ಪಾಳು ಬಿದ್ದಿರುವ ಚಿತ್ರದುರ್ಗ ಗುರುಭವನ  
ಚಿತ್ರದುರ್ಗ

ಕಾಗದದಲ್ಲೇ ಉಳಿದ ಗುರುಭವನ

ವರ್ಷವಾದರೂ ಸಲ್ಲಿಕೆಯಾಗದ ಎಸ್ಟಿಮೇಟ್

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಜಿಲ್ಲಾ ಕೇಂದ್ರದಲ್ಲಿ ನೂತನ ಗುರುಭವನ ನಿರ್ಮಿಸಬೇಕೆಂಬ ಶಿಕ್ಷಕರ ಬಹುವರ್ಷಗಳ ಬೇಡಿಕೆ ಈಡೇರಲು ಇನ್ನೂ ಕಾಲ ಕೂಡಿಬರುತ್ತಿಲ್ಲ. ನಗರದ ಪ್ರೈಂ ಲೊಕೇಶನ್‌ನಲ್ಲಿರುವ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ೧೯೯೪ರಲ್ಲಿ ನಿರ್ಮಿಸಿದ್ದ ಗುರುಭವನ ಈಗ ಸಂಪೂರ್ಣ ಪಾಳುಬಿದ್ದು, ಹಾಳು ಕೊಂಪೆಯAತಾಗಿದೆ.

ಅAದಾಜು ೧೦೦/೧೦೦ ಚದರಡಿ ವಿಸ್ತೀರ್ಣದ ಈ ಹಳೆಯ ಕಟ್ಟಡವನ್ನು ಕೆಡವಿ, ನೂತನ ಗುರುಭವನ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿತ್ತು. ಇದಕ್ಕಾಗಿ ೨ ಕೋಟಿ ರೂ. ಅನುದಾನ ನೀಡುವುದಾಗಿ ಕಳೆದ ವರ್ಷದ ಶಿಕ್ಷಕರ ದಿನಾಚರಣೆಯಲ್ಲಿ ಮಾಜಿ ಸಚಿವ ದಿ. ಡಿ. ಸುಧಾಕರ್ ಘೋಷಿಸಿದ್ದರು. ೨ ಕೋಟಿ ರೂ. ಸಾಲದು, ಕನಿಷ್ಠ ೫ ಕೋಟಿ ರೂ. ಬೇಕೆಂದು ಎಂಎಲ್‌ಸಿ ಕೆ.ಎಸ್. ನವೀನ್ ಅಂದು ಸಚಿವರನ್ನು ಒತ್ತಾಯಿಸಿದ್ದಲ್ಲದೆ, ತಮ್ಮ ಶಾಸಕರ ನಿಽಯಿಂದಲೂ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಬಳಿಕ ಸುಧಾಕರ್ ಅವರು ಅಽಕಾರಿಗಳು ಮತ್ತು ಶಿಕ್ಷಕರ ಸಂಘಟನೆ ಪದಾಽಕಾರಿಗಳೊಂದಿಗೆ ಸ್ಥಳ ಪರಿಶೀಲನೆಯನ್ನೂ ನಡೆಸಿದ್ದರು.

ಆದರೆ, ಜಿಲ್ಲೆಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರ ತರಬೇತಿ, ಸಾಂಸ್ಕೃತಿಕ ಚಟುವಟಿಕೆ, ಶೈಕ್ಷಣಿಕ ಕಾರ್ಯಾಗಾರ ಮತ್ತು ಶಿಬಿರಗಳಿಗೆ ಅಗತ್ಯವಿರುವ ಹೊಸ ಗುರುಭವನ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿರುವುದು ಶಿಕ್ಷಕರ ವಲಯದಲ್ಲಿ ಬೇಸರ ಮೂಡಿಸಿದೆ. ಜಿಲ್ಲಾ ಕೇಂದ್ರದಲ್ಲಿ ಭವನದ ಕೊರತೆ ಅವರನ್ನು ಕಾಡುತ್ತಿದೆ.

ಜಿಲ್ಲಾ ಚುನಾವಣಾ ಆಯೋಗದ ವಶದಲ್ಲಿ

ಈ ಹಳೆಯ ಕಟ್ಟಡ ಕಳೆದ ಏಳೆಂಟು ವರ್ಷಗಳಿಂದ ಜಿಲ್ಲಾ ಚುನಾವಣಾ ಆಯೋಗದ ವಶದಲ್ಲಿದ್ದು, ಇವಿಎಂ ಸಹಿತ ಚುನಾವಣೆ ಪರಿಕರಗಳನ್ನು ಇಡಲು ಬಳಸಲಾಗುತ್ತಿತ್ತು. ನಿರ್ವಹಣೆ ಇಲ್ಲದೆ ಹಂತಹAತವಾಗಿ ಶಿಥಿಲಗೊಂಡ ಕಟ್ಟಡ ದುರಸ್ತಿಗೂ ಸಾಧ್ಯವಾಗದ ದುಸ್ಥಿತಿಗೆ ತಲುಪಿತು. ನಗರದ ಹೊರವಲಯದ ಕುಂಚಿಗನಾಳ್ ಬಳಿ ಆಯೋಗ ಕಟ್ಟಿಸಿದ್ದ ನೂತನ ಗೋದಾಮಿಗೆ ಇವಿಎಂಗಳನ್ನು ಸ್ಥಳಾಂತರಿಸಿದ ಬಳಿಕ ಹಳೆಯ ಭವನ ಖಾಲಿಯಾಗಿ ಇನ್ನಷ್ಟು ಹಾಳಾಗಿದೆ. ಯಾವುದಕ್ಕೂ ಪ್ರಯೋಜನಕ್ಕೆ ಬಾರದಂತಾಗಿರುವ ಈ ಕಟ್ಟಡವನ್ನು ಮರಳಿ ಪಡೆಯಲು ಜಿಲ್ಲಾ ಗುರುಭವನ ಸಮಿತಿ ಹಿಂದೇಟು ಹಾಕಿದೆ.

