ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಣ ದಿನಾಚರಣೆ ಹಾಗೂ ವಿಜ್ಞಾನ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರೊ.ಜಿ.ಎನ್. ಮಲ್ಲಿಕಾರ್ಜುನಪ್ಪ, ಕೆ.ಎಂ. ವೀರೇಶ್, ಚಳ್ಳಕೆರೆ ರ‍್ರಿಸ್ವಾಮಿ, ಇ. ರುದ್ರಮುನಿ, ಪ್ರಾಚಾರ್ಯೆ ಎಂ.ಆರ್. ಜಯಲಕ್ಷಿ÷್ಮÃ ಇತರರು ಇದ್ದರು.
- ಜಿ.ಎನ್. ಮಲ್ಲಿಕಾರ್ಜುನಪ್ಪ ಅಭಿಮತ
- ಶಿಕ್ಷಕರಿಗೆ ವಿಜ್ಞಾನ ರತ್ನ ಪ್ರಶಸ್ತಿ ಪ್ರದಾನ
- ಚಿತ್ರದುರ್ಗ ಸೈನ್ಸ್ ಫೌಂಡೇಷನ್
ಚಿತ್ರದುರ್ಗ: ಶಿಕ್ಷಣದಿಂದ ವಂಚಿತರ ಬದುಕಿನಲ್ಲಿ ಅಕ್ಷರದ ಜ್ಯೋತಿ ಬೆಳಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಅಧ್ಯಕ್ಷ ಜಿ.ಎನ್. ಮಲ್ಲಿಕಾರ್ಜುನಪ್ಪ ಹೇಳಿದರು.
ರಾಜ್ಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ನಿವೃತ್ತ ಶಿಕ್ಷಕರ ಒಕ್ಕೂಟ ಹಾಗೂ ಫೌಂಡೇಷನ್‌ನಿAದ ನಗರದ ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ವಿಜ್ಞಾನ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದ ಅಭಿವೃದ್ಧಿ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಆದ್ಯತೆ ಮೇಲೆ ಅವಲಂಬನೆಯಾಗಿದೆ. ಗುರುವಿಗೆ ಪೂಜ್ಯನೀಯ ಸ್ಥಾನ ನೀಡುವ ಸಮಾಜ ಸರ್ವೋಚ್ಛ ಸ್ಥಾನಕ್ಕೆ ತಲುಪುತ್ತದೆ. ಸಮಾಜದಲ್ಲಿ ಅಸಮತೋಲನ ಮತ್ತು ಅರಾಜಕತೆ ಹೆಚ್ಚಾದರೆ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿ ನಿಲ್ಲುವುದಿಲ್ಲ ಎಂದರು.
ಸAಸ್ಕೃತಿ, ಶಿಕ್ಷಣ ಹಾಗೂ ಜ್ಞಾನದ ಕ್ರಿಯಾಶೀಲತೆ ಮೂಲಕ ಬದುಕನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಬೇಕು. ವಿದ್ಯಾರ್ಥಿಗಳಿಗೆ ಕೇವಲ ಅಂಕ ಗಳಿಸುವ ಶಿಕ್ಷಣವಲ್ಲ, ಬದುಕಿಗೆ ಉಪಯೋಗವಾಗುವ ಶಿಕ್ಷಣ ಕೊಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸಂಸ್ಕೃತಿ ಚಿಂತಕರಾಗಿರುವ ಶಿಕ್ಷಕರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಆರು ವಿಜ್ಞಾನ ಶಿಕ್ಷಕರಿಗೆ ೨೦೨೬-೨೭ನೇ ಸಾಲಿನ ವಿಜ್ಞಾನ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್, ಪ್ರಾಚಾರ್ಯೆ ಎಂ.ಆರ್. ಜಯಲಕ್ಷಿ÷್ಮÃ, ನಿವೃತ್ತ ಪ್ರಾಚಾರ್ಯ ಪ್ರೊ.ಟಿ.ಎಚ್. ಕೃಷ್ಣಮೂರ್ತಿ, -Ëಂಡೇಶನ್ ಖಜಾಂಚಿ ಕೆ.ವಿ. ನಾಗಲಿಂಗರೆಡ್ಡಿ, ಕಾರ್ಯದರ್ಶಿ ಎಚ್‌ಎಸ್‌ಟಿಸ್ವಾಮಿ ಇದ್ದರು.
