ಜಿಪಂ ಸಿಇಒ ಡಾ.ಎಸ್.ಆಕಾಶ್  
ಚಿತ್ರದುರ್ಗ

ಸಂಸದೀಯ ಕಾರ್ಯ ಕಲಾಪಗಳಲ್ಲಿ ಆಡಳಿತ, ಪ್ರತಿ ಪಕ್ಷಗಳ ಪಾತ್ರ ಹಿರಿದು

ತಾಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮ

ಚಿತ್ರದುರ್ಗ: ಸಂಸದೀಯ ಕಾರ್ಯಕಲಾಪಗಳಲ್ಲಿ ಆಡಳಿತ ಮತ್ತು ಪ್ರತಿ ಪಕ್ಷಗಳ ಪಾತ್ರ ಮಹತ್ವದ್ದಾಗಿದೆ ಎಂದು ಜಿಪಂ ಸಿಇಒ ಡಾ.ಎಸ್.ಆಕಾಶ್ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಽಕಾರ, ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ, ಸರಸ್ವತಿ ಕಾನೂನು ಮಹಾವಿದ್ಯಾಲಯ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಸಂಸದೀಯ ಕಾರ್ಯಕಲಾಪಗಳಿಗೆ ಮಹತ್ವದ ಸ್ಥಾನವಿದೆ. ಈ ಯುವ ಸಂಸತ್‌ನಲ್ಲಿ ನಡೆಯುವ ಚರ್ಚೆಗಳು ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಗುಣಮಟ್ಟದ ಚರ್ಚೆ ಹಾಗೂ ಕಾರ್ಯಕಲಾಪಗಳಿಗೆ ದಿಕ್ಸೂಚಿಯಾಗುವಂತೆ ಇರಬೇಕು ಎಂದರು.

ಡಾ.ಬಿ.ಆರ್.ಅAಬೇಡ್ಕರ್ ಹಾಗೂ ಸಂವಿಧಾನ ಪೀಠಿಕೆ ಚಿತ್ರಗಳಿಗೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಲಾಯಿತು. ಸಂವಿಧಾನ ಪೀಠಿಕೆ ಬೋಽಸಲಾಯಿತು. ಯುವ ಸಂಸತ್‌ನಲ್ಲಿ ಭಾಗವಹಿಸಿದ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ವಕೀಲರ ಸಂಘದ ಅಧ್ಯಕ್ಷ ಮಹೇಶ್ವರಪ್ಪ, ಸರಸ್ವತಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಎಂ.ಎಸ್. ಸುಧಾದೇವಿ ಮತ್ತಿತರರು ಇದ್ದರು.

ಜನಪರ ಕಾಳಜಿ,ಬದ್ಧತೆ ಬೆಳೆಸಿಕೊಳ್ಳಿ

ಇವತ್ತಿನ ಯುವಜನರು ನಾಳಿನ ದೇಶದ ಪ್ರಜೆಗಳು ಮತ್ತು ನಾಯಕರು. ಹಾಗಾಗಿ ಯುವಕರು ಜನಪ್ರತಿನಿಽಗಳಾಗಲು ಇಂದಿನಿAದಲೇ ಜನಪರ ಕಾಳಜಿ, ಬದ್ಧತೆ ಮತ್ತು ಆಸಕ್ತಿ ಬೆಳೆಸಿಕೊಳ್ಳಬೇಕು. ನಮ್ಮ ಸಂವಿಧಾನ ಪೀಠಿಕೆಯಲ್ಲಿ ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆ ಸ್ವಾತಂತ್ರ‍್ಯವನ್ನು ದೇಶದ ಎಲ್ಲ ಪ್ರಜೆಗಳಿಗೂ ನೀಡಲಾಗಿದೆ ಎಂದು ಆಕಾಶ್ ತಿಳಿಸಿದರು.

ಎಲ್ಲರಿಗೂ ಇದೆ ಪ್ರತಿಭಟಿಸುವ ಹಕ್ಕು

ಸರ್ಕಾರಗಳ ಯಾವುದೇ ನೀತಿ ಅಥವಾ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ತೀವ್ರ ಸ್ವರೂಪದ ಅನ್ಯಾಯ ಉಂಟಾದಾಗ, ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಯುವಕರು ತಾವು ಪ್ರತಿಪಾದಿಸುವ ಅಥವಾ ಬೆಂಬಲಿಸುವ ವಿಚಾರ ಸಾರ್ವಜನಿಕ ಹಾಗೂ ರಾಷ್ಟಿçÃಯ ಹಿತಾಸಕ್ತಿಗೆ ಪೂರಕವಾಗಿದೆಯೇ ಎಂಬುದನ್ನು ಸ್ವತಃ ಪರಿಶೀಲಿಸ ಬೇಕೆಂದು ಆಕಾಶ್ ಸಲಹೆ ನೀಡಿದರು.