ಚಿತ್ರದುರ್ಗ ಡಿಡಿಪಿಐ ಕಚೇರಿ ಚಿತ್ರ  
ಚಿತ್ರದುರ್ಗ

ಎಸ್ಸೆಸ್ಸೆಲ್ಸಿ ಪಾಸಾಗುವವರ ಸಂಖ್ಯೆ ಹೆಚ್ಚಳ ನಿರೀಕ್ಷೆ

ಪ್ರಮುಖ ಮುಖ್ಯಾಂಶಗಳು

  • ೧೦ನೇ ಸ್ಥಾನದೊಳಗೆ ಚಿತ್ರದುರ್ಗ ಜಿಲ್ಲೆಯ -Àಲಿತಾಂಶ ಗುರಿ
  • ವಿದ್ಯಾರ್ಥಿಗಳ ಸಿದ್ಧತೆಗೆ ನಡೆದಿದೆ ಸಾಕಷ್ಟು ಕಸರತ್ತು
  • ಆಂತರಿಕ ಅಂಕಗಳ ಸೇರ್ಪಡೆ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ರಾಜ್ಯದಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಉತ್ತೀರ್ಣ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ನಿರೀಕ್ಷಿಸಲಾಗಿದೆ. ಸಿಬಿಎಸ್‌ಸಿ, ಐಸಿಎಸ್‌ಸಿ ಮಾದರಿ ಆಂತರಿಕ ಅಂಕಗಳ ಸೇರ್ಪಡೆಯಿಂದಾಗಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಶೇ.೯೦ ಮೀರುವ ಸಾಧ್ಯತೆ ಇದೆ.
ಒಟ್ಟು ಆರುನೂರ ಇಪ್ಪತ್ತೆÊದು ಅಂಕಗಳಲ್ಲಿ, ಆಂತರಿಕ ೧೨೫ ಹಾಗೂ ಥಿಯರಿ ೫೦೦ ಅಂಕಗಳಿವೆ. ಇದೇ ಪ್ರಥಮ ಬಾರಿಗೆ ಆಂ ತರಿಕ ಅಂಕಗಳೊAದಿಗೆ ವಿದ್ಯಾರ್ಥಿ ಫಲಿತಾಂಶ ನಿರ್ಧಾರವಾಗಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರ ಸಂಖ್ಯೆ ಅಽಕವಾಗಲಿದೆ ಎಂದು ಶಿಕ್ಷಣ ಇಲಾಖೆ ಅಽಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದುರ್ಗ ಜಿಲ್ಲೆ ಈ ಬಾರಿ ಕನಿಷ್ಠ ೧೦ನೇ ಸ್ಥಾನದೊಳಗೆ ಇರಲಿದೆ ಎಂದು ವಿಶ್ವಾಸ ವ್ಯಕ್ತವಾಗಿದೆ. ಕಳೆದ ಸಾಲಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ೨೧,೪೮೧ ವಿದ್ಯಾರ್ಥಿಗಳ ಪೈಕಿ ೧೩,೫೭೯ ಮಂದಿ ಉತ್ತೀರ್ಣರಾಗಿದ್ದರು. ರಾಜ್ಯ ಮಟ್ಟದಲ್ಲಿ ೨೩ನೇ ಸ್ಥಾನಕ್ಕೆ ಕು ಸಿದಿದ್ದ -Àಲಿತಾಂಶ ಸುಧಾರಣೆಗೆ ಇಲಾಖೆ ಅಽಕಾರಿಗಳು, ಶಿಕ್ಷಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಪರೀಕ್ಷೆಗೆ ನೋಂದಾಯಿಸಿರುವ ೨೩,೬೯೨ವಿದ್ಯಾರ್ಥಿಗಳ ಪೈಕಿ ೨೫೩೨ ವಿದ್ಯಾರ್ಥಿಗಳು ಶೇ.