`ಜ್ಯೋತಿರ್ಗಮಯ' ಸಮಾರಂಭದಲ್ಲಿ ಡಿಸಿ ಎಸ್.ರಮ್ಯಾ, ಶ್ರೀಕಾಂತ್‌ಪುಲಾರಿ, ಡಾ.ಬಿ.ವೈ.ಯುವರಾಜ್, ಡಿಎಸ್ ಡಾ.ಎಸ್.ಪಿ. ರವೀಂದ್ರ, ಡಾ.ಜಿ.ಎಚ್. ಮೇಘಾ, ಡಾ.ಚಂದ್ರಿಕಾ ಇತರರು ಇದ್ದರು.  
ಚಿತ್ರದುರ್ಗ

ವೈದ್ಯರಂತೆ ನರ್ಸಗಳ ಪಾತ್ರವೂ ಅತ್ಯಂತ ಮುಖ್ಯ

ಜಿಲ್ಲಾಽಕಾರಿ ಎಸ್.ರಮ್ಯಾ ಅಭಿಮತ

ಚಿತ್ರದುರ್ಗ: ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಂತೆಶುಶ್ರೂಷಕರ ಪಾತ್ರವೂ ಅತ್ಯಂತ ಮುಖ್ಯ ಮತ್ತು ಸಮಾನ ವಾದದ್ದಾಗಿದೆ ಎಂದು ಜಿಲ್ಲಾಽಕಾರಿ ಎಸ್. ರಮ್ಯಾ ಹೇಳಿದರು.

ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನರ್ಸಿಂಗ್ ಮಹಾ ವಿದ್ಯಾಲಯದ (ಸಿಎಂಸಿಆರ್‌ಐ)ಪ್ರಥಮ ವರ್ಷದ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ದೀಪ ಬೆಳಗುವ ಮತ್ತು ಪ್ರಮಾಣ ವಚನ ಸ್ವೀಕಾರ `ಜ್ಯೋತಿರ್ಗಮಯ' ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವೈದ್ಯರಿಗಿಂತಲೂ ಹೆಚ್ಚಿನ ಜವಾಬ್ದಾರಿ ನರ್ಸ್ಗಳ ಮೇಲಿರುತ್ತದೆ. ಕ್ಲಿಷ್ಟಕರ, ಗಂಡಾAತರಕಾರಿ ಸಂದರ್ಭಗಳಲ್ಲಿ ರೋಗಿಗಳನ್ನು ಒಡಹುಟ್ಟಿದವರಂತೆ ನರ್ಸ್ಗಳು ಕಾಳಜಿವಹಿಸಿ ನೋಡಿಕೊಳ್ಳುತ್ತಾರೆ. ಮನುಷ್ಯನ ಜೀವಕ್ಕಿಂತ ಅಮೂಲ್ಯವಾದದು ಮತ್ತೊಂದಿಲ್ಲ. ಹಣ ಕಳೆದುಕೊಂಡರೆ ಮತ್ತೆ ಗಳಿಸಬಹುದು, ಆದರೆ ಆರೋಗ್ಯ, ಜೀವ ಮರಳಿ ಪಡೆಯಲಾಗದು ಎಂದರು.

ಲೈ-ï‌ಸೈನ್ಸ್ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ರೋಗಿಗಳ ಜೀವ ಉಳಿಸುವಲ್ಲಿ ಡಾಕ್ಟರ್, ನರ್ಸ್ಗಳ ಪಾತ್ರ ಹಿರಿದಾಗಿದೆ. ನರ್ಸಿಂಗ್ ವೃತ್ತಿಯನ್ನು ಅತ್ಯಂತ ಗೌರವದಿಂದ ಹಾಗೂ ನಿಸ್ವಾರ್ಥ ಮನಸ್ಸಿನಿಂದ ನಿರ್ವಹಿಸಬೇಕು. ಈ ವೃತ್ತಿ ಸಮಾಜ ಸೇವೆಯಾಗಿದೆ. ಅತಿ ಹೆಚ್ಚು ಮಾನವೀಯತೆ ಹಾಗೂ ತಾಳ್ಮೆ ಅಗತ್ಯವಿರುವ ನರ್ಸಿಂಗ್ ಆಯ್ಕೆ ಮಾಡಿಕೊಂಡಿರುವುದಕ್ಕೆ ವಿದ್ಯಾರ್ಥಿಗಳು ಹೆಮ್ಮೆಪಡಬೇಕು ಎಂದರು.

