ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೆ.ಎಂ. ಶಿವಸ್ವಾಮಿ, ಟಿ. ಮಂಜುಳಾ ಶ್ರೀಕಾಂತ್, ಸೈಯ್ಯದ್ ಅನ್ವರ್, ಜಿ.ಎಂ. ತಿಪ್ಪೇಸ್ವಾಮಿ ಇತರರಿದ್ದರು. Rajyothsava
ಚಿತ್ರದುರ್ಗ

ಬಳಕೆಯಿಂದ ಕನ್ನಡ ಭಾಷೆ ಶ್ರೀಮಂತ

ನಾಯಕನಹಟ್ಟಿಯಲ್ಲಿ ಕರ್ನಾಟಕ ರಾಜ್ಯೋತ್ಸವ

ನಾಯಕನಹಟ್ಟಿ: ಕನ್ನಡ ಕೇವಲ ಘೋಷಣೆಗಳಿಗೆ ಸೀಮಿತವಾಗದೇ ನಿತ್ಯ ಬಳಸಿದಲ್ಲಿ ಮಾತ್ರ ಭಾಷಾ ಸಂಸ್ಕೃತಿ ಶ್ರೀಮಂತ ವಾಗುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಕಸಾಪ, ವರ್ತಕರ ಸಂಘ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮನೆ, ಶಾಲೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಿತ್ಯ ವಾತನಾಡಬೇಕು. ಮಕ್ಕಳಿಗೆ ಕನ್ನಡದ ಕಥೆ, ಕವನ, ಗಾದೆ, ಜಾನಪದ ಹಾಡುಗಳನ್ನು ಪರಿಚಯಿಸಬೇಕು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದರು.

ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ ದೊರೆಯಬೇಕು. ಒಂದು ಭಾಷೆ ನಶಿಸಿದರೆ ಒಂದು ಪರಂಪರೆಯೇ ನಶಿಸುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಕನ್ನಡ ಬೆಳೆಯಬೇಕು. ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಮತ್ತು ಉನ್ನತ ಶಿಕ್ಷಣದ ಜ್ಞಾನ ಸಂಪನ್ಮೂಲ ಲಭ್ಯವಾಗಬೇಕು ಎಂದರು.

ಡಿಜಿಟಲ್ ಜಗತ್ತಿನಲ್ಲಿ ಕನ್ನಡದ ಬಳಕೆ ಹೆಚ್ಚಾಗಬೇಕು. ಯುವಜನತೆ ಕನ್ನಡ ಪುಸ್ತಕ ಓದುವ, ಕನ್ನಡ ಬರೆಯುವ ಮತ್ತು ಸಾವಾಜಿಕ ಜಾಲತಾಣಗಳಲ್ಲಿ ಕನ್ನಡ ಬಳಸಿದರೆ ಭಾಷೆ ಬೆಳವಣಿಗೆ ಸಾಧ್ಯ. ಜಗತ್ತಿನ ಜ್ಞಾನ ಪಡೆಯಲು ಬಹುಭಾಷಾ ಅರಿವು ಅಗತ್ಯ. ಆದರೆ, ಬೇರೆ ಭಾಷೆಗಳ ಒತ್ತಡದಲ್ಲಿ ಮಾತೃಭಾಷೆ ಕಡೆಗಣನೆಯಾಗಬಾರದು ಎಂದರು.

ಪಪಂ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯ್ಯದ್‌ಅನ್ವರ್, ಹಟ್ಟಿಮಲ್ಲಪ್ಪನಾಯಕ ಸಂದ ಅಧ್ಯಕ್ಷ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ, ಕಸಾಪ ಹೋಬಳಿ ಅಧ್ಯಕ್ಷ ಬಿ. ಕಾಟಯ್ಯ, ಉಪಾಧ್ಯಕ್ಷ ಟಿ. ಬಸಣ್ಣ, ವಾಜಿ ಅಧ್ಯಕ್ಷ ಬಿ.ಎಂ. ತಿಪ್ಪೇರುದ್ರಸ್ವಾಮಿ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಗಂಗಾಧರಪ್ಪ, ಎಂವೈಟಿ ಸ್ವಾಮಿ, ಗೋವಿಂದೇಗೌಡ, ಎ.ಟಿ. ಚನ್ನಕೇಶವ, ಅಶ್ವಕ್ ಅಹಮ್ಮದ್ ಇದ್ದರು.

ಭುವನೇಶ್ವರಿ ಮೆರವಣಿಗೆ

ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ಪಟ್ಟಣದ ಹಟ್ಟಿಮಲ್ಲಪ್ಪನಾಯಕ ವೃತ್ತದಿಂದ ಆರಂಭಗೊಂಡು ವಾಲ್ಮೀಕಿ ವತ್ತದ ಬಳಿ ಭುವನೇಶ್ವರಿಗೆ ಆರತಿ ಮಾಡಿ ಮುಖ್ಯ ರಸ್ತೆಯ ಮೂಲಕ ಒಳಮಠದ ಮುಂಭಾಗದಿಂದ ಮತ್ತೆ ಹಟ್ಟಿಮಲ್ಲಪ್ಪನಾಯಕ ವೃತ್ತದಲ್ಲಿ ಕೊನೆಗೊಂಡಿತು. ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದ್ದವು.