ಚಿತ್ರದುರ್ಗ ಎಸ್‌ಜೆಎಂಐಟಿಯಲ್ಲಿ ಆಯೋಜಿಸಿರುವ ಐದು ದಿನಗಳ ಆರ್‌ಟಿಎಲ್, ಐಪಿ ಇಂಟಿಗ್ರೇಶನ್ ಮತ್ತು ಎಸ್‌ಓಸಿ ಸೈನ್‌ಆ-ï` ಹ್ಯಾಂಡ್ಸ್ ಆನ್ ಬೂಟ್‌ಕ್ಯಾಂಪ್ ತರಬೇತಿಗೆ ಪ್ರಾಚಾರ್ಯ ಡಾ.ಪಿ.ಬಿ. ಭರತ್ ಸೋಮವಾರ ಚಾಲನೆ ನೀಡಿದರು. ಡಾ.ಕೆ.ಬಿ. ಸಿದ್ದೇಶ್, ಡಾ. ಎ.ಎಂ. ರಾಜೇಶ್, ಡಾ.ಎಸ್. ಚೇತನ್, ಪ್ರೊ.ಜಿ.ಆರ್. ನಂದಿನಿ, ಪ್ರೊ.ಕೆ.ದಿವ್ಯಾ, ಪ್ರೊ. ಆರ್. ಸುಷ್ಮಾ ಇದ್ದರು.
- ಸೆಮಿಕಂಡಕ್ಟರ್
- ಎಸ್‌ಜೆಎಂಐಟಿ
- ತಂತ್ರಜ್ಞಾನ
ಚಿತ್ರದುರ್ಗ: ದೇಶದಲ್ಲಿ ಸ್ಥಾಪನೆ ಆಗುತ್ತಿರುವ ಸೆಮಿಕಂಡಕ್ಟರ್ ಉತ್ಪಾದನಾ ಉದ್ಯಮ ಮುಂದಿನ ದಿನಗಳಲ್ಲಿ ತುಂಬಾ ಮಹತ್ವ ಪಡೆಯಲಿದೆ ಎಂದು ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ.ಭರತ್ ಹೇಳಿದರು.
ಕೇಂದ್ರದ ನಿಯೆಲೆಟ್ ಹಾಗೂ ಎಸ್‌ಜೆಎಂಐಟಿ ಎಲೆಕ್ಟಾçನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗÀದಿಂದ ಕಾಲೇಜಿನಲ್ಲಿ ಆಯೋಜಿ ಸಿರುವ ಐದು ದಿನಗಳ ಆರ್‌ಟಿಎಲ್, ಐಪಿ ಇಂಟಿಗ್ರೇಶನ್ ಮತ್ತು ಎಸ್‌ಓಸಿ ಸೈನ್‌ಆ-ï` ಹ್ಯಾಂಡ್ಸ್ ಆನ್ ಬೂಟ್‌ಕ್ಯಾಂಪ್ ತರಬೇತಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಸೆಮಿಕಂಡಕ್ಟರ್‌ನಿAದ ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗಲಿದೆ. ಕರ್ನಾಟಕ ದಲ್ಲಿ ನಿಯೆಲಿಟ್ ಸಂಸ್ಥೆ ೧೫೦ ವಿದ್ಯಾರ್ಥಿಗಳಿಗೆ ತರಬೇತಿಗೆ ಯೋಜನೆ ರೂಪಿಸಿದ್ದು, ನಮ್ಮ ಕಾಲೇಜಿನ ೯೦ ವಿದ್ಯಾರ್ಥಿಗಳು ತರ ಬೇತಿಗೆ ಆಯ್ಕೆಯಾಗಿದ್ದಾರೆ. ಈ ಕ್ಯಾಂಪ್ ವಿದ್ಯಾರ್ಥಿಗಳಿಗೆ ಉದಯೋನ್ಮುಖ ಕೌಶಲಾಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಸAಪನ್ಮೂಲ ವ್ಯಕ್ತಿ, ನಿಯೆಲಿಟ್ ಅಕಾಡೆಮಿಕ್ ಮುಖ್ಯಸ್ಥ ಎಸ್. ವಿಶ್ವನಾಥ ನಾಯಕ್ ಮಾತನಾಡಿ, ಈ ತರಬೇತಿಯಿಂದ ವಿದ್ಯಾ ರ್ಥಿಗಳು ಸೆಮಿಕಂಡಕ್ಟರ್ ಉತ್ಪಾದನಾ ಕಂಪನಿಗಳೊAದಿಗೆ ಸಂಪರ್ಕಿಸುವ ಅವಕಾಶ ಪಡೆಯಲಿದ್ದಾರೆ. ಪ್ರತಿಭಾವಂತರನ್ನು ಕಂಪನಿಗಳೇ ನೇರ ಆಯ್ಕೆ ಮಾಡಿಕೊಳ್ಳಲಿವೆ ಎಂದರು.
ಡಾ. ಕೆ.ಬಿ. ಸಿದ್ದೇಶ್, ಡಾ.ಎ.ಎಂ. ರಾಜೇಶ್, ಡಾ.ಎಸ್. ಚೇತನ್, ಪ್ರೊ.ಜಿ.ಆರ್. ನಂದಿನಿ, ಪ್ರೊ. ಕೆ. ದಿವ್ಯಾ, ಪ್ರೊ. ಆರ್. ಸುಷ್ಮಾ ಇದ್ದರು. ಪ್ರಣತಿ ಪ್ರಾರ್ಥಿಸಿದರು. ಶುಭಾ, ಚಿನ್ಮಯಿ ಸ್ವಾಗತಿಸಿದರು. ಆರ್.ಎಸ್. ಅನುಷಾ ನಿರೂಪಿಸಿದರು.