ವರ್ಷವಾದರೂ ಸಲ್ಲಿಕೆಯಾಗದ ಎಸ್ಟಿಮೇಟ್

ಸಂಪೂರ್ಣ ಹಾಳಾದ ಈ ಕಟ್ಟಡ ತೆರವುಗೊಳಿಸಿ ಅದೇ ಜಾಗದಲ್ಲಿ ನೆಲ ಮಹಡಿಯೊಂದಿಗೆ ಎರಡು ಅಂತಸ್ತಿನ ಹೊಸ ಕಟ್ಟಡ ನಿರ್ಮಿಸಲು ಪ್ಲ್ಯಾನ್ ಮತ್ತು ಅಂದಾಜು ವೆಚ್ಚ ಸಿದ್ಧಪಡಿಸುವಂತೆ ಲೋಕೋಪಯೋಗಿ ಇಲಾಖೆ ಅಽಕಾರಿಗಳಿಗೆ ಸೂಚಿಸಲಾಗಿತ್ತು. ೧೫ ದಿನದೊಳಗೆ ಅಂದಾಜು ವೆಚ್ಚದ ವಿವರ ಸಲ್ಲಿಸುವ ಸಾಧ್ಯತೆಯಿದೆ ಎಂದು ಹಿಂದಿನ ಜಿಲ್ಲಾಽಕಾರಿ ಟಿ. ವೆಂಕಟೇಶ್ ಸಹ ತಿಳಿಸಿದ್ದರು.

ಆದರೆ, ವರ್ಷ ಕಳೆದರೂ ಲೋಕೋಪಯೋಗಿ ಇಲಾಖೆ ಇದುವರೆಗೆ ಎಸ್ಟಿಮೇಟ್ ಸಲ್ಲಿಸಿಲ್ಲ. ಕಟ್ಟಡ ಯಾವ ರೀತಿ ಇರಬೇಕು, ಏನೆಲ್ಲ ಅಗತ್ಯಗಳಿವೆ ಎಂಬ ಮಾಹಿತಿಯನ್ನು ಶಿಕ್ಷಣ ಇಲಾಖೆ ಅಽಕಾರಿಗಳು ನೀಡದ ಕಾರಣ ಎಸ್ಟಿಮೇಟ್ ಹಾಗೂ ಪ್ಲ್ಯಾನ್ ಸಿದ್ಧಪಡಿಸಲು ಸಾಧ್ಯವಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ.

ಸಚಿವರ ಭರವಸೆ

ಶಿಕ್ಷಕರ ಸಂಘದ ಪದಾಽಕಾರಿಗಳು ಈ ಕುರಿತು ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಶೀಘ್ರದಲ್ಲೇ ಸಭೆ ನಡೆಸಿ ಕಟ್ಟಡ ನಿರ್ಮಾಣದ ಕುರಿತು ತೀರ್ಮಾನ ಕೈಗೊಳ್ಳೋಣ, ಅನುದಾನ ಎಷ್ಟಾದರೂ ಸರಿ, ಹಣದ ಚಿಂತೆ ಬೇಡ ಎಂದು ಸಚಿವರು ಭರವಸೆ ನೀಡಿದ್ದಾರೆ. ಆದರೂ, ಈ ಹಿಂದೆ ಸುಧಾಕರ್ ಅವರು ಘೋಷಿಸಿದ ೨ ಕೋಟಿ ರೂ. ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ಶೀಘ್ರದಲ್ಲೇ ಜಿಲ್ಲಾ ಗುರುಭವನ ಸಮಿತಿ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದ್ದಾರೆ. ಹೊಸ ಭವನ ನಿರ್ಮಾಣಕ್ಕೆ ಶೀಘ್ರದಲ್ಲೇ ಕ್ರಮ ವಹಿಸಲಾಗುತ್ತದೆ.
| ಎಂ.ಆರ್. ಮಂಜುನಾಥ್, ಡಿಡಿಪಿಐ, ಚಿತ್ರದುರ್ಗ
ಹೊಸ ಗುರುಭವನ ನಿರ್ಮಾಣಕ್ಕೆ ಕನಿಷ್ಠ ೧೦ ಕೋಟಿ ರೂ. ಗಳಾದರೂ ಬೇಕು. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರನ್ನು ಶಿಕ್ಷಕರ ಸಂಘಟನೆಗಳ ಪದಾಽಕಾರಿಗಳು ಭೇಟಿ ಮಾಡಿ ಚರ್ಚಿಸಿದ್ದೇವೆ. ಶೀಘ್ರದಲ್ಲೇ ಸಭೆ ಕರೆದು ಮಾತನಾಡುವ ಭರವಸೆ ನೀಡಿದ್ದಾರೆ.
| ಜಿ.ಬಿ. ಮಹಾಂತೇಶ್, ಅಧ್ಯಕ್ಷರು, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘ,ಚಿತ್ರದುರ್ಗ.