೭೫ ಹಾಜ ರಾತಿ ಕೊರತೆ ಕಾರಣಕ್ಕೆ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ೨೧,೩೬೦ ವಿದ್ಯಾರ್ಥಿಗಳು ಹಾಗೂ ೩,೨೦೭ ಖಾಸಗಿ ಮತ್ತು ಪು ನರಾವರ್ತಿತ ವಿದ್ಯಾರ್ಥಿಗಳು ಸಹಿತ ಜಿಲ್ಲೆಯಲ್ಲಿ ೨೩,೬೯೨ ಮಂದಿ ಮಾ.೧೮ರಿಂದ ಏಪ್ರಿಲ್ ೨ ರವರೆಗೆ ನಡೆಯಲಿರುವ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಜಿಲ್ಲೆಯಲ್ಲಿ ೮೪ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಶತಾಯ ಗತಾಯ ೧೦ನೇ ಸ್ಥಾನದೊಳಗೆ ಫಲಿತಾಂಶ ತರುವ ಗುರಿಯೊಂದಿಗೆ ಜಿಪಂ ಸಿಇಒ ಡಾ.ಎಸ್.ಆಕಾಶ್ ನಿರ್ದೇಶನದಂತೆ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತೆಯ ಒಂದು ಪರೀಕ್ಷೆಯನ್ನು ವೆಬ್‌ ಕಾಸ್ಟಿಂಗ್ ಸಹಿತ ಮುಖ್ಯಪರೀಕ್ಷೆ ಮಾದರಿಯಲ್ಲೇ ಜಿಲ್ಲೆಯ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯ ಹೋಗಲಾಡಿಸಲು ಪ್ರಯತ್ನಿಸಲಾಗಿದೆ.
ಟಾರ್ಗೆಟ್ ಹಂಡ್ರೆಡ್
ಕಳೆದ ಬಾರಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಚಿತ್ರದುರ್ಗ ಜಿಲ್ಲೆಯ ನೂರು ಶಾಲೆಗಳನ್ನು ಗುರುತಿಸಿ, ಅವುಗಳೂ ಸೇರಿ ಒ ಟ್ಟಾರೆ ಜಿಲ್ಲೆಯ ಫಲಿತಾಂಶ ಸುಧಾರಣೆ ಪ್ರಯತ್ನಗಳು ನಿರಂತರ ನಡೆದಿವೆ.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರೂ ಸಹ ಉತ್ತಮ ಅಂಕಗಳೊAದಿಗೆ ತೇರ್ಗಡೆಯಾಗಬೇಕೆಂಬ ಉದ್ದೇ ಶದಿಂದ ಮಿಷನ್ ೪೦ ಪ್ಲಸ್ ಹಾಗೂ ೫೦ ಪ್ಲಸ್ (ಇತರೆ ವಿಷಯಗಳಲ್ಲಿ ೪೦, ಕನ್ನಡದಲ್ಲಿ ೫೦ ಅಂಕ)ಯೋಜನೆ ಅನುಷ್ಠಾನಗೊಳಿಸಲಾಗಿದೆ.
ಗುಂಪು ಅಧ್ಯಯನ, ವಿಶೇಷ ತರಗತಿ ಹೀಗೆ ಸಾಕಷ್ಟು ಕಸರತ್ತು ನಡೆದಿದೆ. ಸುಗಮ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಮಂಡಳಿ ನಿರ್ದೇಶಕರು ಮಾ.೧೧ರಂದು ರಾಜ್ಯದ ಎಲ್ಲ ಜಿಲ್ಲೆಗಳ ಸಂಬAಽಸಿದ ಅಽಕಾರಿಗಳೊಂದಿಗೆ ವಿಸಿ ನಡೆಸಲಿದ್ದಾರೆ.
