವಿರ ರೂ. ಒಳಗಡೆ ಜಿಎಸ್‌ಟಿ ಶುಲ್ಕವಿದ್ದರೆ, ಇ-ವೇ ಬಿಲï ಅವಶ್ಯವಿಲ್ಲವೆಂದು ಕಾನೂನು ಹೇಳುತ್ತಿದ್ದರೂ ಪಾವತಿಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಮ್ಮ ಸರಕು-ಸಾಗಾಣಿಕೆ ಮಾಡುವ ಬಿಲ್ಲಿನ ಮೊತ್ತ ೨ ಸಾವಿರ ರೂ.ನಿಂದ ೧೫ ಸಾವಿರ ರೂ. ಒಳಗಡೆ ಇರಲಿದೆ ಎಂದು ಡಿಎಂಜಿ ಇಲಾಖೆ ತಿಳಿಸಿದ್ದು, ಇ-ವೇ ಬಿಲïನ ಅಗತ್ಯವಿಲ್ಲ. ಆದ್ದರಿಂದ ಈ ಪದ್ಧತಿ ರದ್ದುಪಡಿಸುವಂತೆ ಸರ್ಕಾರವನ್ನು ಕೋರಿದರು.
ಜಿ.ಸಿ. ಸುರೇಶ್‌ಬಾಬು ಮಾತನಾಡಿ, ಹೊರ ರಾಜ್ಯದಿಂದ ಬರುವ ಜೆಲ್ಲಿಗೆ ರಾಜ್ಯ ಸರ್ಕಾರ ತೆರಿಗೆ ವಸೂಲಿ ಮಾಡುತ್ತಿಲ್ಲ. ನಮ್ಮ ಉದ್ದಿಮೆ ಮೇಲೆ ಇಲ್ಲಸಲ್ಲದ ಕಾನೂನು ಜಾರಿಗೊಳಿಸಿ ಕಲ್ಲು ಗಣಿಗಾರಿಕೆ ಮತ್ತು ಸ್ಟೋನ್ ಕ್ರಷರ್‌ಗಳಿಗೆ ದಂಡ ವಿಽಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಕಾನೂನು ಬದ್ಧವಾಗಿ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದೆ. ಎಂಡಿಪಿ, ಜಿಎಸ್‌ಟಿ ಮೂಲಕ ಸರಕು ಪಡೆದು ಕ್ರಷಿಂಗ್ ಮಾಡಿ ಸಾಗಾಣಿಕೆ ಮಾಡುತ್ತಿದ್ದೇವೆ. ಕಾನೂನು ಬಾಹಿರವಾಗಿ ನಡೆಸುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ ಎಂದರು.
ಮೆದೇಹಳ್ಳಿ ಗ್ರಾಪಂ ಅಧ್ಯಕ್ಷ ನಿರಂಜನ್, ವೆಂಕಟೇಶ್, ಅಶೋಕ್‌ರೆಡ್ಡಿ, ಮಲ್ಲಿಕಾರ್ಜುನ್, ಅಭಿಷೇಕ್ ಇತರರಿದ್ದರು.