ಶಾಲೆಗಳಲ್ಲಿ ರೋಬೋಟಿಕ್ ಶಿಕ್ಷಕರ ಪ್ರವೇಶವಾಗುತ್ತಿದೆ. ಬೆಂಗಳೂರಿನ ೨ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ೨೦೧೯ರಲ್ಲೇ ಪ್ರಾ ಯೋಗಿಕವಾಗಿ ರೋಬೋಟಿಕ್ ಶಿಕ್ಷಕರ ಮೂಲಕ ಕಲಿಸಲಾಗಿತ್ತು. ಆದರೆ, ಶಿಕ್ಷಣ ತಜ್ಞರ ವರದಿ ಪ್ರಕಾರ ಯಂತ್ರಗಳು ಚಲಿಸ ಬಲ್ಲವೇ ಹೊರತು ಮನುಷ್ಯನಂತೆ ಪರಿಣಾಮಕಾರಿಯಾಗಿ ಬೋಧನೆ ಮಾಡುವುದು ಅಸಾಧ್ಯ. ಆದ್ದರಿಂದ ತರಗತಿಯಲ್ಲಿ ಶಿಕ್ಷಕರ ಭೌತಿಕ ಉಪಸ್ಥಿತಿ ಬಹಳ ಮುಖ್ಯ ಎಂದು -Ëಂಡೇಶನ್ ಉಪಾಧ್ಯಕ್ಷ ಚಳ್ಳಕೆರೆ ರ‍್ರಿಸ್ವಾಮಿ ಅಭಿಪ್ರಾಯಪಟ್ಟರು.
ಶಿಕ್ಷಣದಲ್ಲಿ ಪ್ರಾಥಮಿಕ ಹಂತ ಬಹಳ ಮುಖ್ಯ. ಸರ್ಕಾರ ಉನ್ನತ ಶಿಕ್ಷಣಕ್ಕೆ ನೀಡುವ ಆದ್ಯತೆಯನ್ನೇ ಪ್ರಾಥಮಿಕ ಶಿಕ್ಷಣಕ್ಕೂ ನೀಡ ಬೇಕು. ಅಡಿಪಾಯ ಗಟ್ಟಿಯಾಗಿದ್ದರೆ ಕಟ್ಟಡ ಸದÊಢವಾಗಿರುತ್ತದೆ
ಇ. ರುದ್ರಮುನಿ. ನಿರ್ದೇಶಕ, ಚಿತ್ರದುರ್ಗ ಸೈನ್ಸ ಫೌಂಡೇಷನ್
ವಿಜ್ಞಾನರತ್ನ ಪ್ರಶಸ್ತಿ ಪುರಸ್ಕೃತರು.
ಸಿ.ಜಿ. ಹಾಲೇಶ್, ಚವಲಿಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲೆ,
ಟಿ.ಜೆ. ವೆಂಕಟೇಶ್, ಪಾಲವ್ವನಹಳ್ಳಿ ಸರ್ಕಾರಿ ಪ್ರೌಢಶಾಲೆ
ಬಿ.ಕೆ. ಪ್ರಮೀಳಾ, ಹೊಸದುರ್ಗ ಸರ್ಕಾರಿ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗ
ಸೈಯದ್‌ಸಾದಿಕ್ ಬಾಷಾ, ಚಿತ್ರಹಳ್ಳಿ ಶರಣಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ
ಎಸ್.ಕೆ. ವಿರೂಪಾಕ್ಷ , ಮೊಳಕಾಲ್ಮೂರು ಸರ್ಕಾರಿ ಪಪೂ ಕಾಲೇಜು ಪ್ರೌಢಶಾಲಾ ವಿಭಾಗ
ಬಿ.ಎ. ಮಮತಾದೇವಿ, ದೇವರೆಡ್ಡಿಹಳ್ಳಿ ಗ್ರಾಮಾಂತರ ಪ್ರೌಢಶಾಲೆ