ದೇಶದಲ್ಲಿ ತ್ಯಾಜ್ಯ ಉತ್ಪಾದನೆ ಪ್ರಮಾಣ ಆತಂಕಕಾರಿಯಾಗಿ ಏರುತ್ತಿದೆ. ಪರಿಸರ ಮಾಲಿನ್ಯ ತಡೆಗೆ ಜಿಲ್ಲೆಯ ಅಽಕಾರಿಗಳು ಹಾಗೂ ಆಯೋಜಕರು ಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳಲ್ಲಿ ಸರಳ ಉಡುಗೊರೆ ನೀಡುವ ಅಭ್ಯಾಸ ಬೆಳೆಸಿಕೊಳ್ಳಬೇಕೆಂದು ಡಿಸಿ ಹೇಳಿದರು.

ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ.ಬಿ.ವೈ. ಯುವರಾಜ್ ಮಾತನಾಡಿದರು. ಪ್ರಾಂಶುಪಾಲ ಕಿರಣ್‌ಕುಮಾರ್ ಪ್ರಮಾಣ ವಚನ ಬೋಽಸಿದರು. ನರ್ಸಿಂಗ್ ಕಾಲೇಜು ನೋಡಲ್ ಅಽಕಾರಿ ಡಾ. ಶಬ್ನಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿದ ನಿರ್ಗಮಿತ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರಶಸ್ತಿ -Àಲಕ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ವೈದ್ಯಕೀಯ ಕಾಲೇಜು ಅಽÃಕ್ಷಕಿ ಡಾ.ಜಿ.ಎಚ್. ಮೇಘಾ, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ, ಅಕಾಡೆಮಿಕ್ ರಿಜಿಸ್ಟಾರ್ ಡಾ. ಚಂದ್ರಿಕಾ, ನರ್ಸಿಂಗ್ ಕೌನ್ಸಿಲ್ ಆಡಳಿತಾಽಕಾರಿ ಎಸ್.ವಿ. ವಿಶ್ವಾಸ್, ಶುಶ್ರೂಷಕ ಕಾಲೇಜು ಅಽÃಕ್ಷಕಿ ಶಾಂತಮ್ಮ, ನರ್ಸಿಂಗ್ ಕಾಲೇಜು ಸಿಬ್ಬಂದಿ ಕರಿಬಸ್ಯಾನಾಯ್ಕ್, ಎಂ.ಟಿ. ಹನುಮಂತರೆಡ್ಡಿ, ಆರ್. ತಿಪ್ಪೇಸ್ವಾಮಿ, ಎನ್. ಲಲಿತಾ, ಸಿ.ಬಿ. ಸುಶ್ಮಿತಾ, ದೀಪಾ, ಟಿ. ಪುಷ್ಪಲತಾ ಮತ್ತಿತರರು ಇದ್ದರು.

