ಚಿತ್ರದುರ್ಗದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಕಿಡ್ಡಿ ಫೀಟ್ ಕಾರ್ಯಕ್ರಮದಲ್ಲಿ ಬಿ. ವಿಜಯಕುಮಾರ್, ಡಾ.ಪೃಥ್ವೀಶ್, ಎನ್.ಜಿ. ತಿಪ್ಪೇಸ್ವಾಮಿ, ಸುನೀತಾ ವಿಜಯಕುಮಾರ್ ಇದ್ದರು. 
ಚಿತ್ರದುರ್ಗ

ಮಕ್ಕಳ ಬೆಳವಣಿಗೆ ಮೇಲೆ ಮೊಬೈಲ್ ದುಷ್ಪರಿಣಾಮ

ಚಿತ್ರದುರ್ಗ: ಸ್ಮಾರ್ಟ್-ೆÇÃನ್‌ಗಳು ಮಕ್ಕಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿದೆ ಎಂದು ನಗರದ ಮಕ್ಕಳ ತಜ್ಞ ಡಾ. ಪÊಥ್ವೀಶ್ ಕಳವಳ ವ್ಯಕ್ತಪಡಿಸಿದರು.
ನಗರದ ಪ್ರತಿಷ್ಠಿತ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಸೋಮವಾರ`ಕಿಡ್ಡಿ ಫೀಟ್' ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, -ÉÇÃನ್‌ಗಳಿಂದ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತಿದೆ. ಪಾಲಕರು ಎಚ್ಚರಿಕೆ ವಹಿಸಬೇಕು ಎಂದರು.
ಸಂಸ್ಥೆ ಕಾರ್ಯದರ್ಶಿ ಬಿ. ವಿಜಯಕುಮಾರ್ ಮಾತನಾಡಿ, ಇವತ್ತಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಪೋನ್ ಮತ್ತು ಟಿವಿ ಹಾವಳಿಯಿಂದ ಬಾಲ್ಯದ ತಮ್ಮ ನೈಜ ಸಂತೋಷವನ್ನು ಮಕ್ಕಳು ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಸಂಸ್ಥೆ ನಿರ್ದೇಶಕಿ ಸುನೀತಾ ವಿಜಯಕುಮಾರ್, ಶಾಲೆ ಮುಖ್ಯಶಿಕ್ಷಕ ಎನ್.ಜಿ. ತಿಪ್ಪೇಸ್ವಾಮಿ ಇತರರು ಇದ್ದರು.