ಪರೀಕ್ಷಾ ಸಮಯ
ಆಯಾ ಪರೀಕ್ಷಾ ದಿನಗಳಂದು ಬೆಳಗ್ಗೆ ೯ಕ್ಕೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಹಾಜರಿರಬೇಕು. ೯.೩೦ಕ್ಕೆ ಲಾಂಗ್ ಬೆಲ್‌ ಆಗುತ್ತದೆ. ೯. ೫೦ಕ್ಕೆ ಕೊಠಡಿ ಮೇಲ್ವಿಚಾರಕರು ಉತ್ತರ ಪತ್ರಿಕೆ ಕೊಡಬೇಕು. ೧೦ಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆ ವಿತರಿಸ ಬೇಕಾಗುತ್ತದೆ. ಎಲ್ಲ ಪರೀಕ್ಷಾ ಕೊಠಡಿಗಳಲ್ಲೂ ಸಿಸಿ ಕ್ಯಾಮೆರಾಗಳಿದ್ದು, ಪರೀಕ್ಷೆ ಸಂಪೂರ್ಣ ವೆಬ್‌ಕಾಸ್ಟಿಂಗ್ ಆಗಲಿದೆ.
ಜಿಲ್ಲಾ ಹಾಗೂ ರಾಜ್ಯಮಟ್ಟದ ಕೇಂದ್ರದಲ್ಲಿ ದೃಶ್ಯಾವಳಿ ವೀಕ್ಷಣೆ ನಿರಂತರವಾಗಿರುತ್ತದೆ. ಈಗಾಗಲೇ ಉತ್ತರ ಪತ್ರಿಕೆ ಸಹಿತ ಪರೀ ಕ್ಷಾ ಸಾಮಗ್ರಿಯನ್ನು ಜಿಲ್ಲಾ ಕೇಂದ್ರಗಳಿಗೆ ಪೂರೈಕೆ ಮಾಡಲಾಗಿದೆ. ಮೂಲ ಸೌಲಭ್ಯಗಳೊಂದಿಗೆ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪೊ ಲೀಸ್ ಹಾಗೂ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಮೊಬೈಲ್ ಸಹಿತ ಯಾವುದೇ ಎಲೆಕ್ಟಾçನಿಕ್ ವಸ್ತುಗಳನ್ನು ವಿದ್ಯಾರ್ಥಿಗಳು ಕೊಠಡಿಗೆ ತೆಗೆದುಕೊಂಡು ಹೋಗುವಂತಿಲ್ಲ.
----
ತಾಲೂಕು- ಪರೀಕ್ಷಾ ಕೇಂದ್ರಗಳ ಸಂಖ್ಯೆ - ವಿದ್ಯಾರ್ಥಿಗಳ ಸಂಖ್ಯೆ- ಖಾಸಗಿ/ಪುನರಾವರ್ತಿತ ವಿದ್ಯಾರ್ಥಿಗಳ ಸಂಖ್ಯೆ
ಚಳ್ಳಕೆರೆÀ - ೨೦ -೪೬೨೨ -೭೨೫-
ಚಿತ್ರದುರ್ಗ -೨೩ -೬೦೮೧ -೯೭೭
ಹಿರಿಯೂರು -೧೩ -೩೧೯೩ -೫೦೬
ಹೊಳಲ್ಕೆರೆ -೯ -೨೬೨೪ -೩೦೦
ಹೊಸದುರ್ಗ -೧೧ -೨೭೯೬ -೩೯೧
ಮೊಳಕಾಲ್ಮೂರು -೮ -೨೦೪೪ -೩೦೮
---
"

--ಕೋಟ್---ಜಿಲ್ಲೆಯ ಪರೀಕ್ಷಾ ಫಲಿತಾಂಶ ಸುಧಾರಣೆಗೆ ನಾನಾ ಪ್ರಯತ್ನಗಳಾಗಿವೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಬರೆಯಬೇಕು, ಹಬ್ಬದ ರೀತಿ ಸಂಭ್ರಮಿಸಬೇಕು.