ಅಂತಾರಾಷ್ಟಿçÃಯ ಮಟ್ಟದ ಪಠ್ಯ ಬೋಧನೆ

ಅಂತಾರಾಷ್ಟಿçÃಯ ಗುಣಮಟ್ಟದ ಪಠ್ಯಕ್ರಮವನ್ನು ರಾಜ್ಯದ ನರ್ಸಿಂಗ್ ಕಾಲೇಜುಗಳಲ್ಲಿ ಬೋಽಸಲಾಗುತ್ತಿದೆ. ರಾಜ್ಯದ ನರ್ಸಿಂಗ್ ಪದವೀಧರರಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ವರ್ಷದ ಬಿಎಸ್ಸಿ ನರ್ಸಿಂಗ್ ಕೋರ್ಸ್ಗಳಿಗೆ ಅತ್ಯುತ್ತಮ ಬೇಡಿಕೆ ಬಂದಿದೆ. ಕೆಇಎ ಮೂಲಕ ನಡೆದ ಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲೇ ಶೇ.೯೯ ಸೀಟುಗಳು ಭರ್ತಿಯಾಗಿವೆ. ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ನರ್ಸಿಂಗ್ ಸೀಟುಗಳನ್ನು ಗರಿಷ್ಠ ೨೫೦ಕ್ಕೆ ಹೆಚ್ಚಿಸಲಾಗಿದೆ ಎಂದು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ರಿಜಿಸ್ಟಾರ್ ಶ್ರೀಕಾಂತ್‌ಪುಲಾರಿ ಹೇಳಿದರು.

ರಾಜ್ಯದಲ್ಲಿ ಪ್ರತಿವರ್ಷ ೭೦ ಸಾವಿರ ನರ್ಸಿಂಗ್ ಪದವೀಧರರು ಹೊರಬರುತ್ತಿದ್ದರೂ ಕೂಡ, ಜಾಗತಿಕ ಮಟ್ಟದಲ್ಲಿ ನರ್ಸ್ಗಳಿಗೆ ಭಾರಿ ಬೇಡಿಕೆ ಇರುವುದರಿಂದ ಉದ್ಯೋಗ ಕೊರತೆ ಕಾಡುವುದಿಲ್ಲ. ನರ್ಸ್ಗಳಿಗೆ ಕೌಶಲ ಹಾಗೂ ವಿದೇಶಿ ಉದ್ಯೋಗಾವಕಾಶಗಳಿಗೆ ಅಗತ್ಯವಿರುವ -ೆ್ರಂಚ್, ಜಪಾನೀಸ್, ಜರ್ಮನ್ ಸೇರಿ ವಿವಿಧ ಭಾಷೆಗಳ ಉಚಿತ ತರಬೇತಿಯನ್ನು ಸರ್ಕಾರದಿಂದ ನೀಡಲಾಗುತ್ತದೆ. ಸುರಕ್ಷಿತ ವಿದೇಶಿ ವಲಸೆ ಕುರಿತು ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.

ಹೊಸ ಡಿಸಿ ಕಚೇರಿ ಕಟ್ಟಡ ಹಸ್ತಾಂತರ ಪೂರ್ಣವಾದ ಕೂಡಲೇ ನರ್ಸಿಂಗ್ ಹಾಗೂ ಅಲೈಡ್ ಕೋರ್ಸ್ಗಳನ್ನು ಅಲ್ಲಿ ನಡೆಸಲಾಗುವುದು. ಇತ್ತೀಚಿನ ಸವಾಲುಗಳನ್ನು ಎದುರಿಸಲು ಐಸಿಯು ಹಂತ-೨ ಮತ್ತು ಹಂತ-೩ರಲ್ಲಿ ಕಾರ್ಯನಿರ್ವಹಿಸಲು ವಿಶೇಷ ಕ್ರಿಟಿಕಲ್ ಕೇರ್ ಕೋರ್ಸ್ ಪರಿಚಯಿಸಲಾಗುತ್ತಿದೆ ಎಂದು ಶ್ರೀಕಾಂತ್‌ಪುಲಾರಿ ಮಾಹಿತಿ ನೀಡಿದರು.

ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಸಂಪೂರ್ಣ ಕಾರ್ಯವಿಧಾನವನ್ನು ಡಿಜಿಟಲೀಕರಣಗೊಳಿಸಲಾಗಿದೆ. ನೋಂದಣಿ, ನವೀಕರಣ, ಎನ್‌ಒಸಿ ಹಾಗೂ ಪ್ರಮಾಣಪತ್ರ ಸೇರಿ ಎಲ್ಲ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ ಎಂದರು.